ದೇಶದ ಹಲವು ಕಡೆಗಳಲ್ಲಿ ಈಗ ಗ್ರಾಹಕರಿಗೆ ಟೊಮೊಟೋ ಬೆಲೆ ಬಿಸಿ ಮುಟ್ಟಿಸಿದೆ. ಟೊಮೊಟೋ ಬೆಲೆ ನೋಡಿ ಬಡವರು ಮತ್ತು ಮದ್ಯಮ ವರ್ಗದ ಜನರು ಶಾಕ್ ಆಗಿದ್ದಾರೆ. ಬೆಲೆ ಏರಿಕೆ ಹೀಗೆ ಇದ್ದರೆ ನಾವು ಖರೀದಿ ಮಾಡುವುದಾದರೂ ಹೇಗೆಂದು ಮಾದ್ಯಮಗಳ ಮುಂದೆ ಅನೇಕರು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರು. ದೇಶದ ಹಲವೆಡೆ ಟೊಮೆಟೊ ದರ ಕೆ.ಜಿಗೆ ₹ 150 ತಲುಪಿದ್ದು, ಇದು ಸಹಜವಾಗಿಯೇ ಬಹಳಷ್ಟು ಜನರಿಗೆ ದುಬಾರಿ ಆಗಿದ್ದು, ಟೊಮೊಟೋ ಖರೀದಿ ಮಾಡುವುದು ಅಸಾಧ್ಯ ಎನಿಸುವಂತಾಗಿದೆ.
ಈ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರವು ಒಂದು ವಿಶಿಷ್ಟ ಹೆಜ್ಜೆಯನ್ನು ಇಟ್ಟಿದ್ದು, ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ವಿತರಣೆಯನ್ನು ಆರಂಭಿಸಿದೆ. ಹೌದು, ಕೆ.ಜಿಗೆ ₹ 60 ಅನ್ನು ನಿಗಧಿ ಮಾಡಿ, ಟೊಮೆಟೊ ಮಾರಾಟವನ್ನು ಮಾಡಲಾಗುತ್ತಿದೆ. ಚೆನ್ನೈನ ಟಿ. ನಗರದಲ್ಲಿರುವ ಪಾಂಡಿ ಬಜಾರ್‌ನಲ್ಲಿ ಜನರು ಪಡಿತರ ಕೇಂದ್ರದಿಂದ ಟೊಮೆಟೊ ಖರೀದಿ ಮಾಡುತ್ತಿರುವ ಫೋಟೋಗಳು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಡಿತರ ಅಂಗಡಿಗಳಲ್ಲಿ ಟೊಮೆಟೊ ಕೆ.ಜಿಗೆ ₹ 60 ಎಂದು ಫಲಕಗಳನ್ನು ಹಾಕಲಾಗಿದೆ. ಈ ವಿಚಾರವಾಗಿ ಮಹಿಳೆಯೊಬ್ಬರು ಮಾತನಾಡುತ್ತಾ,
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ ₹ 60 ರ ಹಾಗೆ ಟೊಮೆಟೊಗಳು ಸಿಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಟೊಮೊಟೋ ಬೆಕೆ ₹100, 130 ಇದ್ದು, ಅದರ ಅರ್ಧ ದರದಲ್ಲಿ ಸರ್ಕಾರ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದ್ದು ಖುಷಿಯಾಗಿದೆ. ಇಂಥ ಉಪಕ್ರಮ ತೆಗೆದುಕೊಂಡ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.