ಹರಿಯಾಣದಲ್ಲಿ ಕೆಲವೇ ದಿನಗಳ ಹಿಂದೆ ನಡೆದ ಒಂದು ಅವಘಡ ಇಡೀ ದೇಶದಲ್ಲಿ ಸುದ್ದಿ ಮಾಡಿತ್ತು. ಹರಿಯಾಣದ ನುಹ್ ನಲ್ಲಿ ಕೆಲವೇ ದಿನಗಳ ಹಿಂದೆ ಬಹಳ ದೊಡ್ಡ ಮಟ್ಟದಲ್ಲಿ ಕೋಮು ಗಲಭೆ ಪ್ರಕರಣಗಳು ನಡೆಯುವ ಮೂಲಕ ಆತಂಕವನ್ನು ಹುಟ್ಟು ಹಾಕಿತ್ತು. ವಿಶ್ವ ಹಿಂದೂ ಪರಿಷತ್ ನ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ, ಗುಂಡು ಹಾರಿಸಿದ್ದ ಪ್ರಕರಣಗಳು ವರದಿಯಾಗಿವೆ. ಈ ಘಟನೆಯ ಹಿನ್ನೆಲೆಯಲ್ಲಿ ಇದೀಗ ಮುಸ್ಲಿಮರ ವಿರುದ್ದ ಹರಿಯಾಣದಲ್ಲಿ ಆಕ್ರೋಶ ಹೆಚ್ಚಾಗಿದೆ.
ಹರಿಯಾಣದಲ್ಲಿನ 3 ಜಿಲ್ಲೆಗಳಲ್ಲಿನ ಒಟ್ಟು 14 ಹಳ್ಳಿಗಳು ಮುಸಲ್ಮಾನರನ್ನೇ ಬಹಿಷ್ಕರಿಸುವ ನಿರ್ಧಾರವನ್ನು ಮಾಡಿದ್ದಾರೆ. ಈ ವಿಚಾರವಾಗಿ ಗ್ರಾಮಗಳು ತಮ್ಮ ನಿರ್ಣಯವನ್ನು ಪೊಲೀಸರಿಗೆ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಮುಖೇನ ತಾವು ಮುಸ್ಲಿಂ ಸಮುದಾಯದ ಸದಸ್ಯರನ್ನು ಬಹಿಷ್ಕರಿಸುವ ನಿರ್ಧಾರವನ್ನು ತಿಳಿಸಿವೆ. ಹರಿಯಾಣದಲ್ಲಿ ಕೆಲವೇ ದಿನಗಳ ಹಿಂದೆ ನಡೆದ ಕೋಮು ಗಲಭೆಯ ಬಳಿಕ ಪಂಚಾಯತ್ ಇಂತಹುದೊಂದು ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ನ ಧಾರ್ಮಿಕ ಮೆರವಣಿಗೆಯ ಮೇಲೆ ನಡೆದಂತಹ ಕೋಮು ಘರ್ಷಣೆಯಿಂದ ಹಾನಿಗೊಳಗಾದ ಮಹೇಂದ್ರ ಗಢ, ಜಜ್ಜರ್ ಮತ್ತು ರೇವಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ 14 ಗ್ರಾಮಗಳು ಬರುತ್ತವೆ. ನುಹ್ ನಲ್ಲಿ ಆರಂಭವಾದಂತಹ ಹಿಂಸಾಚಾರವು ಇತರ ಜಿಲ್ಲೆಗಳಿಗೆ ಹರಡಿ, ಈ ಕೋಮು ಗಲಭೆಯಲ್ಲಿ 6 ಜೀವಗಳು ಬಲಿಯಾದರೆ ಆಸ್ತಿಪಾಸ್ತಿಗೂ ನಷ್ಟ ಉಂಟಾಗಿದೆ.