ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್ ಗಳನ್ನು ಮತ್ತೆ ಪ್ರಾರಂಭಿಸುವುದಾಗಿ ಮತ್ತು ಅವುಗಳನ್ನು ಬಲಪಡಿಸುವುದಾಗಿ ಮುಖ್ಯಮಂತ್ರಿಯವರು ಮಾತ್ರವಲ್ಲದೇ ಕಾಂಗ್ರೆಸ್ ನ ಇತರ ಸಚಿವರು ಸಹಾ ಹೇಳಿದ್ದರು. ಈಗ ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟದ ಮೆನು ಬದಲಾವಣೆಯನ್ನು ಮಾಡಿದ್ದು, ಗುಣಮಟ್ಟದ ಶುಚಿಯಾದ ಮತ್ತು ರುಚಿಯಾದ ಊಟವನ್ನು ನೀಡಲು ಸರ್ಕಾರವು ನಿರ್ಧಾರವನ್ನು ಮಾಡಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳನ್ನು ಸೇರ್ಪಡೆ ಮಾಡಲು ಕಾಂಗ್ರೆಸ್ ಸರ್ಕಾರವು
ತೀರ್ಮಾನವನ್ನು ಮಾಡಿದೆ. ಬಿಬಿಎಂಪಿ ಸಿದ್ದಪಡಿಸಿರುವ ಹೊಸ ಮೆನು ಈ ರೀತಿ ಇದೆ.ಬೆಳಗಿನ ತಿಂಡಿಗಳು : ಇಡ್ಲಿ, ಪುಳಿಯೋಗರೆ, ಖಾರಾಬಾತ್, ಪೊಂಗಲ್, ರವಾ ಕಿಚಡಿ ಚಿತ್ರಾನ್ನ, ವಾಂಗಿಬಾತ್ ಮತ್ತು ಕೇಸರಿ ಬಾತ್ ಗಳನ್ನು ಈ ಹಿಂದೆ ನೀಡಲಾಗುತ್ತಿತ್ತು. ಈಗ ಅದಕ್ಕೆ ಹೊಸ ಸೇರ್ಪಡೆಯಾಗಿ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ ಸೇರಿಸಲು ತೀರ್ಮಾನ ಮಾಡಲಾಗಿದ್ದು. ಇಲ್ಲಿಯವರೆಗೆ ಬೆಳಗಿನ ತಿಂಡಿ ಕೇವಲ ಐದು ರೂಪಾಯಿಗಳಾಗಿತ್ತು, ಅದನ್ನು ಈಗ ಹತ್ತು ರೂಪಾಯಿಗೆ ಹೆಚ್ಚಿಸುವ ತೀರ್ಮಾನವನ್ನು
ಮಾಡಲಾಗಿದೆ.ಮಧ್ಯಾಹ್ನದ ಊಟ : ಮಧ್ಯಾಹ್ನದ ಊಟಕ್ಕೆ ಹತ್ತು ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಅನ್ನ, ತರಕಾರಿ ಸಾಂಬಾರ್, ಮತ್ತು ಮೊಸರನ್ನದ ಜೊತೆಗೆ ಹೊಸದಾಗಿ ಸಿಹಿ ಪಾಯಸವನ್ನು ಸೇರಿಸಲಾಗಿದೆ. ದಿನ ಬಿಟ್ಟು ದಿನ ಮುದ್ದೆ, ಸೊಪ್ಪು ಸಾರು ಊಟ ಹಾಗೂ ಮುದ್ದೆ ಇಲ್ಲವೇ ಚಪಾತಿ ಸಾಗು ನೀಡಲು ಹೊಸ ಮೆನುವಿನಲ್ಲಿ ಸೂಚಿಸಲಾಗಿದೆ.ರಾತ್ರಿಯ ಊಟ: ಟಮೋಟೋ ಬಾತ್, ಮೊಸರನ್ನ , ವಾಂಗಿಬಾತ್, ಬಿಸಿಬೇಳೆ ಬಾತ್, ಮೆಂತ್ಯ ಪಲಾವ್, ಪುಳಿಯೋಗರೆ , ಪಲಾವ್ ನೀಡಲಾಗುತ್ತಿತ್ತು. ಈಗಲೂ ಅದನ್ನೇ ಮುಂದುವರಿಸಲು ಸರ್ಕಾರ ತೀರ್ಮಾನ ಮಾಡಿದ್ದು. ರಾತ್ರಿ ಮೆನುವಿನಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲು ಮಾಡದಿರಲು ತೀರ್ಮಾನ ಮಾಡಲಾಗಿದೆ.