ಚಂದ್ರಯಾನ 3 – ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿದೆ, ಇಸ್ರೋ ಕೊಟ್ಟ ಮಹತ್ವದ ಮಾಹಿತಿ

ಭೂಮಿಯಿಂದ ಚಂದ್ರನ ಕಡೆಗೆ ಪಯಣ ಬೆಳೆಸಿರುವ ಚಂದ್ರಯಾನ 3 ಬಾಹ್ಯಾಕಾಶ ನೌಕೆಯು ಉತ್ತಮವಾಗಿದೆ ಎನ್ನುವ ಮಾಹಿತಿಯನ್ನು ಇಸ್ರೋ ನೀಡಿದೆ. ಈ ವಿಚಾರವಾಗಿ ಶನಿವಾರದಂದು ಟ್ವೀಟ್ ಮಾಡಿರುವ ಹೆಸರು ಇಸ್ರೋ ಶುಕ್ರವಾರ ಚಂದ್ರನ ಕಡೆಗೆ ತೆರಳಿರುವ ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ ಎಂದು ಹೇಳಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ನಲ್ಲಿ ಚಂದ್ರಯಾನ 3 ಗಗನನೌಕೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ, ಬಾಹ್ಯಾಕಾಶ ನೌಕೆಯು ಈಗ 41,762 ಕಿಲೋಮೀಟರ್ × 173 ಕಿಲೋಮೀಟರ್ ಕಕ್ಷೆಯಲ್ಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಶುಕ್ರವಾರದಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಶುಭ ಶುಕ್ರವಾರದ ದಿನ ಜಿಎಸ್ಎಲ್ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣೆ ವಾಹನದಿಂದ ಉಪಗ್ರಹವು ಮಧ್ಯಾಹ್ನ 2:35 ಕ್ಕೆ ಅಂತರಿಕ್ಷದ ಕಡೆಗೆ ಹಾರಿದೆ. ಗಗನ ನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪುವುದಕ್ಕೆ ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆಗಸ್ಟ್ 23 ರಂದು ಚಂದ್ರನಲ್ಲಿ ಇಳಿಯಲಿದೆ ಎನ್ನುವ ನಿರೀಕ್ಷೆ ಮಾಡಲಾಗಿದೆ.

ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸಲಿದೆ ಅಂದರೆ ಅದು ಸರಿಸುಮಾರು 14 ಭೂಮಿಯ ದಿನಗಳಾಗಿದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮನಾಗಿರುತ್ತದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚಂದ್ರಯಾನ 3 ಕ್ಕೆ ನೆಟ್ಟಿಗರು ಹರ್ಷವನ್ನು ವ್ಯಕ್ತಪಡಿಸುತ್ತಾ, ಚಂದ್ರಯಾನ ಮೂರು ಯಶಸ್ವಿಯಾಗಲೆಂದು ದೊಡ್ಡಮಟ್ಟದಲ್ಲಿ ಶುಭ ಹಾರೈಸಿದ್ದಾರೆ.

Related posts

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಂಬಾನಿ ಕುಟುಂಬದ ಮದುವೆಯ ಧಾನ ಧರ್ಮ.

This website uses cookies to improve your experience. We'll assume you're ok with this, but you can opt-out if you wish. Read More