Home » ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು ಇವರೇ : ಈ ಸ್ಟೋರಿ ಪೂರ್ತಿ ಓದಿ..

ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು ಇವರೇ : ಈ ಸ್ಟೋರಿ ಪೂರ್ತಿ ಓದಿ..

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು.

by Suddi Mane
0 comment

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ‘ಅಷ್ಟ’ ಎಂಬ ಪದವು ಎಂಟು ಸಂಖ್ಯೆಯನ್ನು ಸೂಚಿಸುತ್ತದೆ, ‘ದಿಕ್’ ಎಂದರೆ ದಿಕ್ಕು ಮತ್ತು ‘ಪಾಲ’ ಅಥವಾ ‘ಪಾಲಕ’ ಪಾಲಕ ಅಥವಾ ಆಡಳಿತಗಾರ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಈ ಎಂಟು ದಿಕ್ಕುಗಳು ಪೂರ್ವ, ಉತ್ತರ, ದಕ್ಷಿಣ,, ಪಶ್ಚಿಮ, ಈಶಾನ್ಯ, ಆಗ್ನೆಯ, ವಾಯುವ್ಯ, ಮತ್ತು ನೈಋತ್ಯ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ.

ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು :

ಹೆಸರು : ಇಂದ್ರ

ದಿಕ್ಕು : ಪೂರ್ವ

ಮಂತ್ರ : ಓಂ ಲಂ ಇಂದ್ರಾಯ ನಮಃ

ಆಯುಧ : ವಜ್ರಾಯುಧ

ಒಡನಾಡಿ : ಶಚಿ

ಗ್ರಹ : ಸೂರ್ಯ

ವಾಹನ : ಐರಾವತ

೧.ಇಂದ್ರ :

ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿದೇವತೆ. ಐರಾವತ ಇವನ ವಾಹನ. ವಿಷ್ಣು ಪುರಾಣದ ಪ್ರಕಾರ, ಈ ಐರಾವತವು 4 ದಂತಗಳು ಮತ್ತು 7 ಸೊಂಡಿಲನ್ನು ಹೊಂದಿದೆ ಮತ್ತು ನಿಷ್ಕಳಂಕ ಬಿಳಿಯಾಗಿದೆ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.

ಹೆಸರು : ಅಗ್ನಿ

ದಿಕ್ಕು : ಆಗ್ನೇಯ

ಮಂತ್ರ : ಓಂ ರಂ ಅಗ್ನಯೇ ನಮಃ

ಆಯುಧ : ಶಕ್ತಿ

ಒಡನಾಡಿ : ಸ್ವಾಹ

ಗ್ರಹ : ಮಂಗಳ

ವಾಹನ : ಟಗರು

೨. ಅಗ್ನಿ :

ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ, ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ.

ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ.

ಹೆಸರು : ಯಮ

ದಿಕ್ಕು : ದಕ್ಷಿಣ

ಮಂತ್ರ : ಓಂ ಮಂ ಯಮಾಯ ನಮಃ

ಆಯುಧ : ದಂಡ

ಒಡನಾಡಿ : ಯಮಿ

ಗ್ರಹ : ಬೃಹಸ್ಪತಿ

ವಾಹನ : ಕೋಣ

೩. ಯಮ :

ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ

ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ. ಯಮ ಸಾವು ಮತ್ತು ನ್ಯಾಯದ ಹಿಂದೂ ದೇವರು, ಮತ್ತು ಅವನ ವಾಸಸ್ಥಾನವಾದ ಯಮಲೋಕದಲ್ಲಿ ಕಾನೂನು ಮತ್ತು ಪಾಪಿಗಳ ಶಿಕ್ಷೆಗೆ ಜವಾಬ್ದಾರನಾಗಿರುತ್ತಾನೆ.

ಹೆಸರು : ನಿಋತಿ

ದಿಕ್ಕು : ನೈರುತ್ಯ

ಮಂತ್ರ : ಓಂ ಕ್ಷಂ ರಕ್ಷಸಾಯ ನಮಃ

ಆಯುಧ : ಖಡ್ಗ

ಒಡನಾಡಿ : ಖಡ್ಗಿ

ಗ್ರಹ : ಬುಧ

ವಾಹನ : ಮನುಷ್ಯ

೪. ನಿಋತಿ :

ಈತ ನೈಋುತ್ಯ ದಿಕ್ಕಿನ ಒಡೆಯ. ನಿಋತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ. ನಿಋತಿಯ ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.

