ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಎನಿಸಿಕೊಂಡಿರುವಂತಹ ಕಿಮ್ ಜಾಂಗ್ ಆಗಾಗ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಆಡಳಿತದ ವಿಧಾನ, ಕಾನೂನುಗಳು ಎಲ್ಲವೂ ಕೂಡಾ ಜಗತ್ತಿನ ಬೇರೆ ದೇಶಗಳ ಜನತೆಗೆ ಅಚ್ಚರಿಯನ್ನು ಮೂಡಿಸುತ್ತಲೇ ಇರುತ್ತದೆ. ಇದೀಗ ಕಿಮ್ ತನ್ನ ಮಿಲಿಟರಿಯ ಹಿರಿಯ ಜನರಲ್ ನನ್ನು ವಜಾಗೊಳಿಸಿದ್ದು ಹೊಸದೊಂದು ಸೂಚನೆಯನ್ನು ನೀಡಿದ್ದಾರೆ.
ಹೌದುಣ ಮಿಲಿಟರಿ ಹಿರಿಯ ಜನರಲ್ ನನ್ನು ವಜಾ ಮಾಡಿದ ನಂತರ, ಮುಂದೆ ಬರಬಹುದಾದ ಯುದ್ಧಕ್ಕೆ ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಕಿಮ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಕಿಮ್ ತಮ್ಮ ಸೂಚನೆಯಲ್ಲಿ, ದೇಶದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ಮತ್ತು ಮಿಲಿಟರಿ ಡ್ರಿಲ್ಸ್ ಗಳನ್ನು ವಿಸ್ತರಿಸುವಂತೆಯೂ ಹೇಳಿದ್ದಾರೆ.
ಉತ್ತರ ಕೊರಿಯಾದ ಶತ್ರುಗಳನ್ನು ತಡೆಯುವುದಕ್ಕಾಗಿ ಸೂಕ್ತ ಕ್ರಮಗಳ ಕುರಿತಾಗಿ ಯೋಜನೆಗಳನ್ನು ಚರ್ಚೆ ಮಾಡಿದಂತಹ ಕೇಂದ್ರೀಯ ಮಿಲಿಟರಿ ಆಯೋಗದ ಸಭೆಯಲ್ಲಿ ಮಾತನಾಡುವ ವೇಳೆಯಲ್ಲಿ ಕಿಮ್ ಈ ಮಾತುಗಳನ್ನು ಹೇಳಿದ್ದಾರೆ ಎಂದು ವರದಿಯಾಗಿದೆ. ಅಲ್ಲಿನ ಮಿಲಿಟರಿಯ ಉನ್ನತ ಜನರಲ್ ಜನರಲ್ ಸ್ಟಾಫ್ ಪಾಕ್ ಸು ಇಲ್ ಬದಲಿಗೆ ಜನರಲ್ ರಿ ಯೋಂಗ್ ಗಿಲ್ ಅವರನ್ನು ಹೆಸರಿಸಲಾಗಿದೆ ಎಂದು ಕೆಸಿಎನ್ಎ ವರದಿ ಮಾಡಿದೆ.