ಭಾರಿ ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿರುವ ಪ್ರಭಾಸ್ ನಾಯಕನಾಗಿರುವ ಆದಿಪುರುಷ್ ಸಿನಿಮಾ ಜನರ ಮನಸ್ಸನ್ನು ಗೆಲ್ಲೋದಿಕ್ಕೆ ವಿಫಲ ಆಗಿದೆ. ಜನಕ್ಕೆ ಸಿನಿಮಾ ಇಷ್ಟ ಆಗಿಲ್ಲ. ಮುಂಗಡ ಬುಕ್ಕಿಂಗ್ ಮತ್ತು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದ್ದ ಕಾರಣ ಬಿಡುಗಡೆ ಆದ ಮೊದಲ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಏನೋ ಮಾಡಿದೆ. ಆದರೆ ಅಸಲಿ ಪರೀಕ್ಷೆ ಇದ್ದಿದ್ದು ಸೋಮವಾರ. ಸೋಮವಾರ ಸಹಾ ಸಿನಿಮಾ ಉತ್ತಮ ಕಲೆಕ್ಷನ್ ಮಾಡಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ನಿರಾಸೆ ಎದುರಾಗಿದ್ದು, ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ಸಿನಿಮಾ ಸೋತಿದೆ.
ಸೋಮವಾರದ ಕಲೆಕ್ಷನ್ ನಲ್ಲಿ ಕುಸಿತ ಕಂಡ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಇದು ಇನ್ನೂ ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಆಗಿರುವ ನಟ ಪ್ರಭಾಸ್ ಕೂಡಾ ಈಗ ತೀವ್ರವಾದ ಮುಖಭಂಗವನ್ನು ಎದುರಿಸುವಂತಾಗಿದೆ. ಮತ್ತೊಂದು ಕಡೆ ನಿರ್ದೇಶಕ ಓಂ ರಾವತ್ ಮತ್ತು ಸಂಭಾಷಣೆಕಾರ ಮನೋಜ್ ಮುಂತಾಶಿರ್ ಅವನ್ನು ಪ್ರೇಕ್ಷಕರು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.
ದೇಶದ ಪ್ರಮುಖ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು ಸೋಮವಾರದ ಆದಿಪುರಷ್ ಸಿನಿಮಾದ ಕಲೆಕ್ಷನ್ ಅನ್ನು ಪತನ ಎಂದು ಬಣ್ಣಿಸಿದ್ದಾರೆ. ಸೋಮವಾರ ಸಿನಿಮಾದ ಗಳಿಕೆ ಕೇವಲ ಇಪ್ಪತ್ತು ಕೋಟಿ ಎನ್ನಲಾಗಿದೆ. ಆರಂಭದ ಮೊದಲ ಮೂರು ದಿನಗಳಲ್ಲಿ ಸಿನಿಮಾ ಸುಮಾರು 340 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಆದರೆ ನಿನ್ನೆಯಿಂದ ಕಲೆಕ್ಷನ್ ವಿಚಾರದಲ್ಲಿ ಕುಸಿತ ಆರಂಭವಾಗಿದೆ.
ರಾಮಾಯಣ ಕಥೆಯನ್ನು ಆಧರಿಸಿದ ಮೂಡಿ ಬಂದಿರುವ ಸಿನಿಮಾ ಆಗಿದೆ ಆದಿಪುರಷ್. ಆದರೆ ಈ ಸಿನಿಮಾವನ್ನು ನಿರೂಪಿಸಿರುವ, ಚಿತ್ರಿಸಿರುವ ವಿಧಾನ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿಲ್ಲ. ವಿಮರ್ಶೆಗಳು ಇನ್ನೂ ನಿಂತಿಲ್ಲ. ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂ ಗಳು ಬಂದ ಕಾರಣ ಮುಂಗಡ ಬುಕ್ಕಿಂಗ್ ಮಾಡಿಸಿಕೊಂಡಿದ್ದ ಅನೇಕರು ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಸಹಾ ಹೇಳಲಾಗುತ್ತಿದೆ.