ವಿಷಾದದೊಂದಿಗೆ ಮುಗಿದ ಜಲಾಂತರ್ಗಾಮಿ ಕಥೆ: ಟೈಟಾನಿಕ್ ನೋಡಲು ಹೋದವರು ಮತ್ತೆ ಬರಲಿಲ್ಲ

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವುದಕ್ಕಾಗಿ ಐದು ಜನ ಸಂದರ್ಶಕದೊಂದಿಗೆ ಹೊರಟು, ಸಮುದ್ರ ಗರ್ಭದಲ್ಲಿ ಕಾಣೆಯಾಗಿದ್ದ ಟೈಟಾನ್ ಮಿನಿ ಜಲಾಂತರ್ಗಾಮಿಯ ಕಥೆಯು ವಿಷಾದದೊಂದಿಗೆ ಅಂತ್ಯವಾಗಿದೆ. ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ 5 ಜನರು ಕೂಡಾ ಮರಣ ಹೊಂದಿದ್ದಾರೆ ಎಂದು ಸಬ್ ಮರೀನ್ ನಿರ್ವಹಣೆ ಮಾಡುತ್ತಿದ್ದ ಕಂಪನಿಯು ತಿಳಿಸಿದೆ. ಟೈಟಾನಿಕ್ ಹಡಗು ಸಮುದ್ರದ ಅಡಿಯಲ್ಲಿ ಮುಳುಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಓಶನ್ ಗೇಟ್ ಎನ್ನುವ ಸಂಸ್ಥೆಯು ಮಿನಿ ಜಲಂತರ್ಗಾಮಿ ನೌಕೆಯ ಮೂಲಕ ಸಂದರ್ಶಕರನ್ನು ಕರೆದುಕೊಂಡು ಹೋಗಿ ಟೈಟಾನಿಕ್ ಆವೇಶಗಳನ್ನು ತೋರಿಸುವ ಕೆಲಸವನ್ನು ಮಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಮಿನಿ ಜಲಾಂತರ್ಗಾಮಿ ಟೈಟಾನ್ ನಲ್ಲಿ ಬ್ರಿಟಿಷ್ ಬಿಲಿಯನೇರ್ ಹಮೀಶ್ ಹಾರ್ಡಿಂಗ್, ಪಾಕಿಸ್ತಾನದ ಉದ್ಯಮಿ ಷಾಜಾದ ದಾವೂದ್ ಮತ್ತು ಅವರ ಪುತ್ರ ಸುಲೇಮಾನ್ ಸೇರಿದಂತೆ ಓಶನ್ ಗೇಟ್ ಎಕ್ಸ್ಪೀಡಿಷನ್ಸ್ ಚೀಫ್ ಎಕ್ಸಿಕ್ಯೂಟಿವ್ ಸ್ಟಾಕ್ ಟನ್, ಸಬ್ ಮರೀನ್ ಆಪರೇಟರ್ ಪಾಲ್ ಹೆನ್ರಿ ಟೈಟಾನಿಕ್ ಅವಶೇಷಗಳನ್ನು ನೋಡುವುದಕ್ಕೆ ಹೋದರು. ಅಮೆರಿಕ ಕಾಲಮಾನದ ಪ್ರಕಾರ ಬೆಳಗ್ಗೆ 8:15 ಅಂದರೆ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:1 ನಿಮಿಷಕ್ಕೆ ಅವರು ಸಮುದ್ರದಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು‌ ಸುಮಾರು 2 ಗಂಟೆಗಳ ನಂತರ ಸಬ್ ಮೆರೀನ್ ರೆಡಾರ್ ರೀಡರ್ ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ.

ಭಾನುವಾರ ಸಂಜೆ ಕಾಣೆಯಾದ ಸಬ್ ಮೆರೀನ್ ಗಾಗಿ ಕೆನಡಾ, ಅಮೆರಿಕ ಕೋಸ್ಟ್ ಗಾರ್ಡ್ ದಳಗಳು ಹುಡುಕಾಟದ ಕಾರ್ಯವನ್ನು ಕೈಗೆತ್ತಿಕೊಂಡವು. ಕೆನಡಾ ಗೆ ಸೇರಿದ ಶೋಧ ವಿಮಾನವು ಸಮುದ್ರದಿಂದ ಶಬ್ದಗಳು ಬಂದವೆಂದು ಗುರುತಿಸಿತ್ತು. ನಂತರ ಕೋಸ್ಟ್ ಗಾರ್ಡ್ ದಳಗಳು ಸಮುದ್ರದಿಂದ ಶಬ್ದಗಳು ಬಂದ ಜಾಗದಲ್ಲಿ ಸಬ್ ಮೆರೀನ್ ಶೋಧನ ಕಾರ್ಯವನ್ನು ನಡೆಸಿದರಾದರೂ ಯಾವುದೇ ರೀತಿಯ ಸರಿಯಾದ ಫಲಿತಾಂಶ ದಕ್ಕಲಿಲ್ಲ. ಅಲ್ಲದೇ ಈ ಸಬ್ ಮೆರೀನ್ ನಲ್ಲಿ ಕೇವಲ 96 ಗಂಟೆಗಳಿಗೆ ಸಾಕಾಗುವಷ್ಟು ಮಾತ್ರವೇ ಆಕ್ಸಿಜನ್ ಇತ್ತು ಎಂದು ಹೇಳಲಾಗಿದೆ.

ಅದರ ಪ್ರಕಾರ ಸಬ್ ಮೆರೀನ್ ನಲ್ಲಿ ಇದ್ದ ಆಕ್ಸಿಜನ್ ಗುರುವಾರ ಸಂಜೆ ಏಳು ಗಂಟೆ ಹದಿನೈದು ನಿಮಿಷದವರೆಗೆ ಮಾತ್ರ ಇರುತ್ತದೆ ಎಂದು ಹೇಳಿದ್ದರು. ಗುರುವಾರ ಸಂಜೆ ರಿಮೋಟ್ ಆಪರೇಟೆಡ್ ವೆಹಿಕಲ್ ಸಹಾಯದಿಂದ ಟೈಟಾನಿಕ್ ಹಡಗಿನ ಹತ್ತಿರದಲ್ಲಿ ಕೆಲವೊಂದು ಅವಶೇಷಗಳು ಪತ್ತೆಯಾಗಿದೆ ಎಂದು ಕೋಸ್ಟ್ ಗಾರ್ಡ್ ಬಹಿರಂಗಪಡಿಸಿದ್ದು, ಜಲಂತರ್ಗಾಮಿ ನೌಕೆಯ ಸ್ಪೋಟದಿಂದ ಇದು ಸಂಭವಿಸಿದೆ ಎಂದು ನಂಬಲಾಗಿದೆ. ಜಲಾಂತರ್ಗಾಮಿಯಲ್ಲಿದ್ದ ಪ್ರವಾಸಿಗರು ಏನಾದರೂ ಎಂಬುದು ತಿಳಿದು ಬಂದಿಲ್ಲ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More