Home » ಮತ್ತೊಬ್ಬ ನಿರ್ಮಾಪಕನಿಂದ ಸುದೀಪ್ ಮೇಲೆ ಆರೋಪ: ಹಣ ವಾಪಸ್ ಕೊಡಿ ಎಂದು ನಿರ್ಮಾಪಕನ ಮನವಿ

ಮತ್ತೊಬ್ಬ ನಿರ್ಮಾಪಕನಿಂದ ಸುದೀಪ್ ಮೇಲೆ ಆರೋಪ: ಹಣ ವಾಪಸ್ ಕೊಡಿ ಎಂದು ನಿರ್ಮಾಪಕನ ಮನವಿ

by Suddi Mane
0 comment

ಸ್ಯಾಂಡಲ್ವುಡ್ ನಟ ಸುದೀಪ್ ಮತ್ತು ನಿರ್ಮಾಪಕ ಕುಮಾರ್ ನಡುವಿನ ವಿವಾದ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಕಿಚ್ಚ ಸುದೀಪ್ ಅವರು ತಾವು ಕುಮಾರ್ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈಗ ವಿವಾದದ ಬೆನ್ನಲ್ಲೇ ಮತ್ತೊಬ್ಬ ನಿರ್ಮಾಪಕ, ಸುದೀಪ್ ಅವರ ಜೊತೆ ಹುಚ್ಚ ಸಿನಿಮಾ ನಿರ್ಮಾಣ ಮಾಡಿದ್ದ ರೆಹಮಾನ್ ಅವರು ಸುದೀಪ್ ನ ನಂಬಿ ನಾನು ಮೋಸ ಹೋದೆ, ನನಗೆ ನನ್ನ ಹಣ ವಾಪಸ್ ಕೊಡಿಸಿ ಎಂದು ಮನವಿಯನ್ನು ಮಾಡಿದ್ದಾರೆ. ಈಗ ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಹುಚ್ಚ ಸಿನಿಮಾ ಯಶಸ್ಸನ್ನು ಪಡೆದಿತ್ತು, ಆ ಸಿನಿಮಾ ನಾನು ಇಷ್ಟಪಟ್ಟು ಮಾಡಿದ್ದೆ. ಅಣ್ಣಾವ್ರು ಸಹಾ ಸಿನಿಮಾ ಮೆಚ್ಚಿದ್ದರು. ಈ ಸಿನಿಮಾ ಆದ ಮೇಲೆ ವಿಷ್ಣುವರ್ಧನ್ ಮತ್ತು ನನ್ನ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡೋಣ ಎಂದು ಸುದೀಪ್ ಅವರು ಹಿಂದಿ ಸಿನಿಮಾದ ರೈಟ್ಸ್ ತರೋಕೆ ಹೇಳಿದರು. ಹತ್ತು ಲಕ್ಷ ಕೊಟ್ಟು ರೈಟ್ಸ್ ತಂದೆ. ಆದರೆ ವಿಷ್ಣು ಸರ್ ಆ ಸಿನಿಮಾಕ್ಕೆ ಹಿಂದೇಟು ಹಾಕಿದ್ರು. ಅನಂತರ ಅಮಿತಾಬ್ ಬಚ್ಚನ್ ಅವರ ಸಿನಿಮಾ ರೈಟ್ಸ್ ತನ್ನಿ ಅಂದ್ರು, ಅದು ತಂದೆ ಆದರೆ ಸಿನಿಮಾ ಆಗಲಿಲ್ಲ.

ಮನೆಯಲ್ಲಿ ಎಲ್ರೂ ಹುಚ್ಚ ಸಿನಿಮಾ ಟೈಟಲ್ ನಿಮಗೆ ಎಫೆಕ್ಟ್ ಆಯ್ತಾ ಅಂದರು. ಸುದೀಪ್ ಶೂಟಿಂಗ್ ನಡೀತಿದ್ದ ಕಡೆ ಹೋಗಿ ಮಾತಾಡಿದೆ. ಅವರು ಈಗ ಸಿನಿಮಾ ಮಾಡೋಣ, ಆಗ ಸಿನಿಮಾ ಮಾಡೋಣ ಅಂತ ಮುಂದೆ ಹಾಕಿದ್ರು. ಸುದೀಪ್ ಗೆ 4.5 ಲಕ್ಷ ಹಣ ಕೊಟ್ಟಿದ್ದೆ ಅದರಲ್ಲಿ 1.8 ಲಕ್ಷ ಕೊಟ್ಟಿದ್ದಾರೆ. ಅವರನ್ನು ಭೇಟಿ ಮಾಡಲು ಹೋದರೆ ಅವರಿಲ್ಲ ಎಂದರು. ಜನ್ಮದಿನದ ದಿನ ಹೋದ್ರೆ ದೂರದಲ್ಲಿ ಕೂರಿಸಿದ್ದರು.

ಅವರ ಹುಚ್ಚ ಸಿನಿಮಾ ಮಾಡಿದ್ದೇ ತಪ್ಪಾ? ನಾನು ಸುದೀಪ್ ಮೇಲೆ ಎಲ್ಲೂ ಆರೋಪ ಮಾಡಿಲ್ಲ. ಟಿವಿಯಲ್ಲಿ ಕುಮಾರ್ ಅವರನ್ನು ನೋಡಿದ ಮೇಲೆ ನನಗೂ ನ್ಯಾಯ ಸಿಗಬಹುದು ಅಂತ ಬಂದಿದ್ದೇನೆ. ಅವರ ಮಾತು ಕೇಳಿ ಸಿನಿಮಾ ರಿಮೇಕ್ ಮಾಡೋಕೆ ರೈಟ್ಸ್ ತಂದು ಸಾಲ ಆಗಿದೆ. ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದೇನೆ. ನನ್ನ ಹಣ ವಾಪಸ್ ಕೊಡಿ ಎಂದು ರೆಹಮಾನ್ ಅಬರು ಮನವಿಯನ್ನು ಮಾಡಿಕೊಂಡಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies