ಓಂ ರಾವುತ್ ನಿರ್ದೇಶನದಲ್ಲಿ, ನಟ ಪ್ರಭಾಸ್ ನಾಯಕನಾಗಿ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಬಾರೀ ನಿರೀಕ್ಷೆಗಳನ್ನು ಹುಟ್ಟಿಸಿದ್ದ ಆದಿಪುರುಷ್ ಸಿನಿಮಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಲೇ ಎಲ್ಲವನ್ನೂ ದಾಟಿಕೊಂಡು ಬಿಡುಗಡೆಯಾಗಿದೆ. ಆದರೆ ಬಿಡುಗಡೆಯ ನಂತರವೂ ಸಿನಿಮಾಕ್ಕೆ ವಿವಾದದ ಬಿಸಿ ತಟ್ಟಿದೆ. ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ ಸಹಾ, ಮತ್ತೊಂದು ಕಡೆ ಸಿನಿಮಾ ವಿರುದ್ಧವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಆದಿಪುರುಷ್ ಬಿಡುಗಡೆ ಆದ ಎರಡೇ ದಿನಗಳಲ್ಲಿ ಸುಮಾರು 300 ಕೋಟಿ ಗಳಿಕೆ ಮಾಡಿದೆ.
ಕನ್ನಡ ಸಿನಿಮಾ ರಂಗದ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅದೆಷ್ಟೋ ಜನರ ಅಚ್ಚುಮೆಚ್ಚಿನ ಜೋಡಿಯಾಗಿದೆ. ಇವರನ್ನು ಅಭಿಮಾನಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈ ಜೋಡಿಯನ್ನು ರಾಮ ಮತ್ತು ಸೀತೆಯ ರೂಪದಲ್ಲಿ ನೋಡಿದರೆ ಹೇಗಿರಬಹುದು? ಎನ್ನುವ ಆಲೋಚನೆ ಮಾಡಿದಾಗ ಬಹಳಷ್ಟು ಜನ ಅಭಿಮಾನಿಗಳು ಸಹಾ ಈ ಜೋಡಿಯನ್ನು ಆ ರೀತಿಯಲ್ಲಿ ನೋಡಲು ಬಯಸುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಅಭಿಮಾನಿಗಳ ಇಂತಹುದೊಂದು ಆಸೆಯನ್ನು ಒಬ್ಬರು ತಮ್ಮ ಕೈಚಳಕದಿಂದ ನಿಜ ಮಾಡಿ ತೋರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿ ಯಶ್ ಮತ್ತು ರಾಧಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ. ವೈರಲ್ ಆದ ಫೋಟೋದಲ್ಲಿ ಎಡಿಟ್ ಮಾಡಿರುವ ವ್ಯಕ್ತಿಯ ಕೈಚಳಕ ಅದ್ಭುತವಾಗಿದೆ ಎಂದೇ ಹೇಳಬಹುದಾಗಿದೆ.
ಹೌದು, ಈ ಫೋಟೋದಲ್ಲಿ ನಟ ಯಶ್ ಮತ್ತು ರಾಧಿಕಾ ಅವರನ್ನು ರಾಮ ಮತ್ತು ಸೀತೆಯ ರೂಪದಲ್ಲಿ ತೋರಿಸಲಾಗಿದೆ. ಈ ಪೋಸ್ಟ್ ವಿಶೇಷ ಗಮನವನ್ನು ಸೆಳೆಯುತ್ತಿದೆ ಮತ್ತು ಮನಸ್ಸಿಗೆ ಹಿಡಿಸಿದ್ದು, ಅಪಾರ ಮೆಚ್ಚುಗೆಗಳು ಹರಿದು ಬರುತ್ತಿದೆ. ಇದೇ ವೇಳೆ ಅನೇಕರು ಕಾಮೆಂಟ್ ಗಳನ್ನು ಮಾಡುತ್ತಾ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಅನೇಕರು ಈ ಜೋಡಿ ಸದಾ ರಾಮ ಸೀತೆಯ ಹಾಗೆ ಇರಬೇಕೆಂದು ಹಾರೈಸಿದ್ದಾರೆ.