ದೈನಂದಿನ ಜೀವನದಲ್ಲಿ ನಾವು ಬಳಸುವ ಬಹಳಷ್ಟು ಹಣ್ಣು ಮತ್ತು ತರಕಾರಿಗಳಲ್ಲಿ ಅನೇಕ ಔಷಧೀಯ ಗುಣಗಳಿವೆ. ಆದ್ದರಿಂದಲೇ ಅವುಗಳಿಗೆ ಇತ್ತೀಚಿನ ದಿನಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ ಜನರು. ನಾವು ಬಳಸುವ ತರಕಾರಿಗಳಲ್ಲಿ ಟೊಮೆಟೊ ಬಹಳ ಪ್ರಮುಖವಾಗಿದೆ. ಇದೇ ಟೊಮೆಟೊದಿಂದ ನಿಮ್ಮ ಮುಖಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂದರೆ ಅಚ್ಚರಿಯಾಗಬಹುದು. ಹಾಗಾದರೆ ಟೊಮೊಟೋ ಹೇಗೆ ನಮಗೆ ಉಪಯುಕ್ತ ಎನ್ನುವುದನ್ನು ತಿಳಿಯೋಣ ಬನ್ನಿ.
ಕೆಂಪು ಟೊಮೊಟೋ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದು ನಮ್ಮ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಎಣ್ಣೆಯುಕ್ತ ಚರ್ಮ ಇದ್ದವರು, ಅದರಿಂದ ಆಗಾಗ ಬೇಸರ ಪಡುವುದುಂಟು. ಆದರೆ ಈ ಸಮಸ್ಯೆ ನಿವಾರಣೆಗೆ ಟೊಮೊಟೊಗಳು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮಾತ್ರವೇ ಅಲ್ಲದೇ ಚರ್ಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಟೊಮೊಟೋ ನಿವಾರಣೆ ಮಾಡುತ್ತದೆ. ಟೊಮೊಟೊ ಮುಖವನ್ನು ಸುಂದರವಾಗಿಸುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ.
ಟೊಮೊಟೊದಲ್ಲಿ ವಿಟಮಿನ್ ಸಿ ಮತ್ತು ಇತರ ಹಲವು ಪೋಷಕಾಂಶಗಳಿವೆ. ಟೊಮೊಟೋ ವನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ತ್ವಚೆಯ ರಂಧ್ರಗಳನ್ನು ಬಿಗಿಗೊಳಿಸಲು ಇದು ಸಹಾಯ ಮಾಡುತ್ತದೆ. ಟೊಮೆಟೊವನ್ನು ಹಚ್ಚುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ರುಬ್ಬಿದ ಟೊಮೊಟೊವನ್ನು ಜೇನುತುಪ್ಪದೊಂದಿಗೆ ಬೆರೆಸಿ ಹಚ್ಚುವುದರಿಂದ ಟ್ಯಾನಿಂಗ್ ಸಮಸ್ಯೆ ಕಡಿಮೆಯಾಗುತ್ತದೆ.
ಟೊಮೊಟೊ ಜೀರ್ಣಾಂಗ ವ್ಯವಸ್ಥೆಗೆ ಸಹಾ ಪ್ರಯೋಜನಕಾರಿಯಾಗಿದೆ : ನೀವು ಟೊಮೊಟೊವನ್ನು ಸಲಾಡ್ ರೂಪದಲ್ಲಿ ಅಥವಾ ಚಟ್ನಿ ಮಾಡುವ ಮೂಲಕವೂ ಅದನ್ನು ಸೇವಿಸಬಹುದು. ಇದರ ಸೂಪ್ ಅನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೂ ತುಂಬಾ ಪ್ರಯೋಜನಕಾರಿಯಾಗಿದೆ.
ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಟೊಮೊಟೊ ಸೇವನೆಯು ರಕ್ತ ಪರಿಚಲನೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾ ಪ್ರಯೋಜನಕಾರಿಯಾಗಿದೆ.