Home » ಆಪರೇಷನ್ ಥಿಯೇಟರ್ ನಲ್ಲೂ ಹಿಜಾಬ್ ಗೆ ಅವಕಾಶ ಕೊಡಿ: ವೈದ್ಯಕೀಯ ವಿದ್ಯಾರ್ಥಿನಿಯರಿಂದ ಪ್ರಾಂಶುಪಾಲರಿಗೆ ಪತ್ರ

ಆಪರೇಷನ್ ಥಿಯೇಟರ್ ನಲ್ಲೂ ಹಿಜಾಬ್ ಗೆ ಅವಕಾಶ ಕೊಡಿ: ವೈದ್ಯಕೀಯ ವಿದ್ಯಾರ್ಥಿನಿಯರಿಂದ ಪ್ರಾಂಶುಪಾಲರಿಗೆ ಪತ್ರ

by Suddi Mane
0 comment

ಕರ್ನಾಟಕದಲ್ಲಿ ಕಳೆದ ವರ್ಷ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಡೆದ ದೊಡ್ಡ ಚರ್ಚೆಯು ಇಡೀ ದೇಶವ್ಯಾಪಿ ಸುದ್ದಿಯಾಗಿ ಬಹಳಷ್ಟು ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದ ವಿಷಯ ಎಲ್ಲರಿಗೂ ತಿಳಿದಿದೆ. ಈಗ ಕೇರಳದ ತಿರುವನಂತಪುರಂ ಕ್ಯಾಂಪಸ್ ನಲ್ಲಿ ಹಿಜಾಬ್ ಕುರಿತಾದ ಚರ್ಚೆಗಳು ಆರಂಭವಾಗಿದೆ. ಇಲ್ಲಿನ ಮೆಡಿಕಲ್ ಕಾಲೇಜಿನ ಏಳು ಜನ ವೈದ್ಯಕೀಯ ವಿದ್ಯಾರ್ಥಿನಿಯರು ಪತ್ರವನ್ನು ಬರೆದಿದ್ದು, ತಾವು ಸರ್ಜಿಕಲ್ ಡ್ಯೂಟಿ ಮಾಡುವಾಗ ಹಿಜಾಬ್ ಧರಿಸಲು ಅವಕಾಶವನ್ನು ನೀಡಬೇಕು ಎಂದು ಕೇಳಿದ್ದಾರೆ. ಈ ವಿಷಯ ಈಗ ಮತ್ತೊಮ್ಮೆ ಹಿಜಬ್ ವಿಚಾರವಾಗಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ.

ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ, ಮುಸ್ಲಿಂ ಮಹಿಳೆಯರು ಎಲ್ಲಾ ಸಂದರ್ಭದಲ್ಲಿಯೂ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ ಎಂದು ಕಾಲೇಜಿನ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆಪರೇಷನ್ ಥಿಯೇಟರ್ ಒಳಗೆ ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ, ಮುಸ್ಲಿಂ ಮಹಿಳೆಯರಿಗೆ ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲ ಸಂದರ್ಭಗಳಲ್ಲೂ ಹಿಜಾಬ್ ಕಡ್ಡಾಯವಾಗಿದೆ ವಿದ್ಯಾರ್ಥಿಗಳು ತಿಳಿಸಿದ್ದಾರೆ.ಹಿಜಾಬ್ ಧರಿಸುವ ಮಹಿಳೆಯರು ಧಾರ್ಮಿಕವಾಗಿ ಉಡುಗೆಯನ್ನು ಧರಿಸಬೇಕು ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಲ್ಲೂ ಅನುಸರಿಸಬೇಕು ಎಂದು ತಿಳಿಸಲಾಗಿದೆ. ಪ್ರಪಂಚದ ಇತರ ಭಾಗಗಳಲ್ಲಿ ಏಕರೂಪದ ಆರೋಗ್ಯ ಕಾರ್ಯಕರ್ತರ ಆಧಾರದ ಮೇಲೆ ಪರ್ಯಾಯಗಳನ್ನು ಸೂಚಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ವಿಧಾನಗಳಿಗಾಗಿ ಬಟ್ಟೆಗಳನ್ನು ತಯಾರಿಸುವ ಕಂಪನಿಗಳು ನೀಡುವ ಆಯ್ಕೆಗಳನ್ನು ಸೂಚಿಸುತ್ತದೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

ಲಾಂಗ್ ಸ್ಲೀವ್ ಸ್ಕ್ರಬ್ ಜಾಕೆಟ್ ಗಳು ಮತ್ತು ಸ್ಟೆರೈಲ್ ಆಗಿರುವ ಸರ್ಜಿಕಲ್ ಹುಡ್ ಗಳಂತೆಯೇ ಹಿಜಾಬ್ ಕೂಡಾ ಎಂದು ಪತ್ರದಲ್ಲಿ ಹೇಳಲಾಗಿದೆ.ಹಿಜಾಬ್ ನಮಗೆ ಅವಕಾಶವನ್ನು ನೀಡಬೇಕೆಂದು ಪ್ರಾಂಶುಪಾಲರಲ್ಲಿ ಮನವಿಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಕುರಿತು ಚರ್ಚಿಸಲು ಒಂದು ಸಮಿತಿಯನ್ನು ರಚಿಸಿರಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಲಿನೆಟ್ ಮೊರಿಸ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಅಲ್ಲದೇ ಅವರು ವಿದ್ಯಾರ್ಥಿಗಳ ಬೇಡಿಕೆಯನ್ನು ಸದ್ಯಕ್ಕೆ ಒಪ್ಪಲು ಸಾಧ್ಯವಿಲ್ಲ. ಆಪರೇಷನ್ ಥಿಯೇಟರ್ ಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಮತ್ತು ನಮಗೆ ರೋಗಿಗಳ ಸುರಕ್ಷತೆಯೇ ಮೊದಲ ಆದ್ಯತೆಯೆಂದು ಪ್ರಾಂಶುಪಾಲೆಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವಿಚಾರವಾಗಿ ನೇಮಿಸಿರುವ ಸಮಿತಿ ಹತ್ತು ದಿನಗಳಲ್ಲಿ ಈ ವಿಚಾರಕ್ಕೆ ಪರಿಹಾರ ನೀಡಲಿದೆಯೆಂದು ಹೇಳಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies