ಪುಟ್ಟ ದೇಶ ನೇಪಾಳಕ್ಕಿರುವ ದೈರ್ಯ ನಮಗಿಲ್ವಾ: ಆದಿಪುರುಷ ವಿಚಾರದಲ್ಲಿ ಸಿಡಿದ ನೆಟ್ಟಿಗರ ಆಕ್ರೋಶ

ಬಹುನಿರೀಕ್ಷಿತ ಆದಿಪುರುಷ ಸಿನಿಮಾ ತೆರೆಗೆ ಬಂದು ಎಬ್ಬಿಸಿರುವ ಅಸಮಾಧಾನದ ಅಲೆ ದೇಶದಲ್ಲಿ ಇನ್ನೂ ಅಲ್ಲಲ್ಲಿ ಕಾಣುತ್ತಲೇ ಇದೆ.‌ ಸಿನಿಮಾದ ಸಂಭಾಷಣೆ, ಸಿನಿಮಾದಲ್ಲಿ ರಾಮಾಯಣದ ಕಥೆಯ ಕೆಲವು ಅಂಶಗಳನ್ನು ಬದಲಿಸಿ ತಮಗೆ ಇಷ್ಟ ಬಂದಂತೆ ತೋರಿಸಿರುವುದು ಇದೆಲ್ಲವೂ ಸಹಾ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಸಿನಿಮಾ ಬ್ಯಾನ್ ಮಾಡಬೇಕೆಂದು ಹಿಂದೂ ಪರ ಸಂಘಟನೆಗಳು ಕೋರ್ಟ್ ಮೆಟ್ಟಿಲನ್ನು ಸಹಾ ಏರಿವೆ. ಈ ಮಧ್ಯೆ ಸಿನಿಮಾದಲ್ಲಿನ ವಿವಾದಿತ ಸಂಭಾಷಣೆಯನ್ನು ಬದಲಿಸಲಾಗಿದೆ.

ಆದರೆ ಈಗ ಸಿನಿಮಾ ಬ್ಯಾನ್ ವಿಚಾರವಾಗಿ ನೆಟ್ಟಿಗರು ನೇಪಾಳದ ಉದಾಹರಣೆಯನ್ನು ಕೊಡಲು ಆರಂಭಿಸಿದ್ದಾರೆ. ಹೌದು, ಆದಿಪುರುಷ ಸಿನಿಮಾದ ಒಂದೇ ಒಂದು ಡೈಲಾಗ್ ವಿಚಾರವಾಗಿ ನೇಪಾಳದಲ್ಲಿ ಇದೊಂದು ಸಿನಿಮಾ ಮಾತ್ರವೇ ಅಲ್ಲದೇ ಬಾಲಿವುಡ್ ನ ಎಲ್ಲಾ ಸಿನಿಮಾಗಳನ್ನು ಸಹಾ ಬ್ಯಾನ್ ಮಾಡಲಾಗಿದೆ. ಆದಿಪುರುಷ ಸಿನಿಮಾದಲ್ಲಿನ ಒಂದು ಡೈಲಾಗ್ ಬದಲಿಸದೇ ಹೋದರೆ ಸಿನಿಮಾ ಬಿಡುಗಡೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪಡಿಸಿದೆ.

ಇದನ್ನು ನೋಡಿದ ನೆಟ್ಟಗರು ಒಂದು ಸಣ್ಣ ದೇಶ ನೇಪಾಳ ಬಹಳ ಧೈರ್ಯವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಸಿನಿಮಾವನ್ನು ಹಿಂದೆ ಮುಂದೆ ನೋಡದೇ ಬ್ಯಾನ್ ಮಾಡಿದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಸಿನಿಮಾ ನಡೀತಿದೆ. ಅಲ್ಲದೇ ಈಗಂತೂ ಡೈಲಾಗ್ ಬದಲಾವಣೆ ಮಾಡಿ, ಸಿನಿಮಾ ಓಡಿಸಲಾಗುತ್ತಿದೆ. ಸಿನಿಮಾ ಬ್ಯಾನ್ ವಿಚಾರದಲ್ಲಿ ನೇಪಾಳಕ್ಕೆ ಇರುವ ಧೈರ್ಯ ಕೂಡಾ ನಮಗೆ ಇಲ್ಲವೇನು? ಎಂದು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More