ಮೋದಿ ನನ್ನ ಮಗ, ನನ್ನ ಆಸ್ತಿಯೆಲ್ಲಾ ಅವರಿಗೆ: ಶತಾಯುಷಿ ಮಹಿಳೆಯ ಮೋದಿ ಪ್ರೀತಿ

ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದಲ್ಲಿ ಮೆಚ್ಚುವವರು ಇದ್ದಾರೆ ಹಾಗೂ ಇದೇ ವೇಳೆ ಟೀಕೆ ಮಾಡುವವರು ಸಹಾ ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಮೋದಿಯವರ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ನೀಡಿದ್ದು, ಮೋದಿಯನ್ನು ಹಾಡಿ ಹೊಗಳಿ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಶತಾಯುಷಿ ಮಹಿಳೆಯೊಬ್ಬರು, ದೇಶದ ಪ್ರಧಾನಿ ಆಗಿರುವ ಮಾನ್ಯ ನರೇಂದ್ರ ಮೋದಿಯವರನ್ನು ತನ್ನ ಮಗನೆಂದು ಭಾವಿಸಿದ್ದು, ಆಕೆ ತಮ್ಮ ಆಸ್ತಿಯನ್ನು ಮೋದಿ ಹೆಸರಿಗೆ ಬದಲಿಸಲು ಇಷ್ಟ ಪಟ್ಟಿದ್ದಾರೆ.

ಮಧ್ಯಪ್ರದೇಶದ ರಾಜಗಢ ನಿವಾಸಿಯಾಗಿರುವ 100 ವರ್ಷದ ವೃದ್ಧೆ ಮಾಂಗಿ ಬಾಯಿ ತನ್ವರ್ ಅವರೇ ತಮ್ಮ 25 ಬಿಘಾ ಜಮೀನನ್ನು ಪ್ರಧಾನಿ ಮೋದಿಯವರ ಹೆಸರಿಗೆ ಬರೆಯಲು ಸಿದ್ಧತೆಗಳನ್ನು ನಡೆಸಿದ್ದು, ಇದು ಸಹಜವಾಗಿಯೇ ಎಲ್ಲರಿಗೂ ಸಹಾ ಅಚ್ಚರಿಯನ್ನು ಮೂಡಿಸಿದೆ. ಮಾಂಗಿ ಬಾಯಿ ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಜ್ಜಿಯ ಮಾತುಗಳಿಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಾಂಗಿ ಬಾಯಿ ತಾನು ಕೊನೆಯುಸಿರೆಳೆಯುವ ಮುನ್ನ ಒಂದೇ ಒಂದು ಸಲ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕೆಂಬ ಆಸೆಯನ್ನು ಹೊಂದಿದ್ದಾರೆ. ಈಕೆ ಮೋದಿಯವರ ಬಗ್ಗೆ, “ಮೋದಿಜಿ ನನ್ನ ಮಗ. ಅವರೇ ನನಗೆ ಮನೆ ನೀಡಿದ್ದಾರೆ, ಚಿಕಿತ್ಸೆ ಕೊಡಿಸುತ್ತಿದ್ದಾರೆ ಮತ್ತುವಧಾನ್ಯ ಖರೀದಿಸಲು ಹಣ ನೀಡುತ್ತಿದ್ದಾರೆ. ಮೋದಿಯವರ ಸಹಾಯದಿಂದಲೇ ನಾನು ತೀರ್ಥಯಾತ್ರೆ ಸಹಾ ಮಾಡಿದ್ದೇನೆಂದು ಹೇಳಿದ್ದಾರೆ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More