ಕಳೆದ ಕೆಲವು ದಿನಗಳಿಂದಲೂ ನಟ ಮಹೇಶ್ ಬಾಬು ಮಗಳು ಸಿತಾರ ಘಟ್ಟಮನೇನಿ ಹೆಸರು ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಸಿತಾರ ಇದೀಗ ಒಂದು ಆಭರಣ ಕಂಪನಿಯ ರಾಯಭಾರಿಯಾಗಿ ಜಾಹೀರಾತಿನಲ್ಲಿ ನಟಿಸಿದ್ದು, ಈ ಜಾಹೀರಾತಿನ ಫೋಟೋಗಳು ಟೈಮ್ ಸ್ಕ್ವೇರ್ ನಲ್ಲಿ ಪ್ರದರ್ಶನಗೊಂಡ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಸಿತಾರಾ ಫೋಟೋಗಳು ಸಹಾ ಸಾಕಷ್ಟು ವೈರಲ್ ಆಗಿದೆ.
ಭಾರತೀಯ ಸಿನಿಮಾ ನಟರಲ್ಲಿ ಮೊದಲ ಬಾರಿಗೆ ಚಿಕ್ಕ ವಯಸ್ಸಿಗೆ ಇಂತದೊಂದು ದೊಡ್ಡ ಜಾಹೀರಾತಿನಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆಯನ್ನು ಈಗ ಸಿತಾರ ತಮ್ಮದಾಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗದಲ್ಲಿ ಸಿತಾರ ಶೇರ್ ಮಾಡುವ ಪೋಟೋಗಳು, ಡ್ಯಾನ್ಸ್ ವೀಡಿಯೋಗಳು ವೈರಲ್ ಆಗಿ, ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯುತ್ತದೆ. ಒಬ್ಬ ಸಿನಿಮಾ ನಟಿಯ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸಿತಾರ ಅವರನ್ನು ಬಹಳಷ್ಟು ಜನ ಫಾಲೋ ಮಾಡುತ್ತಿದ್ದಾರೆ.
ಈಗ ಸಿತಾರ ಮೊದಲ ಬಾರಿಗೆ ಜಾಹೀರಾತಿನಲ್ಲಿ ನಟಿಸಲು ಪಡೆದಿರುವ ಸಂಭಾವನೆಯ ವೆಚ್ಚ ಸಿಕ್ಕಾಪಟ್ಟೆ ಅಚ್ಚರಿಯನ್ನು ಮೂಡಿಸಿದೆ. ಏಕೆಂದರೆ ಪುಟ್ಟ ಹುಡುಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಒಬ್ಬ ಸಿನಿಮಾ ನಟಿಗಿಂತ ಕಡಿಮೆ ಏನಿಲ್ಲ ಎನ್ನುವ ಹಾಗೆ ಬರೋಬ್ಬರಿ ಒಂದು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಇದು ಸಿತಾರ ಗಳಿಸಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಸಿತಾರ ಮಹೇಶ್ ಬಾಬು ನಟಿಸಿರುವ ಸರ್ಕಾರುವಾರಿ ಪಾಟ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.