ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೆಲವೊಮ್ಮೆ ನಮ್ಮ ಮನಸ್ಸನ್ನು ಆಟವಾಡಿಸುತ್ತವೆ. ವಾಸ್ತವದಲ್ಲಿ ಈ ಆಸಕ್ತಿದಾಯಕ ಚಿತ್ರಗಳು ನಮ್ಮ ಬುದ್ಧಿಯನ್ನು ಇನ್ನಷ್ಟು ಸಕ್ರಿಯಗೊಳಿಸುತ್ತವೆ. ಈ ಚಿತ್ರಗಳಲ್ಲಿ ಅಡಗಿರುವಂತಹ ಕೆಲವು ವಿಷಯಗಳನ್ನು ನಾವು ಕಂಡುಹಿಡಿಯಬೇಕು ಮತ್ತು ಕೆಲವೊಮ್ಮೆ ತಪ್ಪುಗಳನ್ನು ಗುರುತಿಸುವ ಚಿತ್ರಗಳು ಕೂಡಾ ನಮಗೆ ನೋಡಲು ಸಿಗುತ್ತವೆ. ಇಂತಹ ಆಸಕ್ತಿದಾಯಕ ಚಿತ್ರಗಳನ್ನು ಮೊದಲೆಲ್ಲಾ ನಾವು ಪತ್ರಿಕೆಯಲ್ಲಿ ನೋಡುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಇಂಟರ್‌ನೆಟ್ ಇದೆ.
ಇಲ್ಲಿ ಇಂತಹ ದೃಷ್ಟಿ ಭ್ರಮೆಯ ನೂರಾರು ಚಿತ್ರಗಳು ನಿಮಗೆ ಸಿಗುತ್ತವೆ. ಅವುಗಳಲ್ಲಿ ಇಂದು ನಾವು ನಿಮಗಾಗಿ ಒಂದು ಚಿತ್ರವನ್ನು ಆರಿಸಿ ತಂದಿದ್ದೇವೆ. ಈ ಚಿತ್ರದಲ್ಲಿ 4 ಎನ್ನುವ ಸಂಖ್ಯೆ ಬಹಳಷ್ಟು ಸಲ ಇರುವುದನ್ನು ನೋಡಬಹುದು. ಇದನ್ನು ನೋಡಿದಾಗ ಖಂಡಿತ ನಿಮಗೆ ಇದರಲ್ಲಿ ಇರುವುದು ಕೇವಲ ನಾಲ್ಕು ಎನ್ನುವ ಸಂಖ್ಯೆ ಮಾತ್ರವೇ ಎನಿಸಿರಲೂ ಬಹುದು. ಆದರೆ ವಾಸ್ತವದಲ್ಲಿ ನಿಮ್ಮ ಆಲೋಚನೆ ತಪ್ಪಾಗಿದೆ. ಏಕೆಂದರೆ ಈ ಸಂಖ್ಯೆಗಳ ನಡುವೆ ಆಂಗ್ಲ ಭಾಷೆಯ ‘A’ ಅಕ್ಷರವೊಂದು ಅಡಗಿಕೊಂಡಿದೆ.
ನೀವು ಈಗ ಇಂಗ್ಲಿಷ್ ವರ್ಣಮಾಲೆಯ ಮೊದಲ ಅಕ್ಷರವಾಗಿರುವ A ಈ ಚಿತ್ರದಲ್ಲಿ ಎಲ್ಲಿ ಅಡಗಿದೆ ಎನ್ನುವುದನ್ನು ಕಂಡುಹಿಡಿಯಬೇಕು. ನೀವು ಪ್ರತಿಭಾವಂತರಾಗಿದ್ದರೆ ಮತ್ತು ನಿಮ್ಮ ಕಣ್ಣುಗಳು ತೀಕ್ಷ್ಣವಾಗಿದ್ದರೆ, ನೀವು 10 ಸೆಕೆಂಡುಗಳಲ್ಲಿ ಈ ಅಕ್ಷರ ಎಲ್ಲಿದೆ ಎನ್ನುವುದನ್ನು ಗುರುತಿಸುವಿರಿ.
ನಿಮಗೆ ಚಿತ್ರದಲ್ಲಿ ‘A’ ಕಾಣುತ್ತಿದೆಯೇ? ಇಲ್ಲದಿದ್ದರೆ, ನೀವು ಮತ್ತೊಮ್ಮೆ ಪ್ರಯತ್ನ ಮಾಡಿ ನೋಡಿ. ನೀವು ಎಚ್ಚರಿಕೆಯಿಂದ ನೋಡಿದರೆ, ಖಂಡಿತವಾಗಿಯೂ ಅದು ನಿಮಗೆ ಕಾಣುತ್ತದೆ.
ಒಂದು ವೇಳೆ ಈಗಾಗಲೇ ನೀವು ‘A’ ಅಕ್ಷರವನ್ನು ಕಂಡುಕೊಂಡಿದ್ದರೆ, ನಿಮ್ಮ ಕಣ್ಣುಗಳ ನೋಟವು ನಿಜವಾಗಿಯೂ ಬಹಳ ತೀಕ್ಷ್ಣವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಂತಹ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಯಾವುದೇ ಸವಾಲನ್ನು ಸಹಾ ಎದುರಿಸುವ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀವು ಹೊಂದಿದ್ದೀರಿ ಮತ್ತು ಅದೊಂದು ಸ್ವತಃ ಮಹಾಶಕ್ತಿಯಾಗಿದೆ ಎಂದು ಹೇಳಬಹುದು.