ಕನ್ನಡ ಸಿನಿಮಾ ರಂಗದಲ್ಲಿ ಬೇರೆಲ್ಲಾ ನಟರಿಗಿಂತ ಸಿನಿಮಾ ಚಟುವಟಿಕೆಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುವ ನಟ ಯಾರೆಂದರೆ ಅನುಮಾನವೇ ಇಲ್ಲದೇ ನಟ ಶಿವರಾಜ್ ಕುಮಾರ್ ಎಂದು ಹೇಳಬಹುದು. ಈ ವರ್ಷ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ ಯಾವುದೂ ಇನ್ನೂ ತೆರೆಗೆ ಬಂದಿಲ್ಲ. ಅವರು ನಟಿಸಿರುವ ಘೋಸ್ಟ್ ಸಿನಿಮಾದ ಚಿತ್ರೀಕರಣ ಮುಗಿದಿದೆ. ಪ್ರಸ್ತುತ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯಗಳು ಭರದಿಂದ ನಡೆಯುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.
ಆಸಕ್ತಿಕರ ವಿಚಾರ ಏನಂದ್ರೆ ಇನ್ನೂ ಈ ಸಿನಿಮಾದ ಯಾವುದೇ ಅಧಿಕೃತ ಪೋಸ್ಟರ್ ಸಹಾ ಬಿಡುಗಡೆ ಆಗಿಲ್ಲ. ಅಲ್ಲದೇ ಘೋಸ್ಟ್ ಸಿನಿಮಾ ತಂಡವು ಶಿವಣ್ಣ ಅವರ ಜನ್ಮದಿನಕ್ಮೊಂದು ವಿಶೇಷ ಗಿಫ್ಟ್ ಕೊಡಬೇಕಂತ ಪ್ಲಾನ್ ಮಾಡಿದೆ ಎನ್ನಲಾಗಿದೆ. ಶಿವರಾಜ್ ಕುಮಾರ್ ಅವರು ತಮ್ಮ ಜನ್ಮದಿನದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಭರ್ಜರಿಯಾಗಿ ಜನ್ಮದಿನದ ಅಚರಣೆಗೆ ಸಿದ್ಧತೆಗಳನ್ನು ನಡೆಸ್ತಾ ಇದ್ದಾರೆ.
ಘೋಸ್ಟ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಚಿತ್ರ ತಂಡವು ಒಂದು ಟೀಸರ್ ಸಹಾ ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ. ಇದು ಖಂಡಿತ ಅಭಿಮಾನಿಗಳಿಗೆ ಖುಷಿ ನೀಡಲಿದೆ ಎನ್ನುವ ಮಾತನ್ನು ಚಿತ್ರದ ನಿರ್ದೇಶಕ ಶ್ರೀನಿ ಅವರು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ. ಸಿನಿಮಾ ತನ್ನ ಟೈಟಲ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರದ ಕುರಿತಾಗಿ ತಿಳಿಯೋದಕ್ಕೆ ಟೀಸರ್ ಬಿಡುಗಡೆವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ.
ಜುಲೈ 12 ಕ್ಕೆ ಕೆ ಜಿ ರಸ್ತೆಯ ಸಂತೋಷ್ ಥಿಯೇಟರ್ ನಲ್ಲಿ ಟೀಸರ್ ಬಿಡುಗಡೆ ಮಾಡಲು ಚರ್ಚೆ ನಡೆಸಲಾಗುತ್ತಿದೆ, ಈ ವಿಚಾರವಾಗಿ ಶಿವರಾಜ್ ಕುಮಾರ್ ಅವರ ಜೊತೆಗೆ ಸಹಾ ಮಾತುಕತೆ ನಡೆಸುತ್ತಿರುವುದಾಗಿ ನಿರ್ದೇಶಕ ಶ್ರೀನಿ ಅವರು ಹೇಳಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಲಿದೆ. ಶಿವರಾಜ್ ಕುಮಾರ್ ಅವರ ಅಭಿಮಾನಿ ಆಗಿರುವ ಶ್ರೀನಿ ಅವರು ತಮ್ಮ ಅಭಿಮಾನ ನಟನನ್ನು ಹೊಸ ರೀತಿಯಲ್ಲಿ ತೆರೆಯ ಮೇಲೆ ತರುವ ಪ್ರಯತ್ನ ಘೋಸ್ಟ್ ನಲ್ಲಿ ಮಾಡಿದ್ದಾರೆ ಎನ್ನಲಾಗಿದೆ.