ಸಿನಿಮಾಗಳು ಯಶಸ್ಸು ಪಡೆದ ನಂತರ ಆ ಸಿನಿಮಾದ ತಮ್ಮ ಪಾತ್ರಗಳ ಹೆಸರಿನಿಂದಲೇ ನಟ ನಟಿಯರು ಭರ್ಜರಿ ಜನಪ್ರಿಯತೆಯನ್ನು ಪಡೆದುಕೊಳ್ಳೋದು ಸಹಾ ವಾಡಿಕೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ಸಿನಿಮಾ ನಾಯಕರ ಪಾತ್ರಗಳು ಜನರ ಮೇಲೆ ಮೋಡಿಯನ್ನು ಮಾಡುತ್ತವೆ. ಹೀಗೆ ತಮ್ಮ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದ ಟಾಪ್ ಒಂಬತ್ತು ಸೆಲೆಬ್ರಿಟಿಗಳ ಪಟ್ಟಿಯೊಂದು ಬಿಡುಗಡೆ ಆಗಿದೆ. ಹಾಗಾದ್ರೆ ಯಾವ ನಟ ಯಾವ ಪಾತ್ರದ ಮೂಲಕ ಎಷ್ಟನೇ ಸ್ಥಾನದಲ್ಲಿದ್ದಾರೆ ತಿಳಿಯೋಣ ಬನ್ನಿ.
ತ್ರಿಬಲ್ ಆರ್ ಸಿನಿಮಾ ಪಾತ್ರದ ಮೂಲಕ ಸದ್ದು ಮಾಡಿದ ಟಾಲಿವುಡ್ ನಟ ಜೂನಿಯರ್ ಎನ್ ಟಿ ಆರ್ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಮಿಂಚಿದ್ದ ಮತ್ತೊಬ್ಬ ಸ್ಟಾರ್ ನಟ ರಾಮ್ ಚರಣ್ ತಮ್ಮ ಪಾತ್ರದ ಜನಪ್ರಿಯತೆಯಿಂದಾಗಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಪುಷ್ಪ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಅಲ್ಲು ಅರ್ಜುನ್ ಪುಷ್ಪ ರಾಜ್ ಪಾತ್ರದ ಜನಪ್ರಿಯತೆಯಿಂದ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚಿಗೆ ದೇಶದಲ್ಲಿ ಸಖತ್ ಸುದ್ದಿ, ಚರ್ಚೆಗಳಿಗೆ ಕಾರಣವಾಗಿರೋ ಕೇರಳ ಸ್ಟೋರಿ ಸಿನಿಮಾದ ನಾಯಕಿಯಾಗಿ ಅದಾ ಶರ್ಮ ನಿರ್ವಹಿಸಿದ ಪಾತ್ರ ಸಾಕಷ್ಟು ಹೆಸರು ಮಾಡಿದ್ದು, ನಟಿ ಅದಾ ಶರ್ಮ ಅತ್ಯುನ್ನತ ಸ್ಥಾನ ಪಡೆದ ಸೆಲೆಬ್ರಿಟಿಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಕಾಂತಾರ ಸಿನಿಮಾದ ಮೂಲಕ ಇಡೀ ದೇಶದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ತಮಿಳಿನ ಸ್ಟಾರ್ ನಟ ಸೂರ್ಯ.
ಏಳನೇ ಸ್ಥಾನ ಯಾರಿಗೆ ಅನ್ನೋದಾದ್ರೆ ಇಲ್ಲಿ ರಾಕಿಂಗ್ ಸ್ಟಾರ್ ಇದ್ದಾರೆ. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ, ರಾಕಿ ಭಾಯ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ ಯಶ್ ಅವರು ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ಬಹು ದಿನಗಳ ನಂತರ ಬಂದ ಸೂಪರ್ ಹಿಟ್ ಸಿನಿಮಾ ಪಠಾಣ್ ನ ಪಾತ್ರದಿಂದಾಗಿ ಸ್ಟಾರ್ ನಟ ಶಾರೂಖ್ ಖಾನ್ ಎಂಟನೇ ಸ್ಥಾನಕ್ಕೆ ತೃಪ್ತಿ ಇಟ್ಟುಕೊಂಡಿದ್ದಾರೆ.
ಇನ್ನು ಕಳೆದ ವರ್ಷ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಜನಪ್ರಿಯತೆ ಪಡೆದ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.