ಕನ್ನಡ ಸಿನಿಮಾ ರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದು, ಈ ಸಿನಿಮಾ ಬಿಡುಗಡೆಯಾಗಿ ಈಗ ಸಖತ್ ಸದ್ದು ಮಾಡುತ್ತಿರುವ ವಿಚಾರ ಈಗಾಗಲೇ ಸುದ್ದಿಗಳಾಗಿದೆ. ಹೌದು, ಶಿವರಾಜ್ ಕುಮಾರ್ ಅವರು ತಮಿಳಿನ ಸ್ಟಾರ್ ನಟ ರಜನೀಕಾಂತ್ ಅವರ ‘ಜೈಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರದ ಅವಧಿ ಕಡಿಮೆಯಾದರೂ ಪ್ರೇಕ್ಷಕರ ಮೇಲೆ ಅದರ ಪರಿಣಾಮ ಮಾತ್ರ ಬಹಳ ಭರ್ಜರಿಯಾಗಿ ಅಗಿದೆ.
ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಅಭಿಮಾನಿಗಳು ಮಾತ್ರವೇ ಅಲ್ಲದೇ ತಮಿಳಿನ ಸಿನಿಮಾ ಅಭಿಮಾನಿಗಳೂ ಸಹಾ ಶಿವಣ್ಣನ ಪಾತ್ರಕ್ಕೆ ಅಪಾರವಾದ ಮೆಚ್ಚುಗೆ ನೀಡಿದ್ದಾರೆ. ಜೈಲರ್ ಸಿನಿಮಾದ ಮೂಲಕ ಶಿವಣ್ಣ ತಮ್ಮ ಮೊದಲ ತಮಿಳು ಸಿನಿಮಾದಲ್ಲೇ ಗೆಲುವನ್ನು ಕಂಡಿದ್ದಾರೆ. ಇಂತಹುದೊಂದು ಸಂತೋಷವನ್ನು ಹಂಚಿಕೊಳ್ಳಲು, ಕರ್ನಾಟಕದ ವಿತರಕರಾದ ಮೋಹನ್ ಮತ್ತು ಜಯಣ್ಣ ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ, ನೆನಪಿನ ಕಾಣಿಕೆ ನೀಡಿ ಶುಭಾಶಯ ತಿಳಿಸಿದ್ದಾರೆ.
ಎನ್.ಎಸ್. ರಾಜಕುಮಾರ್ ಕೂಡಾ ಇಂತಹುದೊಂದು ಸಂತೋಷದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಜೈಲರ್ ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ರಜನೀಕಾಂತ್ ಅವರ ಸಿನಿಮಾ ಮತ್ತೊಮ್ಮೆ ಅಬ್ಬರಿಸಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವನ್ನು ಪಡೆಯದೇ ಇದ್ದ ತಲೈವಾ ಇದೀಗ ಜೈಲರ್ ಮೂಲಕ ದೊಡ್ಡ ಗೆಲುವನ್ನು ಪಡೆದಿದ್ದಾರೆ.