ಬಾಲಿವುಡ್ ನ ಹಿರಿಯ ನಟಿ, ಒಂದು ಕಾಲದ ಸ್ಟಾರ್ ನಟಿ, ಎವರ್ ಗ್ರೀನ್ ಸೌಂದರ್ಯಕ್ಕೆ ಹೆಸರಾದ ನಟಿ ರೇಖಾ ಅವರ ವೈಯಕ್ತಿಕ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ರೇಖಾ ಅವರ ವೈಯಕ್ತಿಯ ಜೀವನದ ಕೆಲವೊಂದು ಸುದ್ದಿಗಳು ಆಗಾಗ ಸುದ್ದಿಯಾಗಿ ತೀವ್ರ ಕುತೂಹಲವನ್ನು ಉಂಟು ಮಾಡುತ್ತದೆ. ಆದರೆ ಈಗ ನಟಿಯ ಕುರಿತಾಗಿ ಹೊಸದೊಂದು ಶಾಕಿಂಗ್ ಸುದ್ದಿ ಹೊರ ಬಂದಿದ್ದು, ಸಂಚಲನ ಸೃಷ್ಟಿಸಿದೆ. ನಟಿಯ ರೇಖಾ ದಿ ಅನ್ ಟೋಲ್ಡ್ ಸ್ಟೋರಿ ಹೆಸರನ ಬಯೋಗ್ರಫಿಯಲ್ಲಿ ಹೊಸದೊಂದು ವಿಚಾರ ಬಯಲಾಗಿದೆ.
ಯಸ್ಸೆರ್ ಉಸ್ಮಾನ್ ಅವರು ಬರೆದಿರುವ ನಟಿ ರೇಖಾ ಅವರ ಬಯೋಗ್ರಫಿಯಲ್ಲಿ ನಟಿ ರೇಖಾಗೆ ಅವರ ಲೇಡಿ ಸೆಕ್ರೆಟರಿ ಫರ್ಜಾನಾ ಜೊತೆಗೆ ಸಂಬಂಧ ಇತ್ತು ಎಂದು ಬರೆಯಲಾಗಿದೆ. ಹೌದು, ಫರ್ಜಾನಾ ರೇಖಾ ಅವರ ಗೆಳತಿಯಾಗಿದ್ರು, ಸಪೋರ್ಟರ್ ಆಗಿದ್ದರು. ಅವರಿಲ್ಲದೇ ರೇಖಾ ಬದುಕ್ತಿರಲಿಲ್ಲ. ಫರ್ಜಾನಾಳನ್ನು ರೇಖಾ ಬಹಳವಾಗಿ ನಂಬಿದ್ದರು. ಕೆಲವರು ಅವರನ್ನು ಇ ಲವರ್ಸ್ ಎಂದಿದ್ದರು, ರೇಖಾ ಬೆಡ್ರೂಂಗೆ ಫರ್ಜಾನಾಗೆ ಮಾತ್ರ ಎಂಟ್ರಿ ಇತ್ತು ಎಂದೆಲ್ಲಾ ಹೇಳಲಾಗಿದೆ.’
ರೇಖಾಳ ಜೀವನದಲ್ಲಿ ಹಾಗೂ ಅವರ ಮನೆಯ ಆಗು ಹೋಗುಗಳನ್ನು ಫರ್ಜಾನಾ ಮೇಲ್ವಿಚಾರಣೆ ಮಾಡುತ್ತಿದ್ದರು. ರೇಖಾ ಅವರ ಪ್ರತಿ ಫೋನ್ ಕರೆಯನ್ನು ಪರಿಶೀಲಿಸುತ್ತಿದ್ದರು ಎಂದೂ ಸಹಾ ಪುಸ್ತಕದಲ್ಲಿ ಬರೆಯಲಾಗಿದೆ ಎನ್ನುವ ವಿಚಾರ ಹೊರ ಬಂದಿದೆ. ರೇಖಾ ಫರ್ಜಾನಾ ತನಗೆ ಸಹೋದರಿ ಎನ್ನುವ ಭಾವನೆ ಹೊಂದಿದ್ದರು. ಆದರೆ ಈಗ ಬಯೋಗ್ರಫಿಯಲ್ಲಿ ಬರೆದಿರುವ ಸಾಲುಗಳು ಹೊಸ ಅನುಮಾನಗಳನ್ನು ಹುಟ್ಟಿಸಿದೆ.