ಕಲಿಯುಗ ವೈಕುಂಠ ತಿರುಮಲದಲ್ಲಿ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾನುವಾರ ರಜಾ ದಿನ ಇದ್ದ ಕಾರಣ ದೊಡ್ಡ ಸಂಖ್ಯೆಯಲ್ಲಿ ಭಕ್ತರು ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ತಿರುಮಲದಲ್ಲಿನ ಕಂಪಾರ್ಟ್ಮೆಂಟ್ ಗಳು ಭಕ್ತರಿಂದ ತುಂಬಿ ಹೋಗಿದ್ದವು. ಶ್ರೀ ವೆಂಕಟೇಶ್ವರ ಸ್ವಾಮಿ ಸರ್ವ ದರ್ಶನಕ್ಕಾಗಿ ಭಕ್ತರು 31 ಕಂಪಾರ್ಟ್ಮೆಂಟ್ ಗಳಲ್ಲಿ ಕಾದುಕೊಂಡಿದ್ದರು. ಕ್ಯೂ ಕಾಂಪ್ಲೆಕ್ಸ್ ನಲ್ಲಿ ಎಲ್ಲ ಕಂಪಾರ್ಟ್ಮೆಂಟ್ ಗಳು ತುಂಬಿ ಹೋಗಿದ್ದವು. ಸರ್ವ ದರ್ಶನಕ್ಕೆ ಸುಮಾರು 24 ಗಂಟೆಗಳ ಸಮಯ ಹಿಡಿಯುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯೂ ಕಾಂಪ್ಲೆಕ್ಸ್ ಎಲ್ಲಾ ತುಂಬಿ ಕೃಷ್ಣತೇಜ ಗೆಸ್ಟ್ ಹೌಸ್ ವರೆಗೂ ಜನ ಕ್ಯೂನಲ್ಲಿ ನಿಂತಿದ್ದರು.
ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಶನಿವಾರ 87,762 ಮಂದಿ ಭಕ್ತರು ದರ್ಶನ ಮಾಡಿದರೆ ಅದರಲ್ಲಿ 43,753 ಮಂದಿ ಭಕ್ತರು ತಮ್ಮ ತಲೆ ಕೂದಲನ್ನು ಸಮರ್ಪಿಸಿದ್ದಾರೆ. ನಿನ್ನೆ ಶ್ರೀ ವೆಂಕಟೇಶ್ವರ ಸ್ವಾಮಿ ಹುಂಡಿಗೆ 3.61 ಕೋಟಿ ರೂಪಾಯಿಗಳು ಬಂದಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರಿಗಾಗಿ ಅವಶ್ಯಕತೆ ಇರುವ ಎಲ್ಲ ಏರ್ಪಾಡು ಗಳನ್ನು ಮಾಡಲಾಗಿದೆ ಎಂದು ಭಕ್ತರಿಗೆ ಅನ್ನಪ್ರಸಾದ ಒದಗಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಲ್ಲದೆ ಬರುತ್ತಿರುವ ಭಕ್ತರು ಟಿಟಿಡಿ ಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಮತ್ತೊಂದು ಕಡೆ ತಿರುಮಲ ಬೆಟ್ಟದಲ್ಲಿ ವಸತಿಗಾಗಿ ಇರುವ ಕೊಠಡಿಗಳ ಬೇಡಿಕೆ ಕೂಡಾ ಹೆಚ್ಚಾಗಿದೆ. ಬಹುತೇಕ ಎಲ್ಲಾ ಕೊಠಡಿಗಳು ತುಂಬಿ ಹೋಗಿದೆ. ಜೂನ್ 21 ರಂದು ಆಸ್ಥಾನ ಮಂಟಪದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ನಿರ್ವಹಿಸಲಿದ್ದು, ಅಂದು ಬೆಳಗ್ಗೆ 6 ರಿಂದ 8 ರವರೆಗೆ ಯೋಗ ದಿನವನ್ನು ನಿರ್ವಹಣೆ ಮಾಡಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ ಇನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಅರ್ಜಿತ ಸೇವೆಯ ಟಿಕೆಟ್ ಗಳು ಜೂನ್ 19 ಅಂದರೆ ಇಂದಿನಿಂದ ಬಿಡುಗಡೆ ಮಾಡಲಾಗಿದೆ.