ಕನ್ನಡ ಸಿನಿಮಾ ರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಸ್ಯಾಂಡಲ್ವುಡ್ ಗೆ ಜಿಮ್ಮಿ ಚಿತ್ರದ ಮೂಲಕ ಎಂಟ್ರಿ ಕೊಡೋದಿಕ್ಕೆ ಸಜ್ಜಾಗಿದ್ದಾರೆ. ಈ ಸಿನಿಮಾದ ಟೈಟಲ್ ಬಿಡುಗಡೆಯ ಕಾರ್ಯಕ್ರಮವು ಬೆಂಗಳೂರು ನಗರದ ಒಂದು ಖಾಸಗಿ ಹೋಟೆಲ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಕುಟುಂಬ, ಕನ್ನಡದ ಹಿರಿಯ ನಟ ಡಾ. ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ಗುರು ಕಿರಣ್ ಹಾಗೂ ಇನ್ನಿತರ ಸಿನಿಮಾ ಸೆಲೆಬ್ರಿಟಿಗಳು ಹಾಜರಾಗಿದ್ದರು.
ಜಿಮ್ಮಿ ಚಿತ್ರದಲ್ಲೊಂದು ವಿಶೇಷತೆ ಇದ್ದು, ಈ ಸಿನಿಮಾಕ್ಕಾಗಿ ನಟ ಸುದೀಪ್ ಅವರ ಮಗಳು ಹಾಡನ್ನು ಹಾಡಿರುವುದು. ಶಿಕ್ಷಣದ ಜೊತೆ ಜೊತೆಗೆ ಸುದೀಪ್ ಅವರ ಮಗಳು ಸಾನ್ವಿ ತಮ್ಮ ಬಿಡುವಿನ ಸಮಯದಲ್ಲಿ ಹಾಡುವುದು, ಚಿತ್ರ ಬಿಡಿಸುವುದು ಮಾಡುತ್ತಾರೆ. ಸುದೀಪ್ ಅವರು ತಮ್ಮ ಮಗಳ ಇಂತಹ ವಿಭಿನ್ನ ಆಸಕ್ತಿಗಳ ಕುರಿತಾಗಿ ಬಹಳಷ್ಟು ಸಲ ಹೆಮ್ಮೆಯಿಂದ ಮಾತನಾಡಿದ್ದುಂಟು. ಈಗ ಜಿಮ್ಮಿ ವೇದಿಕೆಯಲ್ಲಿ ಸಿನಿಮಾದ ಹಾಡು ಹಾಡಿದ ಸಾನ್ವಿ ಅವರ ಕಂಠ ಸಿರಿಗೆ ಬಹಳಷ್ಟು ಜನ ಮೆಚ್ಚುಗೆ ನೀಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಈಗ ಅವರ ಧ್ವನಿ ಮತ್ತು ಸ್ಟೈಲ್ ವೈರಲ್ ಆಗಿದೆ.
ಮಗಳು ಹಾಡಿರುವ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಅವರು , ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿರುವುದು ಕೋಇನ್ಸಿಡೆನ್ಸ್ ಎಂದಿದ್ದು, ಇದರಲ್ಲಿ ಪೂರ್ತಿ ನಿರ್ಧಾರ ಆಕೆಯದ್ದೇ ನಂದೇನೂ ಇಲ್ಲ ಎಂದಿದ್ದು, ತುಂಬಾ ಚೆನ್ನಾಗಿ ಹಾಡಿದ್ದಾರೆ, ತುಂಬಾ ಪ್ರೋಫೆಶನಲ್ ಆಗಿ ಹಾಡಿದ್ದಾರೆ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ ಎಂದಿದ್ದಾರೆ ಕಿಚ್ಚ ಸುದೀಪ್. ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟೊಂದು ಚೆನ್ನಾಗಿ ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ ಎಂದು ಸುದೀಪ್ ಹೇಳಿದ್ದಾರೆ.