ಈ ವರ್ಷ ದೇಶದಲ್ಲಿ ಹೆಚ್ಚು ಸದ್ದು, ಸುದ್ದಿಯನ್ನು ಮಾಡಿದ ಮತ್ತು ಸಾಕಷ್ಟು ಚರ್ಚೆಗಳಿಗೆ ಕಾರಣವಾದ ಸಿನಿಮಾ ಅಂದರೆ ಅದು ಸುದಿಪ್ತೋ ಸೇನ್ ನಿರ್ದೇಶನ ದಿ ಕೇರಳ ಸ್ಟೋರಿ (The Kerala Story) ಸಿನಿಮಾ. ನಟಿ ಅದಾ ಶರ್ಮಾ (Ada Sharma ) ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸಿನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ದೇಶದಲ್ಲಿ ಅಂತಹುದೊಂದು ಸಕ್ಸಸ್ ಕಂಡ ಮೊದಲ ಮಹಿಳಾ ಪ್ರಧಾನ ಕಥಾವಸ್ತುವಿನ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಸಹಾ ಈ ಸಿನಿಮಾ ಪಡೆದುಕೊಂಡಿದೆ.
ಹೀಗೆ ಥಿಯೇಟರ್ ಗಳಲ್ಲಿ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಮತ್ತು ಯಶಸ್ಸನ್ನು ಪಡೆದುಕೊಂಡ ಈ ಸಿನಿಮಾಕ್ಕೆ ಇದೀಗ ಸಮಸ್ಯೆಯೊಂದು ಎದುರಾಗಿದೆ. ಹೌದು, ಇಡೀ ದೇಶದಲ್ಲಿ ಸಂಚಲನ ವಿಜಯ ಸಾಧಿಸಿದ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಓಟಿಟಿ ಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಸಮಸ್ಯೆ ಎದುರಾಗಿದ್ದು, ಯಾವುದೇ ಓಟಿಟಿ ಫ್ಲಾಟ್ ಫಾರಂ ಸಹಾ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡಿ ಅಚ್ಚರಿಯನ್ನು ಮೂಡಿಸಿದೆ.
ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಸುದಿಪ್ತೋ ಸೇನ್ (Sudipto Sen) ನೇರವಾಗಿ ಬಾಲಿವುಡ್ ಮೇಲೆ ಆರೋಪವನ್ನು ಮಾಡಿದ್ದಾರೆ. ಬಾಕ್ಸಾಫೀಸಿನಲ್ಲಿ ನಮ್ಮ ಸಿನಿಮಾ ಕಂಡ ಯಶಸ್ಸಿಗಾಗಿ ನಮ್ಮನ್ನು ಶಿ ಕ್ಷಿ ಸಲು ಬಾಲಿವುಡ್ ಗುಂಪುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಇಲ್ಲಿಯವರೆಗೆ, ನಮಗೆ ಸೂಕ್ತವಾದ, ಯೋಗ್ಯವಾದ ಯಾವುದೇ ಆಫರ್ ಓಟಿಟಿ ಕಡೆಯಿಂದ ಬಂದಿಲ್ಲ. ಚಿತ್ರರಂಗವು ನಮಗೆ ತೊಂದರೆ ನೀಡಲು ಗುಂಪುಗಾರಿಕೆ ಮಾಡಿದಂತೆ ಕಾಣುತ್ತಿದೆ ಎಂದಿದ್ದಾರೆ.