ಸೀತಾ ರಾಮನ ಸಿಹಿಗೆ ಪ್ರೇಕ್ಷಕರು ಫಿದಾ: ಸಿಹಿ ತಾಯಿಗೆ ಕೊಟ್ರು ಅಭಿಮಾನಿಗಳು ಸಲಹೆ

ಝೀ ಕನ್ನಡ ವಾಹಿನಿಯಲ್ಲಿ ಸೀತಾರಾಮ ಸೀರಿಯಲ್ ಆರಂಭವಾಗಿ‌ ಕೆಲವೇ ದಿನಗಳಲ್ಲಿ ಮನೆ ಮನೆ ಮಾತಾಗಿದೆ. ಸೀರಿಯಲ್ ಶುರವಾದ ಮೊದಲನೇ ವಾರದಲ್ಲೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಸೀರಿಯಲ್ ನಲ್ಲಿ ಪ್ರಮುಖ ಆಕರ್ಷಣೆ ಸಿಹಿ ಪಾತ್ರ ಅನ್ನೋದ್ರಲ್ಲಿ ಅನುಮಾನ ಇಲ್ಲ. ಸೀರಿಯಲ್ ನ ಪ್ರೊಮೋ ಬಂದಾಗಲೇ ಪುಟ್ಟ ಹುಡುಗಿ ಸಿಹಿ ಪಾತ್ರ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಈಗ ಸೀರಿಯಲ್ ಆರಂಭದ ನಂತರ ಪ್ರೇಕ್ಷಕರಿಂದ ಸಿಹಿಗೆ ವಿಶೇಷ ಮೆಚ್ಚುಗೆ ದೊರೆತಿದೆ. ‌

ಸಿಹಿ ಪಾತ್ರಕ್ಕೆ ಡ್ರಾಮಾ ಜ್ಯೂನಿಯರ್ಸ್ ಶೋ ಖ್ಯಾತಿಯ ರಿತು ಸಿಂಗ್ ನೇಪಾಳ ಬಣ್ಣ ಹಚ್ಚಿದ್ದು, ಪುಟ್ಟ ಹುಡುಗಿಯ ಮಾತು, ನಟನೆ ಜನರ ಗಮನ ಸೆಳೆದಿದೆ. ಡ್ರಾಮಾ ಜ್ಯೂನಿಯರ್ಸ್ ನಲ್ಲಿ ರವಿಚಂದ್ರನ್ ಅವರ ಗರ್ಲ್ ಫ್ರೆಂಡ್ ಅಂತ ಹೇಳ್ತಾ, ಬಹಳ ಮುದ್ದಾಗಿ ಮಾತಾಡ್ತಿದ್ದ ರಿತು ಈಗ ಸೀತಾರಾಮ ಸೀರಿಯಲ್ ಪ್ರಮುಖ ಆಕರ್ಷಣೆಯಾಗಿ ಬದಲಾಗಿದ್ದಾಳೆ. ರಿತು ತಾಯಿ ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇನ್ನೂ 5 ವರ್ಷ ತುಂಬದ ರಿತು ಈಗ ಸೀರಿಯಲ್ ನಲ್ಲಿ ತನ್ನ ನಟನೆಗೆ, ಮುದ್ದು ಮಾತಿಗೆ ವೀಕ್ಷಕರು ಮನ ಸೋತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ನೀಡುವ ಜೊತೆಗೆ ನಿಮ್ಮ ಅಮ್ಮನಿಂದ ದೃಷ್ಟಿ ತೆಗೆಸಿಕೋ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಮಾಡಿದವರು, ಸಿಹಿ ಹೃದಯ ಮಾತ್ರ ಅಲ್ಲ, ನಮ್ಮ ಎಲ್ಲರ ಹೃದಯ ಗೆದ್ದು ಬಿಟ್ಟಿದಾರೆ,. ರಾಮ್ ಅವರ ಅಭಿನಯ ದಿನದಿಂದ, ದಿನಕ್ಕೆ ತುಂಬಾ ಇಷ್ಟ ಆಗ್ತಿದೆ. ಸೀತಾ ಕೋಪ ಕಮ್ಮಿ ಆಗಿದೆ, ಇವರ ಕ್ಯೂಟ್ ಮಾತುಕತೆ ಚೆಂದ ಆಗಿರುತ್ತೆ ಎಂದಿದ್ದಾರೆ.

ಮತ್ತೆ ಕೆಲವರು ಸಿಹಿಯ ಮಾತು ಕೂಡಾ ಸಿಹಿಯಷ್ಟೇ ಚೆನ್ನ ಎಂದಿದ್ದಾರೆ. ರಾಮನ ಮುಖದಲ್ಲಿ ನಗು ತರಿಸಿದ್ದಾಳೆ ಸಿಹಿ. ಇನ್ನು ಸೀತಾ ಹೃದಯ ಗೆಲ್ಲುವುದು ಒಂದು ಬಾಕಿ ಶ್ರೀರಾಮ, ಅದಕ್ಕೋಸ್ಕರ ಕಾಯ್ತಾ ಇದ್ದೇವೆ ಎಂದಿದ್ದಾರೆ ಸೀರಿಯಲ್ ನ ಪ್ರೇಕ್ಷಕರು. ಮತ್ತೆ ಕೆಲವರು ಸಿಹಿ ಪುಟ್ಟ ಮುದ್ದು ಮುದ್ದು ಮಾತು ಕೇಳುವುದೇ ಒಂದು ಖುಷಿ. ಶ್ರೀರಾಮ ಸಿಹಿಯ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತಿದೆ ಎಂದಿದ್ದಾರೆ.

Related posts

ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ ಬರಲಿದೆ”ಬೊಂಬಾಟ್ ಬಾಡೂಟ”

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಕಿರುತೆರೆಗೆ ಭರ್ಜರಿ ಕಮ್ ಬ್ಯಾಕ್ ಮಾಡಿದ 90ರ ದಶಕದ ಜನಪ್ರಿಯ ಬಾಲನಟಿ ಸಿಂಧೂ ರಾವ್

This website uses cookies to improve your experience. We'll assume you're ok with this, but you can opt-out if you wish. Read More