ದೆಹಲಿಯ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನೆಗೆಟಿವ್ ವಿಷಯಗಳಿಂದಾಗಿಯೇ ಸುದ್ದಿಯಾಗುತ್ತಿದೆ. ಕೆಲವೇ ದಿನಗಳ ಹಿಂದೆ ಯುವತಿಯೊಬ್ಬಳು ಅರೆ ಬರೆ ಬಟ್ಟೆ ತೊಟ್ಟು ಬಂದ ವೀಡಿಯೋ ವೈರಲ್ ಆಗಿತ್ತು. ಇದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದು ಮಾತ್ರವೇ ಅಲ್ಲದೇ ಪರ ವಿರೋಧ ಹೇಳಿಕೆಗಳು ಸಹಾ ಕೇಳಿ ಬಂದಿತ್ತು. ಅದಕ್ಕೂ ಮೊದಲು ಇಬ್ಬರು ಪ್ರಯಾಣಿಕರ ನಡುವೆ ನಡೆದ ಜಗಳ ತಾರಕಕ್ಕೆ ಏರಿ ಪೆಪ್ಪರ್ ಸ್ಪ್ರೇ ಮಾಡಿದ ಘಟನೆ ಸಹಾ ನಡೆದಿತ್ತು.
ಇದು ಸಾಲದು ಎನ್ನುವಂತೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿದ್ದ ದೃಶ್ಯ ಸಹಾ ಸೆರೆಯಾಗಿತ್ತು. ಇದಾದ ನಂತರ ಎರಡು ಮೂರು ಬಾರಿ ಮೆಟ್ರೋದಲ್ಲಿ ಜೋಡಿಗಳು ಲಿಪ್ ಲಾಕ್ ಮಾಡಿಕೊಂಡ ಘಟನೆಗಳು ಸಹಾ ನಡೆದಿತ್ತು. ಈಗ ಮತ್ತೊಮ್ಮೆ ದೆಹಲಿ ಮೆಟ್ರೋ ಸುದ್ದಿಯಾಗಿದೆ. ಈ ಬಾರಿ ಯುವ ಜೋಡಿಯೊಂದು ಮೆಟ್ರೋ ದಲ್ಲಿ ಕಿಸ್ ಮಾಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ಘಟನೆಯ ಫೋಟೋವನ್ನು ಜೂನ್ 17 ರಂದು ಟ್ವೀಟ್ ಮಾಡಲಾಗಿದೆ. ದೆಹಲಿಯ ಹುಡಾ ಸಿಟಿ ಸೆಂಟರ್ ಮಾರ್ಗವಾಗಿ ಮೆಟ್ರೋ ಚಲಿಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೀಡಿಯೋದಲ್ಲಿ ಲವರ್ ಗಳು ಕೈ ಕೈ ಹಿಡಿದುಕೊಂಡು, ಮೆಟ್ರೋ ಸೀಟ್ ನಲ್ಲಿ ಕುಳಿತಿದ್ದು, ಅವರಿಗೆ ಅಲ್ಲಿದ್ದ ಜನರ ಪರಿವೆಯೇ ಇಲ್ಲವೇನೋ ಎನ್ನುವಂತೆ ಲಿಪ್ ಲಾಕ್ ಮಾಡಿ ರೋಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರಗಳನ್ನು ಕ್ಲಿಕ್ಕಿಸಿರುವ ಪ್ರತ್ಯಕ್ಷದರ್ಶಿಯೊಬ್ಬರು ಅದನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರ ಭಗತ್ ಚಿಂಗ್ಸುಬಮ್ ಎನ್ನುವವರು ಈ ಫೋಟೋ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಅದನ್ನು ಅವರು ಡಿ ಎಂ ಆರ್ ಸಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದು, ದೆಹಲಿ ಮೆಟ್ರೋ ರೈಲು ನಿಗಮದ ಅಧಿಕಾರಿಗಳು ದೂರು ಪಡೆದ ನಂತರ ಮೆಟ್ರೋದಲ್ಲಿ ಕಿಸ್ ಮಾಡಿದ ಜೋಡಿಗಾಗಿ ಹುಡುಕಾಟ ನಡೆಸಿದ್ದಾರೆ.