ನಟ, ನಿರೂಪಕನಾಗಿ ಸಾಕಷ್ಟು ಹೆಸರನ್ನು ಮಾಡಿರುವ ಮಾಸ್ಟರ್ ಆನಂದ್ ಅವರಿಗೆ ನಿವೇಶನ ನೀಡುವುದಾಗಿ ಹಣ ಪಡೆದು ನಂತರ ವಂಚನೆ ಎಸಗಿರುವ ಘಟನೆಯೊಂದು ಈಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸುದ್ದಿಯಾಗಿದೆ. ಹೌದು,ಮಲ್ಟಿ ಲೀಪ್ ವೆಂಚರ್ಸ್ ಎನ್ನುವ ಹೆಸರಿನ ಕಂಪನಿಯೊಂದು ಮಾಸ್ಟರ್ ಆನಂದರ್ ಅವರಿಗೆ ಬರೋಬ್ಬರಿ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎನ್ನುವ ಸುದ್ದಿಯಾಗಿದೆ ಅಲ್ಲದೇ ಈ ವಿಚಾರವಾಗಿ ನಟ ನಟ ಆನಂದ್ ಅವರು ಬೆಂಗಳೂರಿನ ಚಂದ್ರ ಲೇಔಟ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ ಎನ್ನಲಾಗಿದೆ..
ವಿಷಯದ ವಿವರಗಳಿಗೆ ಹೋದರೆ, ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಕಂಪನಿಯು ನಿವೇಶನವನ್ನು ಕೊಡಿಸುವುದಾಗಿ ಹೇಳಿತ್ತು. ಮನಿಕಾ ಕೆಂ.ಎಂ ನಿಂದ ನಿವೇಶನ ಖರೀದಿಯನ್ನು ಮಾಡುವುದಕ್ಕೆ ಸಾಲ ಸೌಲಭ್ಯ ಸಹಾ ಸಿಗುತ್ತೆ ಎನ್ನುವ ಭರವಸೆಯನ್ನು ಕಂಪನಿ ನೀಡಿತ್ತು. ಕಂಪನಿಯು ಹೇಳಿದ ಮಾತುಗಳನ್ನು ನಂಬಿದ ಮಾಸ್ಟರ್ ಆನಂದ್ ಅವರು ನಿವೇಶನ ಖರೀದಿ ಮಾಡಿದ್ದರು. ಆದರೆ 2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತನಗೆ ಮೋಸ ಮಾಡಿದೆ ಎಂದು ಆನಂದ್ ಅವರಿಗೆ ತಿಳಿದು ಬಂದಿದೆ.
ನಿವೇಶನ ಖರೀದಿಗೆ ಸಾಲ ಸೌಲಭ್ಯ ಸಿಗುತ್ತದೆ ಎಂದು ಕಂಪನಿ ಭರವಸೆ ನೀಡಿದ್ದರಿಂದಾಗಿ, ಕಂಪನಿಯು ತೋರಿಸಿದ್ದ ನಿವೇಶನವನ್ನು ಆನಂದ್ ಅವರು ಖರೀದಿ ಮಾಡಿದ್ದರು. ಮೊದಲು 70 ಲಕ್ಷ ರೂಪಾಯಿಗೆ ನಿವೇಶನ ಖರೀದಿಗೆ ಒಪ್ಪಂದವಾಗಿತ್ತು. ಅನಂತರ ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಮುಂಗಡ ಹಣವನ್ನು ಹಣವನ್ನು ಕಂಪನಿಗೆ ನೀಡಿದ್ದರು ಮಾಸ್ಟರ್ ಆನಂದ್.
ಇವೆಲ್ಲವುಗಳ ಬೆನ್ನಲ್ಲೇ ಕಂಪನಿಯು ನಿವೇಶನವನ್ನು ಬೇರೆ ಅವರಿಗೆ ಮಾರಾಟ ಮಾಡಿದ್ದು, ಇದನ್ನು ಮಾಸ್ಟರ್ ಆನಂದ್ ಅವರು ಕೇಳಿದಾಗ ಕಂಪನಿಯು ಅವರಿಗೆ ಯಾವುದೇ ಸೂಕ್ತವಾದ ಪ್ರತಿಕ್ರಿಯೆ ನೀಡಿಲ್ಲ ಮತ್ತು ಅಡ್ವಾನ್ಸ್ ಹಣವನ್ನು ಸಹಾ ವಾಪಸ್ಸು ನೀಡಿಲ್ಲ ಎನ್ನಲಾಗಿದ್ದು , ಇದರಿಂದಾಗಿ ಮಾಸ್ಟರ್ ಆನಂದ್ ಅವರು ಚಂದ್ರ ಲೇಔಟ್ ನಲ್ಲಿ ಕಂಪನಿಯ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ.
ನಟ, ನಿರೂಪಕನಾಗಿ ಸಾಕಷ್ಟು ಹೆಸರನ್ನು ಮಾಡಿರುವ ಮಾಸ್ಟರ್ ಆನಂದ್ ಅವರಿಗೆ ನಿವೇಶನ ನೀಡುವುದಾಗಿ ಹಣ ಪಡೆದು ನಂತರ ವಂಚನೆ ಎಸಗಿರುವ ಘಟನೆಯೊಂದು ಈಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸುದ್ದಿಯಾಗಿದೆ. ಹೌದು,ಮಲ್ಟಿ ಲೀಪ್ ವೆಂಚರ್ಸ್ ಎನ್ನುವ ಹೆಸರಿನ ಕಂಪನಿಯೊಂದು ಮಾಸ್ಟರ್ ಆನಂದರ್ ಅವರಿಗೆ ಬರೋಬ್ಬರಿ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎನ್ನುವ ಸುದ್ದಿಯಾಗಿದೆ ಅಲ್ಲದೇ ಈ ವಿಚಾರವಾಗಿ ನಟ ನಟ ಆನಂದ್ ಅವರು ಬೆಂಗಳೂರಿನ ಚಂದ್ರ ಲೇಔಟ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.