ಐಪಿಎಲ್ ನಲ್ಲಿ 16 ಆವೃತ್ತಿಗಳು ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟ್ರೋಫಿಯನ್ನ ಗೆಲ್ಲುವಲ್ಲಿ ವಿಫಲವಾಗಿರುವುದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದ್ದರೂ ಸಹಾ ಪ್ರತೀ ಸೀಸನ್ ಪ್ರಾರಂಭವಾದಾಗಲು ಆರ್ ಸಿ ಬಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಸಂತೋಷದಿಂದ ಹೇಳುವುದನ್ನು ನಾವು ಗಮನಿಸಬಹುದು. ಈಗ ತಂಡದ ಸೋಲಿನ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚಿಂಗ್ ಬಳಗವನ್ನು ಬದಲಾಯಿಸಲಾಗಿದೆ ಎನ್ನುವ ಸುದ್ದಿ ಎಂದು ಆರ್ ಸಿ ಬಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಜಿಂಬಾಂಬ್ವೆಯ ದಿಗ್ಗಜ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರನ್ನು ಆರ್‌ಸಿಬಿ ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ. 16 ಆವೃತ್ತಿಗಳಲ್ಲಿ ಮೂರ್ನಾಲ್ಕು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದೇ ಇರುವುದು ನಿರಾಸೆಯನ್ನು ಮೂಡಿಸಿತು. 2023ರ ಹದಿನಾರನೇ ಆವೃತ್ತಿಯ ಕೊನೆ ಪಂದ್ಯದಲ್ಲೂ ಆರ್ ಸಿ ಬಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿ ಪ್ಲೇ ಆಫ್ ನಿಂದ ಹೊರ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ಕೋಚಿಂಗ್ ಬಳಗವನ್ನು ಆರ್‌ಸಿಬಿ ಫ್ರಾಂಚೈಸಿ ಬದಲಾಯಿಸಿದ್ದು, ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೇಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಾಂಗರ್ ಜೊತೆಗೆ ನಾವು ಒಪ್ಪಂದವನ್ನು ಕೊನೆ ಮಾಡಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಜಿಂಬಾಂಬ್ವೆ ತಂಡದ ಪರ 63 ಟೆಸ್ಟ್ ಮತ್ತು 213 ಏಕದಿನ ಪಂದ್ಯಗಳನ್ನು ಆಡಿರುವ ಆ್ಯಂಡಿ ಫ್ಲವರ್ ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ತಂಡಗಳಿಗೆ ಕೋಚಿಂಗ್ ನೀಡಿದ ಅನುಭವ ಹೊಂದಿದ್ದಾರೆ.
2010ರಲ್ಲಿ ಆ್ಯಂಡಿ ಫ್ಲವರ್ ಕೋಚಿಂಗ್ ಬಲದಿಂದಾಗಿ ಇಂಗ್ಲೆಂಡ್ ತಂಡ ಐಸಿಸಿ ಟಿ ಟ್ವೆಂಟಿ ಕ್ರಿಕೆಟ್ ವಿಶ್ವ ಕಪ್ ಗೆದ್ದು ಬೀಗಿತ್ತು. ಕಳೆದ ಎರಡು ವರ್ಷಗಳಿಂದ ಅವರು ಲಕ್ನೋ ಸೂಪರ್ ಜೈಂಟ್ಸ್ ನ ಕೋಚ್ ಆಗಿದ್ದರು. ಈಗ ಆರ್ಸಿಬಿ ತಂಡದ ಹೊಸ ಕೋಚ್ ಆಗಿ ಅವರನ್ನು ನೇಮಕ ಮಾಡಿರುವ ವಿಷಯ ಸುದ್ದಿಯಾಗಿದ್ದು, ಆರ್‌ಸಿಬಿ ಫ್ಯಾನ್ ಗಳು ಮುಂದಿನ ಸಲ ಕಪ್ ನಮ್ದೆ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ.