ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಅವರು ಆಗಾಗ ಕೆಲವು ವಿಚಾರಗಳಿಗೆ ಸಂಬಂಧಪಟ್ಟ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುವುದು ಸಹಾ ಸಾಮಾನ್ಯವಾದ ವಿಚಾರವಾಗಿದೆ. ಆದರೆ ಇಂದು ಅವರು ಶೇರ್ ಮಾಡಿರುವ ಪೋಸ್ಟ್ ಒಂದು ಈಗ ವಿಶೇಷ ಆಸಕ್ತಿಯನ್ನು ಕೆರಳಿಸಿದೆ...
ಇಂದು ಬೆಳಿಗ್ಗೆಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕನಾಗಿರುವ ಸಲಾರ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ. ಟೀಸರ್ ಬಿಡುಗಡೆಯ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾಗಳಲ್ಲಿ ಹಿಂ ಸೆ ಯನ್ನು ಆಕರ್ಷಕವಾಗಿ ತೋರಿಸುವ ವಿಚಾರವಾಗಿ ಟ್ವೀಟ್ ಒಂದನ್ನು ಮಾಡಿದ್ದು, ಅದರ ಮೂಲಕ ಅವರು ತಮ್ಮ ಅನಿಸಿಕೆಯನ್ನು ಶೇರ್ ಮಾಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ಎಲ್ಲೂ ಸಲಾರ್ ಸಿನಿಮಾದ ಹೆಸರನ್ನು ಹೇಳಿಲ್ಲ. ಆದರೆ ಟೀಸರ್ ಬಿಡುಗಡೆಯ ಸ್ವಲ್ಪ ಸಮಯದ ನಂತರ ಅವರು ಟ್ವೀಟ್ ಮಾಡಿರುವುದು ಈಗ ಬಹಳಷ್ಟು ಜನರಲ್ಲಿ ಒಂದು ಅನುಮಾನವನ್ನು ಮೂಡಿಸಿರುವುದು ಖಂಡಿತ ಸುಳ್ಳಲ್ಲ. ಅವರು ಮಾಡಿದ ಟ್ವೀಟ್ ಈಗ ವೈರಲ್ ಆಗಿದೆ. ಅನೇಕರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪರೋಕ್ಷವಾಗಿ ಸಲಾರ್ ಬಗ್ಗೆ ಮಾತನಾಡಿದ್ದಾರೆ ಎಂದೇ ಹೇಳುತ್ತಿದ್ದಾರೆ.
ವಿವೇಕ್ ತಮ್ಮ ಟ್ವೀಟ್ ನಲ್ಲಿ, ಈಗ ಸಿನಿಮಾದಲ್ಲಿ ವಿಪರೀತ ಹಿಂ ಸೆಯನ್ನು ವೈಭವೀಕರಣ ಮಾಡುವುದನ್ನೂ ಪ್ರತಿಭೆ ಎಂದು ಪರಿಗಣಿಸಲಾಗಿದೆ. ನಾನ್ಸೆನ್ಸ್ ಸಿನಿಮಾವನ್ನು ಪ್ರಚಾರ ಮಾಡುವುದು ದೊಡ್ಡ ಪ್ರತಿಭೆ ಎಂದು ಪರಿಗಣಿಸಲಾಗಿದೆ. ನಟರಲ್ಲದವರನ್ನು ದೊಡ್ಡ ಸ್ಟಾರ್ ಎಂದು ಪ್ರಚಾರ ಮಾಡುವುದು ದೊಡ್ಡ ಪ್ರತಿಭೆ ಎಂದು ಪರಿಗಣಿಸಲಾಗಿದೆ ಮತ್ತು ಪ್ರೇಕ್ಷಕರು ಸೂಪರ್ ದಡ್ಡರು ಎಂದು ಭಾವಿಸುವುದು ಎಲ್ಲದಕ್ಕಿಂತ ದೊಡ್ಡ ವಿಚಾರ ಎಂದಿದ್ದಾರೆ.