ಪಾಕಿಸ್ತಾನದಿಂದ ಓಡಿ ಬಂದ ಸೀಮಾ ಹೈದರ್ ಲವ್ ಸ್ಟೋರಿ ಬಗ್ಗೆ UP ATS ನಡೆಸಲಿದೆ ವಿಶೇಷ ತನಿಖೆ

ತನ್ನ ಪಬ್ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ವೀಸಾ ಇಲ್ಲದೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮಹಿಳೆ ಸೀಮಾ ಹೈದರ್ ಮತ್ತು ಆಕೆಯ ಗೆಳೆಯ ಸಚಿನ್ ಮೀನಾ ಇಬ್ಬರೂ ಸಹಾ ತಮ್ಮ ನೋಯ್ಡಾ ಮನೆಯನ್ನು ಬಿಟ್ಟು ಹೋಗಿದ್ದರೂ ಸಹಾ ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ದೊಡ್ಡ ಚರ್ಚೆಯ ವಿಷಯವಾಗಿ ಬದಲಾಗಿದ್ದಾರೆ. ಇದೇ ವೇಳೆ, ಸದ್ಯ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿರುವ ಇವರಿಬ್ಬರ ಲವ್ ಸ್ಟೋರಿ ಕುರಿತಾಗಿ ಈಗ ಮತ್ತೊಂದು ದೊಡ್ಡ ಸುದ್ದಿ ಬಂದಿದೆ. ಹಲವು ಮಾದ್ಯಮಗಳಲ್ಲಿ ಈಗಾಗಲೇ ಸೀಮಾ ಸಂದರ್ಶನ ಸಹಾ ಮಾಡಿವೆ.

ಮೂಲಗಳ ಪ್ರಕಾರ, ಯುಪಿ ಎಟಿಎಸ್ ಈಗ ಪಾಕಿಸ್ತಾನದಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಪ್ರಕರಣವನ್ನು ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ, ಪೊಲೀಸರು ಸೀಮಾ ಹೈದರ್ ಪ್ರಕರಣವನ್ನು ವಿಶೇಷ ಸಂಸ್ಥೆಯಿಂದ ತನಿಖೆಗೆ ಒತ್ತಾಯಿಸಿ ಪತ್ರವೊಂದನ್ನು ಬರೆದಿದ್ದಾರೆ. ಈಗ ಯುಪಿ ಎಟಿಎಸ್ ಈ ಬಗ್ಗೆ ತನಿಖೆ ನಡೆಸಲಿದೆ ಎನ್ನಲಾಗಿದೆ. ಪೊಲೀಸ್ ಪ್ರಧಾನ ಕಛೇರಿಯ ತಂಡದೊಂದಿಗೆ ಇದು ಜಂಟಿ ತನಿಖೆಯಾಗಲಿದೆ.

ಪೊಲೀಸರು ಸೀಮಾ ಹೈದರ್ ಅವರು ಹೇಳಿದ ಕಥೆಯ ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಈಗ ಸೀಮಾ ಅವರ ಮೊಬೈಲ್ ಫೋನ್‌ನಿಂದ ಅವರ ಸೋಶಿಯಲ್ ಮೀಡಿಯಾ ಚಟುವಟಿಕೆಗಳ ಕುರಿತಾಗಿಯೂ ಸಹಾ ತನಿಖೆ ಮಾಡಲಾಗುತ್ತದೆ. ಯುಪಿ ಎಟಿಎಸ್ ಪಾಕಿಸ್ತಾನದಿಂದ ದುಬೈಗೆ ಮತ್ತು ನಂತರ ನೇಪಾಳದ ಮೂಲಕ ಭಾರತಕ್ಕೆ ಸೀಮಾ ಹೈದರ್ ಬಂದಂತಹ ಸಂಪೂರ್ಣ ಮಾರ್ಗ ಮತ್ತು ನೆಟ್‌ ವರ್ಕ್ ಅನ್ನು ಕಂಡುಹಿಡಿಯಲು ಪ್ರಯತ್ನಕ್ಕೆ ಮುಂದಾಗಿದೆ.

ಸಚಿನ್ ಮತ್ತು ಸೀಮಾ ಇಬ್ಬರೂ ಅವರ ಸಂಬಂಧಿಕರ ಸಂಖ್ಯೆಗಳನ್ನು ತಮ್ಮ ನಡುವಿನ ಸಂವಹನಕ್ಕಾಗಿ ಬಳಸಿದ್ದರು ಎನ್ನಲಾಗಿದೆ. ಯಾವ ಇಂಟರ್ನೆಟ್ ಆ್ಯಪ್ ಗಳನ್ನು ಬಳಸಬಹುದು ಎಂಬುದರ ಕುರಿತು ಡೇಟಾ ಲೇಖನವನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಈಗ ಸೀಮಾ ಮತ್ತು ಸಚಿನ್‌ ನ ಪ್ರೇಮಕಥೆಯ ಸಂಪೂರ್ಣ ಸತ್ಯ ಯಾವಾಗ ಪ್ರಪಂಚದ ಮುಂದೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More