ಆದಾಯದ ವಿಚಾರದಲ್ಲಿ ಪತಿಗೆ ಟಕ್ಕರ್ ಕೊಟ್ಟ ಉಪಾಸನಾ: ನಟ ರಾಮ್ ಚರಣ್ ಪತ್ನಿಯ ನಿವ್ವಳ ಆದಾಯ ಎಷ್ಟು ಗೊತ್ತಾ?

ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ತೆಲುಗು ನಟ ರಾಮಚರಣ್ ಒಬ್ಬರಾಗಿದ್ದು, ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿರುವ ಈ ನಟ ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಮತ್ತು ತೆಲುಗು ಚಿತ್ರರಂಗದಲ್ಲಿ ತನಗಾಗಿ ಬಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಸಿನಿಮಾ ರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ರಾಮಚರಣ್ ಹೆಸರು ಕೂಡಾ ಸೇರಿದೆ. ತ್ರಿಬಲ್ ಆರ್ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಮತ್ತು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ರಾಮಚರಣ್.ರಾಮ್ ಚರಣ್ ಅವರ ನಿವ್ವಳ ಆದಾಯದ ವಿಚಾರಕ್ಕೆ ಬಂದರೆ ಅದು 1370 ಕೋಟಿ

ರೂಪಾಯಿಗಳಗಿದೆ. ಆದರೆ ಈಗ ರಾಮ್ ಚರಣ್ ಅವರ ಪತ್ನಿ ಉಪಾಸನ ಕಾಮಿನೇನಿ ಕೊನಿಡಾಲ ಅವರ ಆದಾಯದ ವಿಚಾರ ಮಾಧ್ಯಮಗಳ ಸುದ್ದಿಗಳಲ್ಲಿ ಹರಿದಾಡುತ್ತಾ ಎಲ್ಲರಿಗೂ ಆಶ್ಚರ್ಯವನ್ನು ಮೂಡಿಸಿದ. ಹೌದು, ಉಪಾಸನಾ ಅವರ ಆದಾಯ ನಟ ರಾಮ ಚರಣ್ ಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎನ್ನುವುದು ಖಂಡಿತ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ.ಉಪಾಸನ ಕಾಮಿನೇನಿ ಮೂಲತಃ ಒಂದು ಉದ್ಯಮಿ ಕುಟುಂಬದಿಂದ ಬಂದಂತಹ ಮಹಿಳೆಯಾಗಿದ್ದಾರೆ. ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಚೇರ್ ಪರ್ಸನ್ ಪ್ರತಾಪ್ ರೆಡ್ಡಿ ಮೊಮ್ಮಗಳಾಗಿದ್ದಾರೆ

ಉಪಾಸನಾ. ಪ್ರಸ್ತುತ ಮಾಧ್ಯಮಗಳ ವರದಿಗಳ ಪ್ರಕಾರ ಉಪಾಸನ ಮತ್ತು ರಾಮ್ ಚರಣ್ ಇಬ್ಬರ ನಿವ್ವಳ ಆದಾಯವು 2500 ಕೋಟಿ ರೂಪಾಯಿಗಳಾಗಿಷೆ. ಇದರಲ್ಲಿ ರಾಮ್ ಚರಣ್ ಆದಾಯ 1370 ಕೋಟಿಗಳಾದರೆ, ಉಪಾಸನಾ ಅವರ ಆದಾಯ 1130 ಕೋಟಿಗಳಾಗಿದೆ. ಉಪಾಸನಾ ಅವರ ಅಜ್ಜ ಪ್ರತಾಪ್ ರೆಡ್ಡಿ ಅಪೋಲೋ ಆಸ್ಪತ್ರೆಗಳ ಅಧ್ಯಕ್ಷರಾಗಿದ್ದು, ಅವರು 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ದೇಶದ ಬಿಲಿಯನೇರ್ ಗಳಲ್ಲಿ ಒಬ್ಬರಾಗಿದ್ದಾರೆ. ಉಪಾಸನ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರಾಗಿದ್ದು, ಅವರ ತಾಯಿ ಶೋಭನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

Related posts

ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು.

ರಿಪ್ಪೆನ್ ಸ್ವಾಮಿ ಮೂಲಕ ಮಾಸ್ ಅವತಾರ ಎತ್ತಿದ ವಿಜಯ್ ರಾಘವೇಂದ್ರ

This website uses cookies to improve your experience. We'll assume you're ok with this, but you can opt-out if you wish. Read More