ಸ್ತುತಿ ಅವರ ಅಮೋಘ ಭರತನಾಟ್ಯಕ್ಕೆ ಮನಸೋತ ಕಲಾ ಬಂಧುಗಳು.

ಸಾಂಸ್ಕೃತಿಕ ಕ್ಷೇತ್ರದ ತವರು ಎಂದೇ ಬಿಂಬಿತವಾಗಿರುವ ಐಟಿ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೊಸ ಹೊಸ ಕಲಾವಿದರಿಗೆ ಹಲವಾರು ವೇದಿಕೆಗಳು ಸಜ್ಜುಗೊಂಡಿರುತ್ತವೆ. ಇಂತಹ ಹೊಸ ಕಲಾವಿದೆ ಕುಮಾರಿ ಸ್ತುತಿ ಅವರಿಗೆ ಜಯನಗರದಲ್ಲಿರುವ ಜೆಎಸ್ಎಸ್ ಸಭಾಂಗಣ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತು.ಸ್ತುತಿ ಅವರ ಭರತನಾಟ್ಯ ರಂಗಪ್ರವೇಶಕ್ಕೆ ಈ ಸಭಾಂಗಣ ವೇದಿಕೆಯಾಯಿತು. ಅನುರಾಗ್ ಕಲಾ ಗುರುಕುಲ ಪ್ರಸ್ತುತಪಡಿಸಿದ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಕಲಾ ಪೋಷಕರು ಮತ್ತು ಕಲಾಸಕ್ತರ ಸಮ್ಮುಖದಲ್ಲಿ ಸ್ತುತಿ ಅವರು ಮನೋಜ್ಞವಾದ ಭರತನಾಟ್ಯ ಪ್ರದರ್ಶನದ ಮೂಲಕ ರಂಗಪ್ರವೇಶ ಮಾಡಿ ತಾವೊಬ್ಬ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಎಂಬುದನ್ನು ಸಾದರಪಡಿಸಿದರು.

ಗುರು ಪಲ್ಲವಿ ರಾಘವೇಂದ್ರ ಅವರಿಂದ ಭರತನಾಟ್ಯ ಕಲಿತ ಸ್ತುತಿ ಈ ಪ್ರದರ್ಶನದ ಮೂಲಕ ಶಾಸ್ತ್ರೀಯ ಭರತನಾಟ್ಯದ ಪಯಣವನ್ನು ಆರಂಭಿಸಿದರು. ಪಲ್ಲವಿ ರಾಘವೇಂದ್ರ ಅವರು ಕಳೆದ ಹಲವು ವರ್ಷಗಳಿಂದ ಕಲಿಸಿಕೊಟ್ಟ ಭರತನಾಟ್ಯದ ಅನೇಕ ಮಜಲುಗಳನ್ನು ಪ್ರದರ್ಶಿಸುವ ಮೂಲಕ ಸ್ತುತಿ ಎಲ್ಲರ ಗಮನ ಸೆಳೆದಿದ್ದೇ ಅಲ್ಲದೆ ಮೆಚ್ಚುಗೆಗೆ ಪಾತ್ರರಾದರು. ಅವರು ಹಾಕಿದ ಪ್ರತಿಯೊಂದು ಹೆಜ್ಜೆಯೂ ಶಾಸ್ತ್ರೀಯ ಕಲಾ ಪ್ರಕಾರಕ್ಕೆ ಹಿಡಿದ ಕನ್ನಡಿಯಂತಿದ್ದು, ಕಲೆಯ ಮೇಲಿನ ಅವರ ಶ್ರದ್ಧೆಯನ್ನು ತೋರಿಸಿತು.

ಮೈಸೂರಿನ ಫೈನ್ ಆರ್ಟ್ಸ್ ವಿಶ್ವವಿದ್ಯಾಲಯ ಕಾಲೇಜಿನ ನೃತ್ಯ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಡಾ.ಕೆ.ಕುಮಾರ್, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ನ ವಲಯ ನಿರ್ದೇಶಕ ಪ್ರದೀಪ್ ಕುಮಾರ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ವಯೋಲಿನ್ ವಾದಕರಾದ ವಿದ್ವಾನ್ ಆರ್.ಕುಮಾರೇಶ್ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಾಗೂ ಪ್ರಖ್ಯಾತ ವೀಣಾವಾದಕಿ ಡಾ.ಜಯಂತಿ ಕುಮಾರೇಶ್ ಅವರು ಸ್ತುತಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉದಯೋನ್ಮುಖ ಕಲಾವಿದೆಗೆ ಆಶೀರ್ವದಿಸಿದರು.

Related posts

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಯ ; ನೇತ್ರಾವತಿ ಸ್ನಾನಘಟ್ಟ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ.

ಫ್ರೀ ಬಸ್ ಏರಿ ನಾಪತ್ತೆಯಾದ ಹುಡುಗಿಯರು: ಪತ್ತೆಯಾದ ನಂತ್ರ ಕೊಟ್ಟಿದ್ದು ಶಾಕಿಂಗ್ ಕಾರಣ

This website uses cookies to improve your experience. We'll assume you're ok with this, but you can opt-out if you wish. Read More