OMG 2 : ಬಾಲಿವುಡ್ ನ ಜನಪ್ರಿಯ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ಓ ಮೈ ಗಾಡ್ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆದರೆ ಈ ಸಿನಿಮಾ ದಿನಕ್ಕೊಂದು ಸಂಕಷ್ಟವನ್ನು ಎದುರಿಸುವಂತಾಗಿದೆ. ಇಷ್ಟು ದಿನಗಳ ಕಾಲ ಸೆನ್ಸಾರ್ ಮಂಡಳಿಯಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಿತ್ತು ಕೊನೆಗೆ ಎ ಸರ್ಟಿಫಿಕೇಟ್ ಪಡೆದುಕೊಂಡು, ಒಂದಷ್ಟು ಹೊಸ ಬದಲಾವಣೆಗಳ ಸಲಹೆ ಪಡೆದುಕೊಂಡಿದೆ. ಆದರೆ ಸಮಸ್ಯೆಗಳು ಅಷ್ಟಕ್ಕೇ ಮುಗಿದಿಲ್ಲ.
ಇದೀಗ ಈ ಸಿನಿಮಾಕ್ಕೆ ಉಜ್ಜಯಿನಿಯ ಮಹಾಕಾಳೇಶ್ವರ (Ujjain Mahakaleshwar) ದೇವಾಲಯದ ಅರ್ಚಕರ ಆಕ್ರೋಶ ಎದುರಾಗಿದೆ. ಏಕೆಂದರೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರವನ್ನು ನೀಡಿರುವುದೇ ಈಗ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಮಹಾ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಅವರ ಶಿವತಾಂಡವ ನೃತ್ಯವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯಗಳನ್ನು ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಈಗ ಅಸ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು ಆಗ್ರಹಿಸಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ತೆಗೆಯದೇ ಇದ್ದಲ್ಲಿ ಸಿನಿಮಾ ವಿರುದ್ಧ ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.