ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ದೇವಾಲಯಗಳಿಗೆ ಭೇಟಿ ನೀಡುವುದು ಅವರ ಒಂದು ಹವ್ಯಾಸವಾಗಿದೆ. ನಟಿಯು ಈಗಾಗಲೇ ಕೇದಾರನಾಥ ಧಾಮಕ್ಕೆ ಸಹಾ ಭೇಟಿ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿಯು ಎರಡನೇ ಬಾರಿಗೆ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ನಟಿಯ ಪೋಸ್ಟ್ ಗೆ ಮೆಚ್ಚುಗೆಗಳ ಜೊತೆಗೆ ಒಂದಷ್ಟು ಜನರು ಸಿಟ್ಟನ್ನು ಸಹಾ ವ್ಯಕ್ತಪಡಿಸುತ್ತಾ ಕಾಮೆಂಟ್ ಗಳನ್ನು ಮಾಡಿದ್ದರು.
ಸಾರಾ ಅಲಿ ಖಾನ್ ಇಸ್ಲಾಂ ಧರ್ಮದವರಾಗಿರುವ ಕಾರಣದಿಂದಾಗಿ ಅವರು ಮಂದಿರಗಳಿಗೆ ಭೇಟಿ ನೀಡುವ ಬಗ್ಗೆ ಒಂದಷ್ಟು ಜನರು ಅಸಮಾಧಾನಗೊಂಡಿದ್ದು ಟೀಕೆ ಮಾಡುತ್ತಿದ್ದಾರೆ. ಈಗ ನಟಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಗೆ ನಟಿಸಿರುವ ತಮ್ಮ ಹೊಸ ಸಿನಿಮಾ ಜರಾ ಹಟ್ ಕೇ, ಜರಾ ಬಚ್ ಕೇ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಮಂದಿರಗಳು ಮತ್ತು ಮಸೀದಿಗಳಿಗೆ ಭೇಟಿಯನ್ನು ನೀಡಿದ್ದಾರೆ. ಈ ವೇಳೆ ಮಂದಿರಕ್ಕೆ ಹೋದ ವಿಚಾರಕ್ಕೆ ಮತ್ತೊಮ್ಮೆ ನಟಿಯನ್ನು ಟ್ರೋಲ್ ಮಾಡಲಾಗಿದೆ.
ತನ್ನನ್ನು ಟ್ರೋಲ್ ಮಾಡಿದವರಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಸಾರಾ ತಮ್ಮ ಪ್ರತಿಕ್ರಿಯೆಯಲ್ಲಿ, ನಾನು ನನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ಮಾಡುತ್ತಿದ್ದು, ಇದನ್ನು ಜನರಿಗಾಗಿ ಮಾಡುತ್ತಿದ್ದೇನೆ. ಒಂದು ವೇಳೆ ನನ್ನ ಕೆಲಸ ನಿಮಗೆ ಇಷ್ಟವಾಗದೇ ಇದ್ದಾಗ ನನಗೆ ಬೇಸರವಾಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನ್ನದೇ ಆಗಿವೆ. ನಾನು ಬಾಂಗ್ಲಾ ಸಾಹೀಬ್ ಅಥವಾ ಮಹಾಕಾಲ್ ಮಂದಿರಕ್ಕೆ ಹೋಗುವಷ್ಟೇ ಭಕ್ತಿಯಿಂದ ಅಜ್ಮೇರ್ ಶರೀಫ್ ಗೂ ಹೋಗುತ್ತೇನೆ
ನಾನು ಮಂದಿಗಳಿಗೆ ಭೇಟಿ ನೀಡುವುದನ್ನು ಇನ್ನು ಮುಂದೆಯೂ ಸಹಾ ಮುಂದುವರೆಸುತ್ತೇನೆ. ಜನರು ಏನು ಬೇಕಾದರೂ ಹೇಳಲಿ, ಆದರೆ ಅದರಿಂದ ನನಗೆ ಯಾವುದೇ ತೊಂದರೆಯಿಲ್ಲ. ನೀವು ಸ್ಥಳದ ಶಕ್ತಿಯನ್ನು ಇಷ್ಟಪಡಬೇಕು. ನಾನು ಶಕ್ತಿಯನ್ನು ನಂಬುತ್ತೇನೆ ಎನ್ನುವ ಮಾತುಗಳನ್ನು ಸಾರಾ ಹೇಳಿದ್ದಾರೆ. ಈ ಮೂಲಕ ತನ್ನ ದೇಗುಲಗಳ ಭೇಟಿಯ ಬಗ್ಗೆ ತಂಟೆ ತೆಗೆದವರಿಗೆ ಸಾರಾ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
- ಅಭಿಮಾನಿಯ ಅಪಾರ ಅಭಿಮಾನ ಕಂಡು ವಿಮಾನ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ತಮನ್ನಾ
- ಕಿರುತೆರೆಗೆ ಭರ್ಜರಿ ಕಮ್ ಬ್ಯಾಕ್ ಮಾಡಿದ 90ರ ದಶಕದ ಜನಪ್ರಿಯ ಬಾಲನಟಿ ಸಿಂಧೂ ರಾವ್
- ದಕ್ಷಿಣದ ಈ ನಟರನ್ನು ಹಾಡಿ ಹೊಗಳಿದ ತಮನ್ನಾ: ನಟಿ ಸಭ್ಯರು, ಸಂಸ್ಕಾರವಂತರೆಂದು ಹೇಳಿದ್ದು ಯಾರ ಬಗ್ಗೆ?
- ದಕ್ಷಿಣದ ಸ್ಟಾರ್ ನಟನ ಪ್ಯಾನ್ ಇಂಡಿಯಾದಲ್ಲಿ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ: ಥ್ರಿಲ್ ಆದ ನಟಿಯ ಅಭಿಮಾನಿಗಳು