ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ಸೋಶಿಯಲ್ ನೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಲ್ಲಿ ಅಡಗಿರುವ ರಹಸ್ಯಗಳನ್ನು ಹುಡುಕುವುದು ಸವಾಲಿನ ಪ್ರಶ್ನೆಯಾಗಿರುತ್ತದೆ. ಇದೇ ವೇಳೆ ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತೆ ಮತ್ತು ಚುರುಕುಗೊಳಿಸುತ್ತೆ.
ನಿಮ್ಮ ಮೆದುಳಿಗೆ ಕೆಲಸವನ್ನು ನೀಡುವ ಜೊತೆಗೆ ನಿಮ್ಮ ದೃಷ್ಟಿಗೂ ಒಂದು ಸವಾಲಾಗುತ್ತೆ.
ಇಂದು ನಾವು ನಿಮಗೆ ಅಂತಹುದೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ತಂದಿದ್ದು, ಅದರಲ್ಲೊಂದು ಪಕ್ಷಿಯು ಮರೆಯಾಗಿದೆ. ನೀವು ಈ ಚಿತ್ರದಲ್ಲಿ ಪಕ್ಷಿ ಎಲ್ಲಿದೆ ಅಂತ ಹುಡುಕಬೇಕು. ನೀವು ಪಕ್ಷಿಯನ್ನು ಹುಡುಕಿದರೆ ನಿಮ್ಮನ್ನು ಮೇಧಾವಿ ಎಂದು ಪರಿಗಣಿಸಲಾಗುವುದು. ಇಲ್ಲಿ ಹಕ್ಕಿಯನ್ನು ಕಂಡು ಹಿಡಿಯುವುದು ಸುಲಭದ ಕೆಲಸವಲ್ಲ. ಈಗ ನಿಮಗೆ ಟಾಸ್ಕ್ ಅನ್ನು ನೀಡುತ್ತಿದ್ದೇವೆ.
ಈ ಚಿತ್ರದಲ್ಲಿ ಅಡಗಿರುವ ಹಕ್ಕಿ ಎಲ್ಲಿದೆ ಎಂದು ಕಂಡುಹಿಡಿಯಿರಿ. ಆದರೆ ಒಂದು ಷರತ್ತು ಏನೆಂದರೆ ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ ಎಂದು ನೋಡಿ. ಹಾಗೇನಾದರೂ ಆದರೆ ಖಂಡಿತ ನಿಮ್ಮ ಬುದ್ಧಿಮತ್ತೆ ಮತ್ತು ನೋಟ ಸಿಕ್ಕಾಪಟ್ಟೆ ಚುರುಕಾಗಿದೆ ಎಂದರ್ಥ. ಒಂದು ವೇಳೆ ನಿಗಧಿತ ಸಮಯದಲ್ಲಿ ಕಂಡು ಹಿಡಿಯಲಾಗದಿದ್ದರೆ ನಿಧಾನವಾಗಿ ಪರೀಕ್ಷಿಸಿ ನೋಡಿ ಖಂಡಿತ ನಿಮಗೆ ಹಕ್ಕಿ ಕಾಣುವುದು.