ಭಾರೀ ಸಂಭಾವನೆ ಜೊತೆಗೆ ತಲೈವಾ ಕಡೆಯಿಂದ ತಮನ್ನಾಗೆ ಸಿಕ್ತು ಒಂದು ವಿಶೇಷ ಉಡುಗೊರೆ

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಸಿನಿಮಾಗಳ ಸುಂದರಿ ತಮನ್ನಾ ಭಾಟಿಯಾ (Thamannah Bhatia) ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಎರಡೂ ವಿಚಾರವಾಗಿ ಸಾಕಷ್ಟು ಸದ್ದನ್ನು ಮಾಡುತ್ತಿದ್ದಾರೆ. ನಟ ವಿಜಯ ವರ್ಮಾ ಜೊತೆಗಿನ ನಟಿಯ ಪ್ರೀತಿಯ ವಿಚಾರ ಒಂದು ಕಡೆ ಸಾಕಷ್ಟು ಗಮನ ಸೆಳೆಯುವಾಗಲೇ ನಟಿಯ ಜೈಲರ್ (Jailer) ಸಿನಿಮಾದಲ್ಲಿ ಕಾವಾಲಾ ವಿಶೇಷ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿ ಸಂಚಲನ ಸೃಷ್ಟಿಸಿದೆ.

ತಮನ್ನಾ ಕಾವಾಲಾ ಹಾಡಿನಲ್ಲಿ ಹೆಜ್ಜೆ ಹಾಕಿದ ಪರಿಯನ್ನು ನೋಡಿ ಡ್ಯಾನ್ಸ್ ಪ್ರಿಯರು ಮಸ್ತ್ ಎಂಜಾಯ್ ಮಾಡುತ್ತಿದ್ದು, ತಮನ್ನಾ ಡ್ಯಾನ್ಸ್ ಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ. ನಟಿ ತಮನ್ನಾ ಜೈಲರ್ ಸಿನಿಮಾದಲ್ಲಿ ತಲೈವಾ ರಜನಿಕಾಂತ್ ಅವರ ಜೊತೆಗೆ ನಟಿಸುತ್ತಿದ್ದು, ಈ ವಿಶೇಷ ಹಾಡಿಗಾಗಿ ನಟಿ ಬಾರೀ ಮೊತ್ತದ ಸಂಭಾವನೆಯನ್ನು ಸಹಾ ಪಡೆದಿದ್ದಾರೆ ಎನ್ನುವ ವಿಚಾರವೊಂದು ಈಗ ಅಚ್ಚರಿ ಯನ್ನು ಮೂಡಿಸಿದೆ.

ಈ ಹಾಡಿಗಾಗಿ ತಮನ್ನಾ ಬರೋಬ್ಬರಿ ಮೂರು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅದೇ ವೇಳೆ ರಜನೀಕಾಂತ್ (Rajanikant) ಅವರಿಂದ ಒಂದು ವಿಶೇಷ ಉಡುಗೊರೆ ಸಹಾ ಸಿಕ್ಕಿದೆ ಎನ್ನುವ ವಿಚಾರವನ್ನು ನಟಿ ತಮನ್ನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ತಮನ್ನಾಗೆ ರಜನೀಕಾಂತ್ ಕೊಟ್ಟ ಆ ಉಡುಗೊರೆಯಾದರೂ ಏನು ಎನ್ನುವ ಕುತೂಹಲ ನಿಮಗಿದ್ದರೆ ಇಲ್ಲಿದೆ ಉತ್ತರ.

ತಮನ್ನಾ ಅವರು ಮಾತನಾಡುತ್ತಾ, ರಜನಿ ಸರ್ ಕೇವಲ ಒಬ್ಬ ಸೂಪರ್‌ಸ್ಟಾರ್ ಮಾತ್ರವಲ್ಲ, ಅವರು ಬಹಳ ಒಳ್ಳೆಯ ವ್ಯಕ್ತಿ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಒಂದು ಅದ್ಭುತವಾದ ಅನುಭವ. ಸಿನಿಮಾ ಮುಗಿದ ನಂತರ ಅವರು ನನಗೆ ಧಾರ್ಮಿಕ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ಅದು ತುಂಬಾ ವಿಶೇಷವಾಗಿದ್ದು ಅದರ ಮೇಲೆ ತನ್ನ ಹಸ್ತಾಕ್ಷರವನ್ನೂ ಮಾಡಿದ್ದಾರೆಂದು ತಮನ್ನಾ ಹೇಳಿಕೊಂಡಿದ್ದಾರೆ.

Related posts

ಸ್ಮೈಲ್ ಕೊಟ್ಳು ಸೂಜಿಮಲ್ಲಿ, ಸಿಗ್ನಲ್ ಕೊಟ್ಳಲು ಕಣ್ಣಿನಲ್ಲಿ.. ವೈರಲ್ ಆಗ್ತಿದೆ “ಠಾಣೆ” ಫಿಲಂ ಸಾಂಗ್.

ರೂಪೇಶ್ ಶೆಟ್ಟಿ ಜೊತೆ ಜಾಹ್ನವಿ ಆಕ್ಟಿಂಗ್. ಫೆಬ್ರವರಿ 7 ಕ್ಕೆ ಅಧಿಪತ್ರ ರಿಲೀಸ್.

ಫೆ.7ಕ್ಕೆ “ಗಜರಾಮ” ಅಖಾಡಕ್ಕೆ ಇಳಿಯಲು ರೆಡಿ.ರಾಜವರ್ಧನ್ ಕುಸ್ತಿಕಥೆಯಲ್ಲಿ ರಾಜವರ್ಧನ್.

This website uses cookies to improve your experience. We'll assume you're ok with this, but you can opt-out if you wish. Read More