Home » ಮಗಳ ಸಾಧನೆಯನ್ನು ಮೆಚ್ಚಿ, ಖುಷಿ ಹಂಚಿಕೊಂಡ ಹಿರಿಯ ನಟಿ ಮಾಧವಿ: ಶುಭ ಹಾರೈಸಿದ ನೆಟ್ಟಿಗರು

ಮಗಳ ಸಾಧನೆಯನ್ನು ಮೆಚ್ಚಿ, ಖುಷಿ ಹಂಚಿಕೊಂಡ ಹಿರಿಯ ನಟಿ ಮಾಧವಿ: ಶುಭ ಹಾರೈಸಿದ ನೆಟ್ಟಿಗರು

by Suddi Mane
0 comment

ಬಹು ಭಾಷಾ ನಟಿಯಾಗಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿಯೂ ಮಿಂಚಿದ ನಟಿ ಮಾಧವಿಯವರು ಚಿತ್ರರಂಗದಲ್ಲಿ ಬೇಡಿಕೆ ಇದ್ದ ಕಾಲದಲ್ಲೇ ಮದುವೆ ಮಾಡಿಕೊಂಡು ವಿದೇಶಕ್ಕೆ ಹೋಗಿ ಅಲ್ಲೇ ನೆಲೆಸಿದರು. ಪ್ರಸ್ತುತ ಅವರು ಸಿನಿಮಾರಂಗದಿಂದ ದೂರವೇ ಉಳಿದಿದ್ದು, ಕುಟುಂಬ ಹಾಗೂ ಮಕ್ಕಳ ಜೊತೆಯಲ್ಲಿ ಆರಾಮವಾಗಿ, ಸಂತೋಷದ ಜೀವನವನ್ನು ಕಳೆಯುತ್ತಿದ್ದಾರೆ. ನಟಿ ಮಾಧವಿಯವರು ದಕ್ಷಿಣದ ನಾಲ್ಕು ಭಾಷೆಗಳು ಮತ್ತು ಹಿಂದಿಯಲ್ಲಿ ಕೂಡಾ ನಟಿಸುವ ಮೂಲಕ ಪಂಚ ಭಾಷಾ ತಾರೆಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು

ನಟಿ ಮಾಧವಿಯವರು ತಮ್ಮ ಗುರು ಗಳು ನಿಶ್ಚಯಿಸಿದ ರಾಲ್ಫ್ ಶರ್ಮಾ ಅವರ ಜೊತೆ ಮದುವೆಯಾಗಿ ವಿದೇಶಕ್ಕೆ ತೆರಳಿದರು. ಮದುವೆಯ ನಂತರ ಮಾಧವಿಯವರು ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಮಾಧವಿ ರಾಲ್ಫ್ ಶರ್ಮಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಎರಡನೇ ಮಗಳು ಪ್ರೆಸಿಲ್ಲಾ ಅರ್ಪಣಾ ಕುರಿತಾಗಿ ಮಾಧವಿಯವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂತೋಷದ ವಿಷಯವೊಂದನ್ನು ಹಂಚಿಕೊಂಡಿದ್ದು, ತಮ್ಮ ಖುಷಿಯನ್ನು ಎಲ್ಲರ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.

ನಟಿ ಮಾಧವಿ ಅವರು ತಮ್ಮ ಎರಡನೇ ಮಗಳು ಪ್ರೆಸಿಲ್ಲಾ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮಗಳಿಗೆ ಕಂಗ್ರಾಜುಲೇಷನ್ಸ್ ಹೇಳಿದ್ದಾರೆ. ಮೂರು ವರ್ಷಗಳ ಕಾಲೇಜು ಶಿಕ್ಷಣ ಪೂರೈಸಿದ್ದು, 4.0 ಜಿಪಿಎ, ಮೂರು ಪ್ರಶಸ್ತಿಗಳನ್ನು ಗಳಿಸಿರುವ ಮಗಳಿಗೆ ಶುಭ ಹಾರೈಸಿದ್ದಾರೆ. ಇದೇ ವೇಳೆ ಮಗಳಿಗೆ ಹಾರ್ವರ್ಡ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಮಾಸ್ಟರ್ ಪ್ರೋಗ್ರಾಮ್ ಅವಕಾಶ ಸಿಕ್ಕಿರುವುದನ್ನು ತಿಳಿಸಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ನಿನ್ನ ಅಪ್ಪ, ಸಹೋದರಿಯಾದ ಎವ್ಲಿನ್, ಟಿಫಾನಿ ಹಾಗೂ ನಾನು ಹೆಮ್ಮೆಪಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies