ರಷ್ಯಾ ಹಾಗೂ ಭಾರತದ ನಡುವೆ ಒಂದು ಉತ್ತಮವಾದ ಸ್ನೇಹ ಬಾಂಧವ್ಯ ಹಿಂದಿನಿಂದಲೂ ಇದೆ. ಅದು ಇಂದಿಗೂ ಸಹಾ ಉತ್ತಮವಾಗಿಯೇ ಮುಂದುವರೆದದಿದೆ. ರಷ್ಯಾ ಉಕ್ರೇನ್ ಯುದ್ಧದ ಸಮಯದಲ್ಲಿಯೂ ಭಾರತ ಈ ವಿಚಾರವಾಗಿ ಪರ, ವಿರೋಧ ನಿಲುವನ್ನು ತಾಳದೇ, ತಟಸ್ಥ ನೀತಿಯನ್ನು ಅನುಸರಿಸಿತ್ತು. ಈಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತಮ ಸ್ನೇಹಿತನೆಂದು ವರ್ಣಿಸಿದ್ದಾರೆ.
ಭಾರತದ ಆರ್ಥಿಕತೆಯ ಮೇಲೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ನಿಜವಾಗಿಯೂ ಪರಿಣಾಮವನ್ನು ಬೀರಲಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಇದೇ ವೇಳೆ ರಷ್ಯಾದಲ್ಲಿ ಸಹಾ ಭಾರತದ ಕೆಲವು ಯೋಜನೆಗಳನ್ನು ಅಳವಡಿಸಿಕೊಳ್ಳುವುದರಿಂದ ಏನಾದರೂ ಹಾನಿಯಾಗಬಹುದೇ ಎಂದು ರಷ್ಯಾದ ಸಚಿವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಪುಟಿನ್ ಅವರು ಭಾರತದ ಮೇಕ್ ಇನ್ ಇಂಡಿಯಾ ಅಲ್ಲಿನ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ದೇಶೀಯ ಉತ್ಪನ್ನಗಳು ಮತ್ತು ಬ್ರ್ಯಾಂಡ್ ಗಳನ್ನು ಪ್ರೋತ್ಸಾಹಿಸಲು ಭಾರತದ ಉದಾಹರಣೆಯನ್ನು ಉಲ್ಲೇಖ ಮಾಡಿರುವುದು ಗಮನಾರ್ಹವಾಗಿದೆ. ಅಲ್ಲದೇ ನಾವು ನಮ್ಮ ಉತ್ಪನ್ನಗಳನ್ನು ಆಧುನೀಕರಿಸಿ, ಅವುಗಳನ್ನು ಇನ್ನಷ್ಟು ಅನುಕೂಲಕರ ಮತ್ತು ಕ್ರಿಯಾತ್ಮಕಗೊಳಿಸುವ ಕಡೆಗೆ ಗಮನ ನೀಡಬೇಕೆಂದು ಪುಟಿನ್ ಹೇಳಿದ್ದಾರೆ.