ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಕಾನೂನಿನ ಹೋರಾಟವನ್ನು ನಡೆಸುತ್ತಿರುವ ಎಐಸಿಸಿಯ ಮಾಜಿ ಅಧ್ಯಕ್ಷರಾದ ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಅವರಿಗೆ ಇದೀಗ ಮತ್ತೊಂದು ಭಾರೀ ಹಿನ್ನಡೆ ಎದುರಾಗಿದೆ. ಹೌದು, ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ. ಹೈಕೋರ್ಟ್ ಒಂದು ಸುದೀರ್ಘವಾದ ವಿಚಾರಣೆಯನ್ನು ನಡೆಸಿದ ನಂತರ ಶುಕ್ರವಾರ ತನ್ನ ಆದೇಶವನ್ನು ಹೊರಡಿಸಿದೆ.
ಸೂರತ್ ನ್ಯಾಯಾಲಯ ನೀಡಿದಂತಹ ಆದೇಶವು ಸರಿಯಾಗಿಯೇ ಇದೆ ಮತ್ತು ಅದು ಕಾನೂನು ಬದ್ಧವಾಗಿದೆ ಎನ್ನುವ ಮೂಲಕ ಈ ಪ್ರಕರಣದ ವಿಚಾರದಲ್ಲಿ ಕೆಳ ನ್ಯಾಯಾಲಯ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೇ ಶಿಕ್ಷೆಯ ತಡೆ ನಿರಾಕರಿಸುವುದರಿಂದ ರಾಹುಲ್ ಗಾಂಧಿ ಅವರಿಗೆ ಅನ್ಯಾಯವಾಗುವುದಿಲ್ಲ, ಶಿಕ್ಷೆಯನ್ನು ತಡೆಹಿಡಿಯುವುದಕ್ಕೆ ಯಾವುದೇ ಒಂದು ಸಮಂಜಸವಾದ ಕಾರಣವಿಲ್ಲ ಎಂದು ಕೋರ್ಟ್ ಹೇಳಿದೆ.
ವಿಧಿಸಲಾಗಿರುವ ಆದೇಶವು ಸರಿಯಾಗಿದೆ ಮತ್ತು ಅದು ಕಾನೂನುಬದ್ಧವಾಗಿದೆ. ಅನರ್ಹತೆ ಎನ್ನುವುದು ಕೇವಲ ಸಂಸದರು ಮತ್ತು ಶಾಸಕರಿಗೆ ಮಾತ್ರವೇ ಸೀಮಿತವಾಗಿಲ್ಲ. ಇದಲ್ಲದೇ ಅರ್ಜಿದಾರರ ವಿರುದ್ಧ ಹತ್ತು ಪ್ರಕರಣಗಳು ಬಾಕಿ ಉಳಿದಿವೆ. ಆದೇಶ ನೀಡುವ ವೇಳೆಯಲ್ಲಿ ನ್ಯಾಯಾಲಯವು ಕೋರ್ಟ್ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದು ಅಥವಾ ಸಂಸದರಾಗಿ ತಮ್ಮ ಸ್ಥಾನಮಾನವನ್ನು ಅಮಾನತುಗೊಳಿಸಿರುವುದನ್ನು ಅವರು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.