ಹಾಸ್ಟೆಲ್ ಹುಡುಗರು ಸಿನಿಮಾಕ್ಕೆ ಕಂಟಕವಾದ ನಟಿ ರಮ್ಯಾ: ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಆರಂಭದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸಿನಿಮಾ‌ ತನ್ನ ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಗಳಿಂದ ಹೊಸದೊಂದು ಕ್ರೇಜ್ ಹುಟ್ಟು ಹಾಕಿತ್ತು. ಟ್ರೈಲರ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು ಮತ್ತು ಸಿನಿಮಾ ಜುಲೈ 21 ರಂದು ತೆರೆಗೆ ಬರಲು ಸಜ್ಜಾಗಿತ್ತು. ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯಾ ಅವರು ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ‌.

ಆದರೆ ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಹೊತ್ತಲ್ಲೇ ನಟಿ ರಮ್ಯಾ ಅವರು ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ರಮ್ಯಾ ಅವರು ಟ್ರೇಲರ್ ನಲ್ಲಿ ಇರುತ್ತಾರೆ ಎನ್ನುವ ಮಾತುಕತೆ ಮೊದಲೇ ಆಗಿತ್ತು, ಆದರೆ ನಟಿ ಚಿತ್ರೀಕರಣದ ವೇಳೆ ಸನ್ನಿವೇಶವೊಂದರ ಬಗ್ಗೆ ಚರ್ಚಿಸಿದೆ ಈಗ ತಕರಾರು ಮಾಡಿರುವುದು ನಿರ್ಮಾಪಕರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಟ್ರೈಲರ್ ನಲ್ಲಿ ಒಂದು ಕಡೆ ನಟಿ ರಮ್ಯ ಅವರು ಮಾದಕವಾಗಿ ಕಂಡಿದ್ದಾರೆ.

ಈಗ ನಟಿ ಇದೇ ದೃಶ್ಯದ ವಿಷಯವಾಗಿ ತಕರಾರು ಮಾಡಿ ಕೋರ್ಟ್ ಮೆಟ್ಟಿಲೇರಿರುವುದು ಚಿತ್ರತಂಡಕ್ಕೆ ಬೇಸರವನ್ನು ಮೂಡಿಸಿದೆ. ಈಗ ನಟಿ ಸಿನಿಮಾಕ್ಕೆ ತಡೆಕೋರಿ ಕೋರ್ಟ್ ಮೆಟ್ಟಿಲೇರಿರುವುದರಿಂದ ಸಿನಿಮಾ ನಿಗಧಿತ ದಿನಾಂಕಕ್ಕೆ ಬಿಡುಗಡೆ ಆಗುವುದೋ ಅಥವಾ ಬಿಡುಗಡೆ ಮುಂದಕ್ಕೆ ಹೋಗುವುದೋ ಎನ್ನುವುದು ಪ್ರಶ್ನೆಯಾಗಿದೆ. ಹೊಸಬರ ಸಿನಿಮಾಕ್ಕೆ ಬಿಡುಗಡೆ ವೇಳೆಯೇ ಸಂಕಷ್ಟ ಎದುರಾಗಿದ್ದು ಸಿನಿ ಪ್ರೇಮಿಗಳಿಗೂ ಬೇಸರ ಉಂಟು ಮಾಡಿದೆ.

Related posts

ಲೋಕಸಭೆ ಚುನಾವಣೆ : ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು : ಸಿಟಿ ಸಿವಿಲ್ ಕೋರ್ಟು ಆದೇಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ

This website uses cookies to improve your experience. We'll assume you're ok with this, but you can opt-out if you wish. Read More