ಶೌಚಾಲಯದಲ್ಲಿ ಹಿಡನ್ ಕ್ಯಾಮರ ಇರಲಿಲ್ಲ: ಉಡುಪಿ ಪ್ರಕರಣದ ಬಗ್ಗೆ ಖುಷ್ಬೂ ಪ್ರತಿಕ್ರಿಯೆ

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡಲಾಗಿತ್ರು ಎನ್ನುವ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಪ್ರಕರಣದ ವಿಚಾರಣೆಗೆ ಉಡುಪಿ ನಗರಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿರುವ ನಟಿ ಖುಷ್ಬೂ ಸುಂದರ್ (Khushboo Sundar) ಅವರು ಗುರುವಾರ ಮಾದ್ಯಮಗಳ ಮುಂದೆ ಮಾತನಾಡಿದ್ದಾರೆ.

ನಟಿ ಖುಷ್ಬೂ ಅವರು ಮಾತನಾಡುತ್ತಾ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಹೇಳಿದ್ದು, ವದಂತಿಗಳನ್ನು ಹರಡಬಾರದು ಎನ್ನುವ ಮನವಿಯನ್ನು ಮಾಡಿದ್ದಾರೆ. ಇದೇ ವೇಳೆ ಖುಷ್ಬೂ ಅವರು ನಮ್ಮ ವಿಚಾರಣೆ ಇನ್ನೂ ಮುಗಿದಿಲ್ಲ, ಇದು ಆರಂಭ ಮಾತ್ರವಾಗಿದೆ. ಈ ಹಂತದಲ್ಲಿ ಹೆಚ್ಚು ವಿವರ ಬಹಿರಂಗ ಪಡಿಲಾಗುವುದಿಲ್ಲ ಮತ್ತು ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಹೇಳಿದ್ದಾರೆ.

ನಟಿ ಖುಷ್ಬೂ ಅವರು ಉಡುಪಿಯಲ್ಲಿ (Udupi) ಎಷ್ಟು ದಿನ ಇರುತ್ತೇನೆ ಎನ್ನುವುದನ್ನು ಹೇಳಲಾಗುವುದಿಲ್ಲ. ಕಾಲೇಜಿನ ಆಡಳಿತ ಮಂಡಳಿಯಿಂದ‌ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಮತ್ತು ಇತರೆ ಪೊಲೀಸರಿಂದ ಘಟನೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.‌ ಈ ವಿಚಾರ ಸೂಕ್ಷ್ಮವಾಗಿದ್ದು, ಇದನ್ನು ರಾಜಕೀಯಗೊಳಿಸಬಾರದು ಎಂದಿದ್ದಾರೆ.

Related posts

ಭಾರತದ 2 ನೇ ಅತಿದೊಡ್ಡ ಸಂಯೋಜಿತ ಉಕ್ಕು ಸ್ಥಾವರವಾಗಿದ್ದು, ಇದು 3,800 ಕ್ಕೂ ಹೆಚ್ಚು ನೇರ ಉದ್ಯೋಗ ನೀಡುವ ಕಾರ್ಖಾನೆ ಕರ್ನಾಟಕದ ಕೊಪ್ಪಳದಲ್ಲಿ ಸ್ಥಾಪನೆ.

ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

This website uses cookies to improve your experience. We'll assume you're ok with this, but you can opt-out if you wish. Read More