ಸಿನಿಮಾ ಅಂತ ಬಂದ್ರೆ ಅದರ ಮುಖ್ಯ ಉದ್ದೇಶ ಮನೋರಂಜನೆ ಇರಬೇಕು ಅದರ ಜೊತೆ ಸಮಾಜಕ್ಕೆ ಅದರಲ್ಲೂ ಈಗಿನ ಪೀಳಿಗೆಗೆ ಬೇಕೇ ಬೇಕಾದ ಒಂದು ನಿಜವಾದ ಸಂದೇಶ ಇದ್ರೆ ಅದರ ತೂಕ ಜಾಸ್ತಿನೇ ಅಂತ ಹೇಳಬಹುದು.! ಭೀಮ ಬರಿ ಹೆಸರಿಗಷ್ಟೇ ಅಲ್ಲ ಇಡೀ ಸಿನಿಮಾನೆ ಒಂದು ತೂಕ ಇದೆ., ಸಿನಿಮಾ ಶುರುವಿನಿಂದ ಕೊನೆವರೆಗೂ ಒಂದು ಕ್ಷಣನೂ ಬೇಜಾರ್ ಮಾಡಲ್ಲ ಆ ಮಟ್ಟಿಗೆ ವಿಜಯ್ ಕುಮಾರ್ ಇಡೀ ಸಿನಿಮಾನ ಕಟ್ಟಿಕೊಟ್ಟಿದ್ದಾರೆ.! ದುನಿಯಾ ವಿಜಯ್ ಈಗಿನ ಬೆಂಗಳೂರು ಮತ್ತು ಯುವಕರು, ಗಾಂಜಾ ಡ್ರಗ್ಸ್ ಮಾಫಿಯಾ ಪೋಲೀಸ್ , ರೌಡಿಸಂ ಜೊತೆ ಪೋಷಕರ ಕಷ್ಟಗಳನ್ನು ಎಳೆ ಎಳೆಯಾಗಿ ಭೀಮ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ., ಮಾದಕ ಸೇವನೆಯಿಂದ ಮಗನ ಕಳೆದು ಕೊಂಡ ತಂದೆಯ ಬಳಿ ಮ್ಯೆಕಾನಿಕ್ ಆಗಿ ಕೆಲಸಕ್ಕೆ ಸೇರಿಕೊಂಡು ಕೆಟ್ಟದ್ದನ್ನ ತನ್ನದೇ ರೀತಿಯಲ್ಲಿ ಹೋರಾಡಿ ತನ್ನದೇ ಆದ ಪಡೆ ಕಟ್ಟಿಕೊಳ್ಳುವ ಭೀಮ ಡ್ರಗ್ಸ್ ವಿರುದ್ಧ ಹೋರಾಡುವ ಜರ್ನಿಯೇ ಭೀಮ.!
ತನ್ನ ಜೊತೆ ಭೀಮ ಪ್ರೇಕ್ಷಕರನ್ನು ಸಹ ಕಥೆಯೊಳಗೆ ಎಳೆದುಕೊಂಡು ಹೋಗೋದೆ ಭೀಮನ ಪ್ಲಸ್ ಪಾಯಿಂಟ್.! ವೀಲಿಂಗ್ ಮಾಡೋ ದೃಶ್ಯಗಳು , ಯುವಕ ಯುವತಿಯರು ವ್ಯಸನಿಗಳಾಗೋ ದೃಶ್ಯಗಳು ಕಣ್ಣಿಗೆ ಕಟ್ಟಿದಂತೇ ಇವೆ.! ದುನಿಯಾ ವಿಜಯ್ ನೈಜ ಅಭಿನಯ , ಸಾಹಸ ದೃಶ್ಯಗಳು ಮತ್ತು ನಿರ್ದೇಶನಕ್ಕೆ ಯಾರಾದ್ರು ಫುಲ್ ಮಾರ್ಕ್ಸ್ ಕೊಡಲೇಬೇಕು ಬಿಡಿ.! ಇನ್ನು ಚಿತ್ರದಲ್ಲಿ ಬರುವ ಬಹುತೇಕ ಪಾತ್ರಗಳು ನೈಜವಾಗಿವೆ ಅಂದರೆ ಆ ಮಟ್ಟಿಗೆ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.! ರಂಗಾಯಣ ರಘು , ಅಚ್ಯುತ್ ಕುಮಾರ್ ,ಪ್ರಿಯಾ , ಅಶ್ವಿನಿ ಅಂಬರೀಶ್, ಕಾಕ್ರೋಚ್ ಸುಧಿ , ಡ್ರ್ಯಾಗನ್ ಮಂಜು , ಕಲ್ಯಾಣಿ ರಾಜು ,ಪುನೀತ್ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.!
ಇನ್ನು ಚರಣ್ ರಾಜ ಸಂಗೀತ ಚಿತ್ರದ BGM , ಛಾಯಾಗ್ರಹಣ , ಸಾಹಸ , ಮಾಸ್ತಿ ಅವರ ಸಹಜ ಸಂಭಾಷಣೆ ಎಲ್ಲವೂ ಚಿತ್ರದ ಹೈಲೈಟ್ ಕಳೆದ ಕೆಲವು ತಿಂಗಳಿಂದ ಸಿನಿಮಾಗಳಿಲ್ಲದೆ ಒಣಗಿದ್ದ ಚಿತ್ರ ರಂಗಕ್ಕೆ “ಭೀಮ” ದಾಹ ತೀರಿಸಿದ್ದಾನೆ.! ಪ್ರತಿಯೊಬ್ಬರೂ ಭೀಮ ನೋಡಬಹುದು & ನೋಡಲೇಬೇಕು ಯಾಕೆ ಅಂತ ಸಿನಿಮಾ ನೋಡಿದಮೇಲೆ ನಿಮಗೇ ಅರ್ಥ ಆಗುತ್ತೆ., ಕೊನೆಯಲ್ಲಿ ವಿಜಯ್ ಒಂದು ಸರ್ಪ್ರೈಸ್ ಕೂಡ ಕೊಟ್ಟಿದ್ದಾರೆ.!ಚಿತ್ರದಲ್ಲಿನ ಕೆಲವೇ ಕೆಲವು ಭಾಷೆ & ಕೆಲವು ದೃಶ್ಯಗಳಿಂದ ಚಿತ್ರಕ್ಕೆ A ಪ್ರಮಾಣ ಪತ್ರ ಸಿಕ್ಕಿದೆ ಆದರೆ ಮನೆಮಂದಿ ಎಲ್ಲ ಈ ಸಿನಿಮಾ ನೋಡುವುದರಿಂದ ಕಲಿಯೋ ಪಾಠವು ಸಾಕಷ್ಟಿದೆ.! ದುನಿಯಾ ವಿಜಯ್ ಈ ಥರಹದ ಸಿನಿಮಾಗಳ ವಿಜೃಂಭಿಸುತ್ತಾರೆ.! ಆದರೆ ಇವರದ್ದೇ ನಿರ್ದೇಶನದಲ್ಲಿ ತಮ್ಮ ಜೊತೆ ಇತರ ಕಲಾವಿದರನ್ನು ವಿಜೃಂಭಿಸಿದ್ದಾರೆ.