ಟ್ವಿಟರ್ ಗೆ ಸೆಡ್ಡು ಹೊಡೆಯಲು ಸಜ್ಜಾದ ಫೇಸ್ ಬುಕ್ ಒಡೆತನದ ಮೆಟಾ: ಹೊಸ ಆ್ಯಪ್ ಲಾಂಚ್

ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಟ್ವಿಟರ್ ಮೈಕ್ರೋ ಬ್ಲಾಗಿಂಗ್ ತಾಣವಾಗಿದೆ. ಇದರ ಹೊರತಾಗಿ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಗಳ ಸಹಾ ಸಾಕಷ್ಟು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಮೊದಲಿನ ಹಾಗೆ ಇಲ್ಲ. ಟ್ವಿಟರ್ ತನ್ನ ಬಳಕೆದಾರರಿಗೆ ಸಾಲು ಸಾಲು ಷರತ್ತುಗಳನ್ನು ವಿಧಿಸಿದೆ.‌ ಈಗ ಇದರ ಬೆನ್ನಲ್ಲೇ ಫೇಸ್ ಬುಕ್ ಒಡೆತನದ ಮೆಟಾ ತಾನು ಕೂಡಾ ಟ್ವಿಟರ್ ಮಾದರಿಯ ಮೈಕ್ರೋ ಬ್ಲಾಗಿಂಗ್ ಆ್ಯಪನ್ನು ಪರಿಚಯಿಸುವುದಾಗಿ ಹೇಳಿರುವ ವಿಚಾರ ದೊಡ್ಡ ಸುದ್ದಿಯಾಗಿದೆ.

ಈ ಹೊಸ ಆ್ಯಪ್ ಗೆ ಥ್ರೆಡ್ಸ್ ಎನ್ನುವ ಹೆಸರನ್ನು ಇಡಲಾಗಿದ್ದು, ಬಹುತೇಕ ಇದೇ ಗುರುವಾರ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇನ್ಸ್ಟಾಗ್ರಾಮ್ ಆಧಾರಿತ ಚಾಟಿಂಗ್ ಆ್ಯಪ್ ಇದಾಗಿರಲಿದ್ದು ಬಳಕೆದಾರರಿಗೆ ಪರಸ್ಪರ ಫಾಲೋ ಮಾಡುವ ಅವಕಾಶ ಸಹಾ ಇರಲಿದೆ. ಇನ್ಸ್ಟಾಗ್ರಾಮ್ ನಲ್ಲಿನ ಯೂಸರ್ ನೇಮ್ ಮತ್ತು ಐಡಿಯನ್ನು ಇಟ್ಟುಕೊಳ್ಳುವ ಅವಕಾಶವನ್ನು ಸಹಾ ಇದರಲ್ಲಿ ನೀಡಿರುವುದು ಬಹಳ ವಿಶೇಷ ಮತ್ತು ಬಹಳ ಆಸಕ್ತಿಕರ ಫೀಚರ್ ಎನಿಸಿಕೊಂಡಿಎ.

ಈ ಆ್ಯಪ್ ಮೊದಲಿಗೆ ಆ್ಯಪಲ್ ಸ್ಟೋರ್ ನಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದ್ದು, ಗೂಗಲ್ ಸ್ಟೋರ್ ನಲ್ಲಿ ಇದರ ಲಭ್ಯತೆ ಯಾವಾಗ ಎನ್ನುವ ಕುರಿತಾಗಿ ಇನ್ನು ಯಾವುದೇ ಮಾಹಿತಿಗಳು ಹೊರಗೆ ಬಂದಿಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ ಟ್ವಿಟರ್ ಚಂದಾದಾರಿಕೆ, ವೆರಿಫೈಡ್ ಬಳಕೆದಾರರಿಗೆ ಮಾತ್ರ ಟ್ವೀಟ್ ಡೆಕ್ ಬಳಕೆಗೆ ಅನುಮತಿ, ಟ್ವೀಟ್ ಓದುವುದಕ್ಕೆ ದೈನಂದಿನ ಮಿತಿ ಎಷ್ಟು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದ್ದು ಟ್ವಿಟರ್ ಬಳಕೆದಾರರಿಗೆ ಇದು ಅಸಮಧಾನವನ್ನು ಉಂಟು ಮಾಡಿದೆ.

Related posts

ಭಾರತದ 2 ನೇ ಅತಿದೊಡ್ಡ ಸಂಯೋಜಿತ ಉಕ್ಕು ಸ್ಥಾವರವಾಗಿದ್ದು, ಇದು 3,800 ಕ್ಕೂ ಹೆಚ್ಚು ನೇರ ಉದ್ಯೋಗ ನೀಡುವ ಕಾರ್ಖಾನೆ ಕರ್ನಾಟಕದ ಕೊಪ್ಪಳದಲ್ಲಿ ಸ್ಥಾಪನೆ.

ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