ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯ ಚಿತ್ರಗಳು ನಮ್ಮ ಕಣ್ಣು ಮತ್ತು ಬುದ್ಧಿಗೆ ಮೋಸ ಮಾಡುವಂತೆ ವಿನ್ಯಾಸಗೊಳಿಸಲಾದ ಚಿತ್ರಗಳಾಗಿರುತ್ತವೆ. ಇವು ಒಂದು ರೀತಿಯಲ್ಲಿ ನಮ್ಮ ಬುದ್ಧಿವಂತಿಕೆಯನ್ನು ಅಳೆಯುವ ಸರಳ ಪರೀಕ್ಷೆಗಳಾಗಿ ಜನಪ್ರಿಯತೆ ಪಡೆದಿದ್ದು, ಅವುಗಳನ್ನು ಆಗಾಗ್ಗೆ ಬಳಸಲಾಗುತ್ತದೆ.
ಆಪ್ಟಿಕಲ್ ಇಲ್ಯೂಷನ್ ನಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ. ನಮ್ಮ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವುಗಳನ್ನು ಬಳಸಬಹುದು.
ದೃಷ್ಟಿ ಭ್ರಮೆಯ ನಿಯಮಿತ ಅಭ್ಯಾಸವು ನಮ್ಮ ಬುದ್ಧಿ ಮಟ್ಟ ವನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಇದು ನಮ್ಮಲ್ಲಿ ಉತ್ತಮ ಏಕಾಗ್ರತೆಯ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ನಿಮ್ಮ ಮೆದುಳಿಗೆ ತ್ವರಿತವಾಗಿ ಒಂದು ವ್ಯಾಯಾಮ ಮಾಡಲು ನೀವು ಬಯಸುವುದಾದರೆ, ಇದೀಗ ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಸ್ವೀಕರಿಸಿ.
ಮೇಲೆ ಶೇರ್ ಮಾಡಿರುವ ಚಿತ್ರವು ಸರ್ಕಸ್ ಟೆಂಟ್ ದೃಶ್ಯವನ್ನು ತೋರಿಸುತ್ತದೆ, ಅಲ್ಲಿ ಒಬ್ಬ ವ್ಯಕ್ತಿ ಅತಿಥಿಗಳ ಎತ್ತರವನ್ನು ಪರಿಶೀಲನೆ ಮಾಡುವುದನ್ನು ನಾವು ನೋಡಬಹುದು. ಈ ಸರ್ಕಸ್ ಗೆ ಮಕ್ಕಳಿಗೆ ಪ್ರವೇಶ ಇಲ್ಲ. ಆದರೆ ಹೇಗೋ ಇಬ್ಬರು ಮಕ್ಕಳು ಈ ಗುಂಪಿನೊಳಗೆ ನುಸುಳಿದರು. ಈಗ ನಿಮಗೆ ಸವಾಲು ಏನೆಂದರೆ ನಾಲ್ಕು ಸೆಕೆಂಟ್ ಸಮಯದಲ್ಲಿ ಆ ಇಬ್ಬರು ಮಕ್ಕಳನ್ನು ನೀವು ಗುರ್ತಿಸಬೇಕು.
ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ಒಳ್ಳೆಯದಾಗಲಿ! ಇದು ಒಂದು ಟ್ರಿಕ್ಕಿ ಪ್ರಶ್ನೆ ಅಥವಾ ಸವಾಲಾಗಿದ್ದು ಅದು ನಿಮ್ಮ ಮೆದುಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತದೆ ಮತ್ತು ನಿಮ್ಮ ವೀಕ್ಷಣಾ ಕೌಶಲ್ಯದ ಮಟ್ಟವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅದು ಸಹಾಯವನ್ನು ಸಹಾ ಮಾಡುತ್ತದೆ. ಇನ್ನೇಕೆ ತಡ ಆ ಇಬ್ಬರು ಮಕ್ಕಳು ಎಲ್ಲಿದ್ದಾರೆ ಪತ್ತೆ ಹಚ್ಚಿ.