ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ (Kirik Keethy) ಅವರು ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಈಗ ಅವರು ತಮ್ಮ ದಾಂಪತ್ಯ ಜೀವನದ ಕುರಿತಾಗಿ ಒಂದು ಬಹಳ ಮುಖ್ಯವಾದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಚಾರ ಅನೇಕರಿಗೆ ಬೇಸರವನ್ನು ಉಂಟು ಮಾಡಿದೆ. ಕೀರ್ತಿ ಮತ್ತು ಅರ್ಪಿತಾ ಅವರ ದಾಂಪತ್ಯ ಜೀವನದ ಕುರಿತಾಗಿ ಕೆಲವು ದಿನಗಳ ಹಿಂದೆ ಕೆಲವೊಂದು ಸುದ್ದಿಗಳಾಗಿ ಚರ್ಚೆಗಳಾಗಿತ್ತು.
ಈಗ ಈ ವಿಚಾರಕ್ಕೆ ಸ್ವತಃ ಕೀರ್ತಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಕಿರಿಕ್ ಕೀರ್ತಿ ಅವರು ತಾವು ತಮ್ಮ ಪತ್ನಿಯಿಂದ ಬೇರೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕೀರ್ತಿ ಅವರ ಪೋಸ್ಟ್ ನಲ್ಲಿ, ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ…
ಕಾರಣ ಇಷ್ಟೇ…ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ… ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ… ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ… ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಎಂದು ತಿಳಿಸಿದ್ದು, ಈ ವಿಷಯವಾಗಿ ಅನಾವಶ್ಯಕ ಕಾಮೆಂಟ್ ಗಳು ಬೇಡ ಎನ್ನುವ ಕಾರಣಕ್ಕೆ ಕಾಮೆಂಟ್ ಸೆಕ್ಷನ್ ಅನ್ನು ಅವರು ಆಫ್ ಮಾಡಿದ್ದಾರೆ.