Home » ಪಾಕ್ ನಲ್ಲಿ ಫಾತೀಮಾ ಆಗಿ, ಫೇಸ್ ಬುಕ್ ಗೆಳೆಯನ ಮದುವೆಯಾದ ಭಾರತದ ಅಂಜು!

ಪಾಕ್ ನಲ್ಲಿ ಫಾತೀಮಾ ಆಗಿ, ಫೇಸ್ ಬುಕ್ ಗೆಳೆಯನ ಮದುವೆಯಾದ ಭಾರತದ ಅಂಜು!

by Suddi Mane
0 comment

ಭಾರತದ ರಾಜಸ್ಥಾನದ ಭಿವಂಡಿಯಿಂದ ವಿವಾಹಿತ ಮಹಿಳೆ ಅಂಜು ತಮ್ಮ ಪಾಕಿಸ್ತಾನ ಗೆಳೆಯನನ್ನು ಭೇಟಿ ಮಾಡಲು ಗಂಡನಿಗೆ ಸುಳ್ಳು ಹೇಳಿ ಪಾಕಿಸ್ತಾನಕ್ಕೆ ಹಾರಿದ್ದ ವಿಷಯ ದೊಡ್ಡ ಸುದ್ದಿಯಾದ ಬೆನ್ನಲ್ಲೇ ಇದೀಗ ಅಂಜು ಮಂಗಳವಾರ ತನ್ನ ಫೇಸ್‌ಬುಕ್‌ ಗೆಳೆಯನನ್ನು ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೆಳೆಯನನ್ನು ಮದುವೆಯಾಗುವ ಮುನ್ನ ಅಂಜು ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಅವರು ತಮ್ಮ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅಂಜು ಈಗಾಗಲೇ ಎರಡು ಮಕ್ಕಳ ತಾಯಿಯಾಗಿದ್ದಾರೆ. 34 ವರ್ಷದ ಅಂಜು ಅವರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ 29 ವರ್ಷದ ಗೆಳೆಯ ನಸ್ರುಲ್ಲಾ ಅವರನ್ನು ಭೇಟಿ ಮಾಡುವುದಕ್ಕಾಗಿ ಮನೆಯಲ್ಲಿ ಜೈಪುರಕ್ಕೆ ಹೋಗುವುದಾಗಿ ಹೇಳಿ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದ ಅಪ್ಪರ್‌ ದಿರ್‌ ಜಿಲ್ಲೆಯಲ್ಲಿರುವ ನುಸ್ರುಲ್ಲಾನ ಮನೆಗೆ ಹೋಗಿದ್ದಾರೆ. ಅಲ್ಲಿನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಬಿಗಿ ಭದ್ರತೆಯ ನಡುವೆ ಅಂಜು ಮತ್ತು ನಸ್ರುಲ್ಲಾ ವಿವಾಹವಾಗಿದೆ ಎನ್ನಲಾಗಿದೆ.

ಅಂಜು, ನಸ್ರುಲ್ಲಾನ ಕುಟುಂಬ ಸದಸ್ಯರ ಜೊತೆಗೆ ನ್ಯಾಯಾಲಯಕ್ಕೆ ಬಂದಿದ್ದರು ಮತ್ತು ಅಲ್ಲಿ ಮದುವೆ ಮಾಡಿಕೊಂಡರೆಂದು ಮಲಕಂದ್‌ ವಿಭಾಗದ ಡಿಐಜಿ ನಾಸಿರ್‌ ಮೆಹಮೂದ್‌ ಸತ್ತಿ ಅವರು ಖಚಿತಪಡಿಸಿರುವುದಾಗಿ ಜಿಯೊ ನ್ಯೂಸ್‌ ತನ್ನ ವರದಿಯಲ್ಲಿ ತಿಳಿಸಿದೆ. ಅಂಜು ತಾನು ಸ್ವ ಇಚ್ಚೆಯಿಂದ ಬಂದಿರುವುದಾಗಿ, ತಾನು ಖುಷಿಯಾಗಿದ್ದೇನೆ, ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದೇನೆ ಎನ್ನುವ ಮಾತುಗಳನ್ನು ಹೇಳಿದ್ದಾರೆನ್ನಲಾಗಿದೆ.

ಕಾನೂನು ಬದ್ಧವಾಗಿ ತಾನು ಪಾಕಿಸ್ತಾನಕ್ಕೆ ಬಂದಿದ್ದು, ತನ್ನ ಭಾರತದಲ್ಲಿ ಇರುವ ತನ್ನ ಸಂಬಂಧಿಕರು, ಮಾಜಿ ಗಂಡು ಮತ್ತು ತನ್ನ ಇಬ್ಬರು ಮಕ್ಕಳಿಗೆ ತೊಂದರೆ ನೀಡಬೇಡಿ ಎಂದು ಆಕೆ ಮಾದ್ಯಮಗಳಿಗೆ ವೀಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ. ಅಂಜು ಅವರ ಪತಿ ಅರವಿಂದ್ ಮೂರ್ನಾಲ್ಕು ದಿನಗಳಲ್ಲಿ ಪತ್ನಿ ವಾಪಸ್ಸು ಬರುವಳು ಎಂದಿದ್ದರು. ಆದರೆ ಈಗ ಆಕೆ ಫಾತಿಮಾ ಆಗಿ, ಮದುವೆ ಆಗಿದ್ದಾರೆ ಎನ್ನುವುದು ಶಾಕಿಂಗ್ ಸುದ್ದಿಯಾಗಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies