ಸಿನಿಮಾ ಸೆಲೆಬ್ರಿಟಿಗಳ ಜೀವನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲವ್, ಬ್ರೇಕಪ್, ವಿಚ್ಛೇದನ ಎನ್ನುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ತೆಲುಗು ಸಿನಿಮಾ ರಂಗದ ಸ್ಟಾರ್ ನಟಿ ಸಮಂತಾ, ಅನತರ ನಿಹಾರಿಕಾ ಡಿವೋರ್ಸ್ ಪಡೆದುಕೊಂಡಿದ್ದು ಸಾಕಷ್ಟು ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈಗ ತೆಲುಗಿನ ಮತ್ತೊಬ್ಬ ನಟಿ ಸ್ವಾತಿ ರೆಡ್ಡಿ ಅವರ ಜೀವನದಲ್ಲಿ ಕೂಡಾ ಸಮಸ್ಯೆ ಉಂಟಾಗಿದ್ದು, ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರವೊಂದು ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ.
ಸ್ವಾತಿ ರೆಡ್ಡಿಯವರ ವಿಚ್ಛೇದನದ ವಿಚಾರದ ಬೆನ್ನಲ್ಲೇ ನಟಿಯು ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದು, ನಟಿಯ ಇಂತಹದೊಂದು ವಿಚಿತ್ರವಾದ ಕಡೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸ್ವಾತಿ ರೆಡ್ಡಿ ತೆಲುಗು ತಮಿಳು ಮತ್ತು ಮಲಯಾಳಂ ಸಿನಿಮಾ ಗಳಲ್ಲಿ ನಟಿಸಿದ್ದು, ಕಾರ್ತಿಕೇಯ, ತ್ರಿಪುರ ಗಳಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಪ್ರೀತಿಸಿದ ಹುಡುಗ ವಿಕಾಸ್ ಜೊತೆ ಸ್ವಾತಿ ರೆಡ್ಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಆದರೆ ಈಗ ಅವರ ನಡುವೆ ಎಲ್ಲವೂ ಸರಿ ಇಲ್ಲ, ಇವರ ಮಧ್ಯ ಸಮಸ್ಯೆಗಳು ಎದುರಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಸ್ವಾತಿ ರೆಡ್ಡಿ ಕೂಡಾ ಸಮಂತಾ, ನಿಗಾರಿಕಾ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ. ಕೆಲವೇ ದಿನಗಳ ಹಿಂದೆ ಸ್ವಾತಿ ರೆಡ್ಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪತಿಯ ಜೊತೆಗಿನ ಕೆಲವು ಫೋಟೋಗಳನ್ನು ಡಿಲೀಟ್ ಮಾಡಿರುವುದು ಕೂಡಾ ಶಂಕೆಯನ್ನು ಮೂಡಿಸಿದೆ. ಇಷ್ಟೆಲ್ಲಾ ಗಾಸಿಪ್ ಗಳ ನಡುವೆ ನಟಿ ಬುರ್ಖಾ ಧರಿಸಿ ಓಡಾಡಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.