ಜನರಿಗೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಬೇಕು ಎನ್ನುವುದು ಒಂದು ಗೀಳಾಗಿ ಪರಿಣಮಿಸಿದೆ. ಅದಕ್ಕಾಗಿ ಅವರು ಏನು ಮಾಡೋದಕ್ಕೂ ಹಿಂಜರಿಯುವುದಿಲ್ಲ. ತಾವು ಇರುವ ಸ್ಥಳ ಅಥವಾ ಸಮಯದ ಚಿಂತೆ ಮಾಡುವುದಿಲ್ಲ. ಜಸ್ಟ್ ಕ್ಯಾಮೆರಾವನ್ನು ತಿರುಗಿಸಿ ವಿಚಿತ್ರವಾದ ಕೆಲಸಗಳನ್ನು ಮಾಡೋದಕ್ಕೆ ಮುಂದಾಗಿ ಬಿಡ್ತಾರೆ. ಧಾರ್ಮಿಕ ನಗರ ಎನಿಸಿಕೊಂಡಿರುವ ಅಯೋಧ್ಯೆಯಲ್ಲಿ ಈಗ ಅಂತಹುದೊಂದು ಘಟನೆ ವರದಿಯಾಗಿದೆ.
ಹೌದು, ಅಯೋಧ್ಯೆಯಲ್ಲಿ ಸರಯು ನದಿಯಲ್ಲಿ ಯುವತಿಯೊಬ್ಬಳು ನೃತ್ಯ ಮಾಡುತ್ತಿರುವ ದೃಶ್ಯದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಯುವತಿಯ ಡ್ಯಾನ್ಸ್ ವಿಡಿಯೋವನ್ನು ‘ಅ ಶ್ಲೀ ಲ’ ಎಂದು ಕರೆದಿರುವ ನೆಟ್ಟಿಗರು, ಪುಣ್ಯ ನದಿಯಲ್ಲಿ ಸಿನಿಮಾದ ಹಾಡಿಗೆ ಮಾದಕ ನೃತ್ಯ ಮಾಡಿದ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವೀಡಿಯೋ ನೋಡಿದವರೆಲ್ಲಾ ಯುವತಿಯ ಹುಚ್ಚಾಟ ಕಂಡು ಶಾಕ್ ಆಗಿದ್ದಾರೆ. ರಾಮ ಮಂದಿರದ ಮುಂದೆ ಯುವತಿ ಇಂತಹ ಡ್ಯಾನ್ಸ್ ಮಾಡಿರುವುದು ಜನರಿಗೆ ಇಷ್ಟವಾಗಿಲ್ಲ. ಯುವತಿ ಯಾರ ಬಗ್ಗೆಯೂ ಕೇರ್ ಮಾಡದೇ ರೀಲ್ಸ್ ವೀಡಿಯೋ ಮಾಡಲು ಮುಂದಾಗಿದ್ದಾಳೆ. ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದ ಈ ಯುವತಿ ಸರಯೂ ನದಿಯೊಳಗೆ ಇಳಿದು, ‘ಪಾನಿ ಮೇ ಆಗ್ ಲಗಾನಿ ಹೈ’ (ನೀರಿನಲ್ಲಿ ಬೆಂಕಿ ಹೊತ್ತಿಸಬೇಕು) ಎಂಬ ಹಾಡಿಗೆ ಕುಣಿಯಲು ಆರಂಭಿಸುತ್ತಾಳೆ.
ರಾಮನ ಸನ್ನಿಧಾನದಲ್ಲಿ ಹರಿಯುವ ಪರಮ ಪಾವನ ನದಿಯಾದ ಸರಯೂ ನದಿಯಲ್ಲಿ ಸ್ನಾನ ಮಾಡಲು ಮತ್ತು ಧ್ಯಾನ ಮಾಡಲು ಭಕ್ತರು ದೂರ ದೂರಗಳಿಂದ ಇಲ್ಲಿಗೆ ಬರುತ್ತಾರೆ. ಹೀಗಿರುವಾಗ ನದಿಯ ಪರಿಸರದಲ್ಲಿ ಯುವತಿಯು ಹೀಗೆ ರೀಲ್ ಮಾಡುವುದನ್ನು ಜನ ಇಷ್ಟಪಡುತ್ತಿಲ್ಲ. ಅಲ್ಲದೇ ಈಗಾಗಲೇ ಪೋಲಿಸರು ಸಹಾ ನದಿಯಲ್ಲಿ ಡ್ಯಾನ್ಸ್ ಮಾಡಿದ ಯುವತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದೆ.