Home » ಕರುನಾಡ ಚಕ್ರವರ್ತಿಯ ಜನ್ಮದಿನಕ್ಕೆ ಭರ್ಜರಿ ಸಿದ್ಧತೆ. ಈ ಬಾರಿಯ ಶಿವಣ್ಣ ಬರ್ತಡೇ ಹೇಗಿರುತ್ತೆ.?

ಕರುನಾಡ ಚಕ್ರವರ್ತಿಯ ಜನ್ಮದಿನಕ್ಕೆ ಭರ್ಜರಿ ಸಿದ್ಧತೆ. ಈ ಬಾರಿಯ ಶಿವಣ್ಣ ಬರ್ತಡೇ ಹೇಗಿರುತ್ತೆ.?

by Suddi Mane
0 comment

ಅಭಿಮಾನ ನಟನ ಜನ್ಮದಿನ ಅಂದ್ರೆ ಅದು ಅಭಿಮಾನಿಗಳಿಗೆ ಹಬ್ಬ ಇದ್ದ ಹಾಗೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ತಮ್ಮ ಅಭಿಮಾನ ನಟನ ಜನ್ಮದಿನವನ್ನು ಆಚರಿಸೋದೆ ದೂರ ದೂರದ ಊರುಗಳಿಂದ ಅಭಿಮಾನಿಗಳು ಬರೋದು ಕೂಡಾ ನಿಜ. ಈಗ ಕನ್ನಡ ಸಿನಿಮಾ ರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ವೇಳೆ ಅವರ ಅಭಿಮಾನಿಗಳು ಜನ್ಮದಿನವನ್ನು ಸಂಭ್ರಮದಿಂದ ಆಚರಣೆ ಮಾಡೋಕೆ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.

ಪ್ರತಿ ವರ್ಷ ಶಿವಣ್ಣ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿಕೊಂಡು ಬರ್ತಿದ್ದಾರೆ. ಆದರೆ ಕೋವಿಡ್ ಕಾರಣದಿಂದ ಅನಂತರ ಪುನೀತ್ ರಾಜ್‍ಕುಮಾರ್ ಅವರ ನಿಧನದ ಕಾರಣದಿಂದ ನಾಲ್ಕು ವರ್ಷದಿಂದ ಶಿವಣ್ಣ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ಸಲ ಅವರ ಅಭಿಮಾನಿಗಳು ಶಿವಣ್ಣನ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸೋದಕ್ಕೆ ಸಿದ್ಥತೆಗಳನ್ನು ಮಾಡ್ತಾ ಇದ್ದು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶಿವಣ್ಣ ಅವರು ಜನ್ಮದಿನವನ್ನು ಆಚರಿಸಿಕೊಳ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ಅಭಿಮಾನಿ ಮತ್ತು ಆಪ್ತ ಸ್ನೇಹಿತರೂ ಆಗಿರುವ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಮಾದ್ಯಮವೊಂದರ ಜೊತೆ ಮಾತನಾಡ್ತಾ, ಅಭಿಮಾನಿಗಳು ಈ ವರ್ಷ ಶಿವಣ್ಣ ತಮ್ಮ‌ ಜೊತೆ ಜನ್ನದಿನದ ಆಚರಣೆ ಮಾಡಿಕೊಳ್ಳಲೇಬೇಕು ಅಂತ ಒತ್ತಾಯ ಮಾಡಿದ್ದು, ಡಿಕೆಡಿ ಶೋ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದ ಅಭಿಮಾನಿಗಳು ಶಿವಣ್ಣ ಅವರಿಗೆ ಜುಲೈ 12 ರಂದು ಎಲ್ಲಿಗೂ ಹೋಗಬೇಡಿ ಅಂತ ಮನವಿ ಮಾಡಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

ಜುಲೈ ಹನ್ನೊಂದರ ಸಂಜೆಯಿಂದಲೇ ಸಂಭ್ರಮ ಆರಂಭ ಅಗಲಿದೆ ಎಂದಿದ್ದಾರೆ. ಆ ದಿನ ರಾತ್ರಿ ಹನ್ನೆರಡು ಗಂಟೆ ಕೇಕ್ ಕತ್ತರಿಸೋದು, ಅನಂತರ ಸಿಡಿ ಮದ್ದು ಸಿಡಿಸಿ ಜನ್ಮ ದಿನವನ್ನು ಸಂಭ್ರಮವನ್ನು ಸಂಭ್ರಮಿಸಲಾಗುವುದು. ಮಾರನೇ ದಿನ ರಾಜ್ಯದ ವಿವಿಧ ಭಾಗಗಳಿಂದ ಬರುವ ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬ ಆಚರಣೆ ಇದ್ದು, ಅದೇ ದಿನ ಶಿವಣ್ಣ ಅವರ ಹೊಸ ಸಿನಿಮಾದ ಟೀಸರ್ ಸಹಾ ಬಿಡುಗಡೆ ಆಗುತ್ತೆ ಎಂದು ಕೆಪಿ ಶ್ರೀಕಾಂತ್ ತಿಳಿಸಿದ್ದಾರೆ..

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies