Home » ಪತಿಗೆ ಸುಳ್ಳು ಹೇಳಿ ಫೇಸ್ಬುಕ್ ಪ್ರಿಯಕರನಿಗಾಗಿ ಗುಟ್ಟಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಮಹಿಳೆ

ಪತಿಗೆ ಸುಳ್ಳು ಹೇಳಿ ಫೇಸ್ಬುಕ್ ಪ್ರಿಯಕರನಿಗಾಗಿ ಗುಟ್ಟಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಮಹಿಳೆ

by Suddi Mane
0 comment

ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ತನ್ನ ನಾಲ್ಕು ಜನ ಮಕ್ಕಳೊಂದಿಗೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹೈದರ್ ತಮ್ಮ ಗೆಳೆಯ ಸಚಿನ್ ಮೀನಾ ಜೊತೆಗೆ ಮದುವೆಯಾಗಿದ್ದು, ಈಕೆಯ ವಿಚಾರಣೆ ಇನ್ನು ನಡೆಯುತ್ತಿದ್ದು, ಕಳೆದ ಕೆಲವು ದಿನಗಳಿಂದಲೂ ಮಾದ್ಯಮಗಳಲ್ಲಿ ಸೀಮಾ ಪ್ರಮುಖ ಸುದ್ದಿಯಾಗಿರುವಾಗಲೇ ಈಗ ಇಂಥದ್ದೇ ಇನ್ನೊಂದು ಘಟನೆ ನಡೆದಿದ್ದು, ಪಾಕಿಸ್ತಾನದಲ್ಲಿರುವ ಸ್ನೇಹಿತನಿಗಾಗಿ ಪತಿಗೆ ಸುಳ್ಳು ಹೇಳಿ ಭಾರತೀಯ ಮಹಿಳೆಯ ಪಾಕಿಸ್ತಾನಕ್ಕೆ ಹಾರಿದ ಸುದ್ದಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ರಾಜಸ್ಥಾನದ ಭೀವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಪಾಕಿಸ್ತಾನಕ್ಕೆ ಹೋಗಿರುವ ಮಹಿಳೆಯಾಗಿದ್ದಾರೆ. ಈಕೆಗೆ ಅರವಿಂದ್ ಎನ್ನುವವರ ಜೊತೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಫೇಸ್ಬುಕ್ ನಲ್ಲಿ ಅಂಜುಗೆ ಪಾಕಿಸ್ತಾನದ ಪಂಕ್ತುಕ್ವಾ ಪ್ರಾಂತ್ಯದಲ್ಲಿ ವಾಸವಾಗಿರುವ ನೂಸ್ರುಲ್ಲಾ ಜೊತೆಗೆ ಪರಿಚಯವಾಗಿ ಅದು ಸ್ನೇಹವಾಗಿದೆ. ಕಳೆದ ಕೆಲವು ದಿನಗಳಿಂದಲೂ ಆತನೊಂದಿಗೆ ಹೆಚ್ಚು ಆತ್ಮೀಯವಾಗಿದ್ದರ ಎನ್ನಲಾಗಿದ್ದು, ಗಂಡನಿಗೆ ಜೈಪುರಕ್ಕೆ ಹೋಗುತ್ತಿರುವುದಾಗಿ ಹೇಳಿ ಪಾಕಿಸ್ತಾನಕ್ಕೆ ಹಾರಿದ್ದಾರೆ ಅಂಜು.

ಭಾನುವಾರ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿ ಅರವಿಂದ್ ಅವರಿಗೆ ತನ್ನ ಪತ್ನಿ ಜೈಪುರಕ್ಕೆ ಅಲ್ಲ ಬದಲಿಗೆ ಪಾಕಿಸ್ತಾನಕ್ಕೆ ಹೋಗಿರುವ ವಿಚಾರ ತಿಳಿದು ಬಂದಿದೆ. ಅಲ್ಲದೇ ಅದೇ ದಿನ ಸಂಜೆ ಅಂಜು ಅರವಿಂದ್ ಗೆ ಕರೆ ಮಾಡಿ ತಾನು ಲಾಹೋರ್ ನಲ್ಲಿ ಇರುವುದಾಗಿ, 3-4 ದಿನಗಳಲ್ಲಿ ವಾಪಸ್ ಬರುವುದಾಗಿ ಹೇಳಿದ್ದು, ಅರವಿಂದ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಪತ್ನಿ ಶೀಘ್ರದಲ್ಲಿ ಮರಳಿ ಬರುತ್ತಾಳೆ ಎನ್ನುವ ನಂಬಿಕೆ ತನಗೆ ಇದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಅಂಜು ವಿದೇಶಗಳಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು ಪಾಸ್ ಪೋರ್ಟ್ ಮಾಡಿಸಿದ್ದರು ಎನ್ನಲಾಗಿದೆ. ಪಾಕ್ ನ ಗೆಳೆಯನು ನೋಡುವುದಕ್ಕಾಗಿ ಪಾಕಿಸ್ತಾನಕ್ಕೆ ಹೋದ ಅಂಜುವನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದು ನಂತರ ಅವರ ಬಳಿ ಇದ್ದ ದಾಖಲೆಗಳನ್ನು ಪರಿಶೀಲನೆ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಂಜುಗೆ ನೂಸ್ರುಲ್ಲ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದು, ಆತನ ವಯಸ್ಸು 29 ಎನ್ನಲಾಗಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies