ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು ಈಗಾಗಲೇ ಜನ ಮೆಚ್ಚಿದ ಸೀರಿಯಲ್ ಆಗಿ ಹೆಸರನ್ನು ಪಡೆದುಕೊಂಡಿದೆ. ಈ ಸೀರಿಯಲ್ ನ ಪ್ರತಿಯೊಂದು ಪಾತ್ರವು ಸಹಾ ಜನರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಅಂತಹ ಪಾತ್ರಗಳಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರದಲ್ಲಿ ಗಟ್ಟಿಗಿತ್ತಿಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಸಂಜನಾ ಬುರ್ಲಿ ಬಹಳಷ್ಟು ಜನರ ಫೇವರಿಟ್ ನಟಿಯಾಗಿದ್ದು, ಅವರ ಪಾತ್ರಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ ಅನ್ನೋದು ಸತ್ಯ. ಹೀಗೆ ತನ್ನ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರೋ ನಟಿ ಸಂಜನಾ ಬುರ್ಲಿ ಅವರ ಬಗ್ಗೆ ಕೆಲವೊಂದು ಆಸಕ್ತಿಕರ ವಿಚಾರಗಳು ಇಲ್ಲಿವೆ.
ಸಂಜನಾ ಬುರ್ಲಿ ಅವರು ಲಗ್ನ ಪತ್ರಿಕೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಅದಲ್ಲದೇ ಅವರು ಕಿರುಚಿತ್ರ ಮತ್ತು ಕಾಮಿಡಿ ಶೋ ಗಳಿಗೆ ಸಹಾ ಆಡಿಷನ್ ನೀಡಿದ್ದರು. ಆದರೆ ನಟಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿರುವುದು ಮಾತ್ರ ಪುಟ್ಟಕ್ಕನ ಮಕ್ಕಳು ಸೀರಿಯಲ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಲಗ್ನ ಪತ್ರಿಕೆ ಸೀರಿಯಲ್ ಗೆ ಆಯ್ಕೆಯಾದಾಗ ಸಂಜನಾ ನಟನೆ ಬೇಡವೆಂದು ಆ ಪಾತ್ರಕ್ಕೆ ನೋ ಹೇಳಿದ್ದರಂತೆ. ಆದರೆ ಅನಂತರ ತಾನೇ ಮಾಡುವುದಾಗಿ ಹೇಳಿದ್ದರಂತೆ.
ಸಂಜನಾ ಅವರು ನಟಿಸುತ್ತಿದ್ದ ಲಗ್ನ ಪತ್ರಿಕೆ ಸೀರಿಯಲ್ ಬೇಗ ಮುಗಿದಾಗ ನಟಿಗೆ ಅದು ಬೇಸರವನ್ನು ಉಂಟು ಮಾಡಿತ್ತು. ಆರಂಭದಲ್ಲಿ ನಟಿ ಅನಂತನಾಗ್ ಅವರ ಜೊತೆಗೆ ವೀಕೆಂಡ್ ಎನ್ನುವ ಸಿನಿಮಾದಲ್ಲಿಯೂ ನಟಿಸಿದ್ದರು. ಲಗ್ನ ಪತ್ರಿಕೆ ಮುಗಿದಾಗ ಸಂಜನಾ ಅವರ ತಾಯಿ, ಬೇರೇನೋ ದೊಡ್ಡದು ನಿನಗಾಗಿ ಕಾದಿದೆ, ಅದಕ್ಕೆ ಹೀಗೆ ಆಗಿದೆ ಎನ್ನುವ ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದರಂತೆ. ಸಂಜನಾ ಎಂಬಿಬಿಎಸ್ ಮಾಡಬೇಕು ಎನ್ನುವ ಕನಸನ್ನು ಕಂಡಿದ್ದರಂತೆ.
ಬೆಂಗಳೂರಿನಲ್ಲಿ ಸೀಟ್ ಸಿಗದ ಕಾರಣ ಸಂಜನಾ ಅವರು ಶಿವಮೊಗ್ಗದಲ್ಲಿ ಮೆಡಿಕಲ್ ಇಂಜನಿಯರಿಂಗ್ ಅನ್ನು ಆಯ್ಕೆಮಾಡಿಕೊಂಡರು. ಸಂಜನಾ ಅವರು ಉಡುಪಿಯಲ್ಲಿರುವಾಗಲೇ ಆರೂರು ಜಗದೀಶ್ ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಅವಕಾಶವನ್ನು ನೀಡಿದರಂತೆ. ಆದರೆ ಸಂಜನಾ ಓದಿನ ಜೊತೆ ನಟನೆ ಬೇಡ ಅಂದುಕೊಂಡರಂತೆ. ಆದರೆ ಸಿಕ್ಕ ಅವಕಾಶವನ್ನು ಬಿಡಬಾರದು ಎನ್ನುವ ಕಾರಣಕ್ಕೆ ಪಾತ್ರವನ್ನು ಒಪ್ಪಿಕೊಂಡರು.