ಹೆಸರು : ವರುಣ

ದಿಕ್ಕು : ಪಶ್ಚಿಮ

ಮಂತ್ರ : ಓಂ ವಂ ವರುಣಾಯ ನಮಃ

ಆಯುಧ : ಪಾಶ

ಒಡನಾಡಿ : ವರುಣಿ

ಗ್ರಹ : ಶುಕ್ರ

ವಾಹನ : ಮೊಸಳೆ

೫. ವರುಣ :

ಹಿಂದೂ ಪುರಾಣಗಳ ಪ್ರಕಾರ ನೀರಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ, ಪಶ್ಚಿಮ ದಿಕ್ಕಿನ ಅಧಿಪತಿ, ವರುಣನ ಆಯುಧ ಪಾಶ. ಅವನು ಮಕರ (ಮೊಸಳೆ) ಮೇಲೆ ಆರೋಹಿಸಲ್ಪಟ್ಟಿರುವ ಮತ್ತು ಪಾಶಾ (ಕುಣಿಕೆ, ಹಗ್ಗದ ಕುಣಿಕೆ) ಮತ್ತು ಅವನ ಕೈಯಲ್ಲಿ ಹೂಜಿಯನ್ನು ಹಿಡಿದಿರುವ ಯುವಕನಂತೆ ಚಿತ್ರಿಸಲಾಗಿದೆ.

ಹೆಸರು : ವಾಯು

ದಿಕ್ಕು : ವಾಯುವ್ಯ

ಮಂತ್ರ : ಓಂ ಯಂ ವಾಯವೇ ನಮಃ

ಆಯುಧ : ಅಂಕುಶ

ಒಡನಾಡಿ : ಭಾರತಿದೇವಿ

ಗ್ರಹ : ಶನಿ

ವಾಹನ : ಸಾರಂಗ

೬. ವಾಯು :

ವಾಯುವ್ಯ ದಿಕ್ಕಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ. ವೈದಿಕ ಗ್ರಂಥಗಳಲ್ಲಿ, ಅವನು ಪರಮಾತ್ಮನಾದ ವಿಶ್ವಪುರುಷನ ಉಸಿರಾಟದಿಂದ ಜನಿಸಿದನೆಂದು ಮತ್ತು ಸೋಮವನ್ನು ಸೇವಿಸಿದ ಮೊದಲನೆಯವನೆಂದು ಉಲ್ಲೇಖಿಸಲಾಗಿದೆ.

ಹೆಸರು : ಕುಬೇರ

ದಿಕ್ಕು : ಉತ್ತರ

ಮಂತ್ರ : ಓಂ ಶಂ ಕುಬೇರಾಯ ನಮಃ

ಆಯುಧ : ಗದೆ

ಒಡನಾಡಿ : ಕೌಬೇರಿ

ಗ್ರಹ : ಚಂದ್ರ

ವಾಹನ : ಆನೆ

೭. ಕುಬೇರ :

ಕುಬೇರ ಮಿಶ್ರವಶುವಿನ ಮಗ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಈತನ ಆಯುಧ ಗಧೆ ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ.

ಹೆಸರು : ಈಶಾನ

ದಿಕ್ಕು : ಈಶಾನ್ಯ

ಮಂತ್ರ : ಓಂ ಹಂ ಈಶಾನಾಯ ನಮಃ

ಆಯುಧ : ತ್ರಿಶೂಲ

ಒಡನಾಡಿ : ಪಾರ್ವತಿ

ಗ್ರಹ : ರಾಹು

ವಾಹನ : ನಂದಿ

೮. ಈಶಾನ : ಪಶ್ಚಿಮ ದಿಕ್ಕಿನ ಅಧಿಪತಿ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ತ್ರಿಶೂಲ, ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies